ಕಪಾಳಮೋಕ್ಷ ಘಟನೆಗೆ ಸಂಬಂಧಿಸಿದಂತೆ Will Smith ಅವರಿಗೆ ನಿಷೇಧದ ಬಿಸಿ ತಟ್ಟಿದೆ. ಮುಂದಿನ ಹತ್ತು ವರ್ಷಗಳ ಕಾಲ ಅವರು ಆಸ್ಕರ್‌ ಸಮಾರಂಭದಲ್ಲಿ ಪಾಲ್ಗೊಳ್ಳಕೂಡದು ಎಂದು Academy of Motion Pictures ಹೇಳಿದೆ.

ಇತ್ತೀಚೆಗೆ ನಡೆದ ಆಸ್ಕರ್‌ ಸಮಾರಂಭದಲ್ಲಿ ನಟ Will Smith ಅವರು ಕಮೆಡಿಯನ್‌ Chris Rockಗೆ ಕಪಾಳಮೋಕ್ಷ ಮಾಡಿದ್ದರು. ಹಾಲಿವುಡ್‌ ವಲಯದಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ Academy of Motion Picture and Arts and Sciences ವಿಲ್‌ ಸ್ಮಿತ್‌ರನ್ನು ಹತ್ತು ವರ್ಷಗಳ ಕಾಲ ಆಸ್ಕರ್‌ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿದೆ. ಹಾಲಿವುಡ್‌ನ ಪ್ರಮುಖ ಚಿತ್ರಸಂಸ್ಥೆಗಳು ಆಯೋಜಿಸುವ ಸಮಾರಂಭದಲ್ಲೂ ಮುಂದಿನ ಹತ್ತು ವರ್ಷಗಳ ಕಾಲ ವಿಲ್‌ ಸ್ಮಿತ್‌ ಪಾಲ್ಗೊಳ್ಳುವಂತಿಲ್ಲ. ‘King Richard’ ಚಿತ್ರಕ್ಕಾಗಿ ಮೊನ್ನೆ ಅವರು ಪಡೆದಿರುವ ‘ಅತ್ಯುತ್ತಮ ನಟ’ ಆಸ್ಕರ್‌ ಪ್ರಶಸ್ತಿಯನ್ನು ವಾಪಸು ಪಡೆಯಬೇಕೆ ಎನ್ನುವ ಬಗ್ಗೆ ಅಕಾಡೆಮಿ ಇನ್ನೂ ನಿರ್ಧರಿಸಿಲ್ಲ.

“2022ರ ಏಪ್ರಿಲ್‌ 8ರಿಂದ ಅನ್ವಯಿಸುವಂತೆ ಮುಂದಿನ 10 ವರ್ಷಗಳ ಕಾಲ ಅಕಾಡೆಮಿಯ ಯಾವುದೇ ಇವೆಂಟ್‌ಗಳಲ್ಲಿ ನೇರವಾಗಿ ಇಲ್ಲವೇ ವರ್ಚ್ಯುಯೆಲ್‌ ಆಗಿ Will Smith ಪಾಲ್ಗೊಳ್ಳುವಂತಿಲ್ಲ ಎಂದು ಬೋರ್ಡ್‌ ನಿರ್ಧರಿಸಿದೆ. ಅಕಾಡೆಮಿ ಸಮಾರಂಭವಲ್ಲದೆ ಹಾಲಿವುಡ್‌ನ ಪ್ರಮುಖ ಇವೆಂಟ್‌ಗಳಲ್ಲಿಯೂ ಅವರು ಪಾಲ್ಗೊಳ್ಳಕೂಡದು” ಎಂದಿದ್ದಾರೆ ಅಕಾಡೆಮಿ ಅಧ್ಯಕ್ಷ ಡೇವಿಡ್‌ ರುಬಿನ್‌ ಮತ್ತು CEO ಡಾನ್‌ ಹಡ್ಸನ್‌ ಹೇಳಿದ್ದಾರೆ. ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್‌ ಸಮಾರಂಭದಲ್ಲಿ ಕಮೆಡಿಯನ್‌ Chris Rock ಅವರು Will Smith ಪತ್ನಿ Jada Pinkett Smith ಬಗ್ಗೆ ತಮಾಷೆ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ವಿಲ್‌ ಸ್ಮಿತ್‌ ವೇದಿಕೆಗೆ ತೆರಳಿ ಕ್ರಿಸ್‌ ರಾಕ್‌ ಕೆನ್ನೆಗೆ ಭಾರಿಸಿದ್ದರು.

LEAVE A REPLY

Connect with

Please enter your comment!
Please enter your name here