ಗ್ರೇಸ್‌ ಆಂಟನಿ ಮತ್ತು ಶ್ರೀನಾಥ್‌ ಭಾಸಿ ನಟಿಸಿರುವ ‘ಪಡಚೋನೆ ಇಂಗಳು ಕಾಥೋಳೀ’ ಮಲಯಾಳಂ ಚಿತ್ರದ OTT ಟ್ರೈಲರ್‌ ಬಿಡುಗಡೆಯಾಗಿದೆ. ಬಿಜಿತ್‌ ಬಾಲಾ ನಿರ್ದೇಶನದ ಸಿನಿಮಾ ಇಂದಿನಿಂದ (ಆಗಸ್ಟ್‌ 22) Saina Playನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಬಿಜಿತ್‌ ಬಾಲಾ ನಿರ್ದೇಶನದ ‘ಪಡಚೋನೆ ಇಂಗಳು ಕಾಥೋಳೀ’ ಮಲಯಾಳಂ ಕಾಮಿಡಿ ಸಿನಿಮಾದ OTT ಟ್ರೈಲರ್‌ ಬಿಡುಗಡೆಯಾಗಿದೆ. ಈ ಚಿತ್ರವು ಕಳೆದ ವರ್ಷ ನವೆಂಬರ್ 22ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾವು ಉತ್ತರ ಕೇರಳ ಪ್ರದೇಶದ ಸಮಾಜದಲ್ಲಿ ಹಾಗೂ ರಾಜಕೀಯ ಪಕ್ಷವೊಂದರಲ್ಲಿ ಸಂಭವಿಸುವ ಹಾಸ್ಯದ ಕಥಾಹಂದರ. ಈ ಚಿತ್ರವು ಶಾಲಾ ಶಿಕ್ಷಕ ದಿನೇಸನ್ ಜೀವನದ ಸುತ್ತ ಸುತ್ತುತ್ತದೆ. ಕಮ್ಯುನಿಸ್ಟ್ ಮೌಲ್ಯಗಳಿಗೆ ಬದ್ಧನಾಗಿರುವ ಇವನು ಉತ್ತರ ಕೇರಳದ ಹಳ್ಳಿಯೊಂದರ ನಿವಾಸಿ. ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಏಕಸಮಾನತೆ ಇರಲೆಂದು ಸಮವಸ್ತ್ರ ಯೋಜನೆಯನ್ನು ಜಾರಿಗೆ ತರುತ್ತಾನೆ. ಆದರೆ ಜ್ಯೋತಿಷ್ಯವನ್ನು ನಂಬುವ ಹುಡುಗಿಯೊಬ್ಬಳು ಪ್ರೇಯಸಿಯಾಗಿ ಇವನ ಜೀವನದಲ್ಲಿ ಬಂದ ಮೇಲೆ ದಿನೇಸನ್ ಬದುಕು ತಿರುವು ಪಡೆಯುತ್ತದೆ. ಈ ಎಲ್ಲಾ ಅಂಶಗಳನ್ನು ಹಾಸ್ಯದ ಮೂಲಕ ಸಿನಿಮಾದಲ್ಲಿ ತೋರಿಸಲಾಗಿದೆ. ಜೋಸೆಕುಟ್ಟಿ ಮದತಿಲ್ ಮತ್ತು ರಂಜಿತ್ ಮಾನಂಬರಕ್ಕಾಟ್ ನಿರ್ಮಿಸಿರುವ ಚಿತ್ರದಲ್ಲಿ ಸನ್ನಿ ವೇನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರದೀಪ್ ಕುಮಾರ್ ಕುವುಮ್ತಾರ ಚಿತ್ರಕಥೆ ಬರೆದಿರುವ ಚಿತ್ರಕ್ಕೆ ಶಾನ್ ರೆಹಮಾನ್ ಸಂಗೀತ ನೀಡಿದ್ದಾರೆ. ‘ರೋರ್‌ಷಾಖ್’, ‘ಇಷ್ಕ್’ ಮತ್ತು ‘ತೊಂಡಿ ಮುತಾಳು ದೃಕ್ಷಾಕ್ಷಿಯುಂ’ ಚಿತ್ರಗಳಿಂದ ಖ್ಯಾತಿ ಗಳಿಸಿರುವ ಕಿರಣ್ ದಾಸ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಆಗಸ್ಟ್‌ 22ರಿಂದ Saina Playನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Previous article‘Friday Night Plan’ ಟ್ರೈಲರ್‌ | ಸೆಪ್ಟೆಂಬರ್‌ 1ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ ಸಿನಿಮಾ
Next articleಸಂದೇಶದ ಆಶಯಕ್ಕೆ ಧಕ್ಕೆ ತರುವ ನಿರೂಪಣಾ ಶೈಲಿ

LEAVE A REPLY

Connect with

Please enter your comment!
Please enter your name here