ನಟ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸಿನಿಮಾ ’31 DAYS’. ಹೈವೋಲ್ಟೇಜ್ ಲವ್ ಸ್ಟೋರಿ ಎಂಬ ಅಡಿ ಬರಹವಿರುವ ಈ ಚಿತ್ರ ವಿಭಿನ್ನವಾದ ಟೈಟಲ್‌ನಿಂದಲೇ ಸದ್ದು ಮಾಡಿತ್ತು. ಸದ್ಯ ಚಿತ್ರತಂಡ ನೂತನ ಪೋಸ್ಟರ್‌ ಬಿಡುಗಡೆಮಾಡಿದೆ.

‘ಜಾಲಿಡೇಸ್‌’ ಚಿತ್ರದ ಖ್ಯಾತಿಯ ನಟ ನಿರಂಜನ್‌ ಶೆಟ್ಟಿ ಅಭಿನಯದ ’31 DAYS’ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಸ್ಟೈಲಿಶ್‌ ಲುಕ್‌ನಲ್ಲಿರುವ ನಾಯಕ, ನಾಯಕಿಯನ್ನು ಬೆನ್ನ ಮೇಲೆ ಹೊತ್ತು ‘ಕೂಸುಮರಿ’ ಮಾಡುತ್ತಿದ್ದಾರೆ. ಈ ಸಿನಿಮಾ ಅನೌನ್ಸ್‌ ಆದ ನಂತರದಲ್ಲಿ ಚಿತ್ರದ ಫಸ್ಟ್‌ಲುಕ್ ಅನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ ಚಿತ್ರಸಂತೆಯಲ್ಲಿ ಅನಾವರಣಗೊಳಿಸಲಾಗಿತ್ತು. ಅದರಲ್ಲೂ 46 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ದಂಪತಿ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹೈವೋಲ್ಟೇಜ್ ಲವ್ ಸ್ಟೋರಿ ಎಂಬ ಅಡಿ ಬರಹವಿರುವ ಈ ಸಿನಿಮಾದ ಪೋಸ್ಟರ್‌ ಸಿನಿಪ್ರಿಯರ ಗಮನ ಸೆಳೆದಿತ್ತು.

ಪ್ರಸ್ತುತ ಜನರೇಷನ್‌ನಲ್ಲಿ ನಡೆಯವ ಪ್ರೇಮ ಕಥಾನಕವೇ ಈ ’31 DAYS’ ಸಿನಿಮಾ. 31 ದಿನಗಳಲ್ಲಿ ನಡೆಯುವ ಹೈವೋಲ್ಟೇಜ್ ಲವ್ ಸ್ಟೋರಿ ಇದಾಗಿದೆ. ಪ್ರಸ್ತುತ ಈ ಸಿನಿಮಾ ರೀ ರೆಕಾರ್ಡಿಂಗ್ ಹಂತದಲ್ಲಿದ್ದು, ಜೂನ್ ಅಥವಾ ಜುಲೈ ತಿಂಗಳಲ್ಲಿ ರಿಲೀಸ್‌ ಆಗಲಿದೆ. ನಾಯಕ ನಿರಂಜನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. ಎನ್‌ಸ್ಟಾರ್‌ ಬ್ಯಾನರ್‌ ಅಡಿಯಲ್ಲಿ ನಾಗವೇಣಿ ಎನ್‌ ಶೆಟ್ಟಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ರಾಜ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿ ಮನೋಹರ್ ಅವರ ಸಂಗೀತ ನಿರ್ದೇಶನವಿದೆ. ವಿನುತ್ ಕೆ ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ಸನತ್ ಅವರ ಸಂಕಲನ ಈ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here