ಆರ್‌ ಎಸ್‌ ವಿಮಲ್‌ ನಿರ್ದೇಶನದ ‘ಸೂರ್ಯಪುತ್ರ ಕರ್ಣ’ ಮಲಯಾಳಂ 3D ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಐತಿಹಾಸಕ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಿಕ್ರಂ ಅಭಿನಯಿಸುತ್ತಿದ್ದಾರೆ.

ವಿಕ್ರಮ್ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ‘ಸೂರ್ಯಪುತ್ರ ಕರ್ಣ’ ಮಲಯಾಳಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ಆರ್ ಎಸ್ ವಿಮಲ್ ನಿರ್ದೇಶಿಸಿದ್ದಾರೆ. ಈ ಐತಿಹಾಸಿಕ ಚಿತ್ರದಲ್ಲಿ ಸೂರ್ಯಪುತ್ರನಾಗಿ ಕುಂತಿಯ ನಿರ್ಲಕ್ಷಕ್ಕೆ ಒಳಗಾಗಿ ನದಿಯಲ್ಲಿ ತೇಲಿಬಿಟ್ಟ ಶಿಶುವು ಸಮಾಜದಲ್ಲಿ ಸೂತಪುತ್ರನೆಂಬ ಕಳಂಕ ಹೊತ್ತು ದುರ್ಯೋಧನನಿಗೆ ಆಪ್ತ ಸ್ನೇಹಿತನಾಗಿ ಅಂಗರಾಜನೆಂದು ಕೀರ್ತಿ ಹೊಂದುವ ಕರ್ಣನ ಜೀವನ ಚರಿತ್ರೆಯ ಚಿತ್ರಣ ಇರಲಿದೆ. ಟೀಸರ್‌ನಲ್ಲಿ ಎರಡು ಬೃಹತ್ ಪ್ರತಿಸ್ಪರ್ಧಿ ಸೈನ್ಯಗಳೊಂದಿಗೆ ಯುದ್ಧಭೂಮಿಯಲ್ಲಿ ಕ್ಷಣಗಳನ್ನು ತೋರಿಸಲಾಗಿದೆ. ಕಾಲಾಳುಗಳು, ಅಶ್ವದಳ ಮತ್ತು ಯುದ್ಧದ ಆನೆಗಳು, ಸಾವಿನೊಂದಿಗೆ ಹೋರಾಡಲು ಸಿದ್ಧವಾಗಿವೆ. ವೀರ ಸೂರ್ಯಪುತ್ರನ ಕರ್ಣನನ್ನು ಹೊತ್ತ ದೈತ್ಯಾಕಾರದ ರಥವೂ ಇದೆ. ಕರ್ಣನ ಸಾಟಿಯಿಲ್ಲದ ಯುದ್ಧದ ಪರಾಕ್ರಮವನ್ನು ಪ್ರದರ್ಶಿಸಿದೆ. ಒಂದೇ ಒಂದು ಬಾಣವನ್ನು ಪ್ರಯೋಗಿಸುವ ಮೂಲಕ ಅವನು ಇಡೀ ಪ್ರತಿಸ್ಪರ್ಧಿ ಸೈನ್ಯವನ್ನು ತಡೆದು ನಿಲ್ಲಿಸುತ್ತಾನೆ. United Film Kingdom ಬ್ಯಾನರ್‌ ಅಡಿಯಲ್ಲಿ ಸಿನಿಮಾ ತಯಾರಾಗಿದೆ. ಚಿತ್ರರಂಗದ ಉಳಿದ ಪಾತ್ರವರ್ಗವನ್ನು ಸದ್ಯದಲ್ಲೇ ಬಹಿರಂಗಪಡಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

LEAVE A REPLY

Connect with

Please enter your comment!
Please enter your name here