ಮೊನ್ನೆಯಷ್ಟೇ ಘೋಷಣೆಯಾದ ಶಿವರಾಜಕುಮಾರ್‌ ನಟನೆಯ ನೂತನ PAN ಇಂಡಿಯಾ ಸಿನಿಮಾಗೆ ಸ್ಯಾಮ್‌ ಸಿ ಎಸ್‌ ಸಂಗೀತ ಸಂಯೋಜಿಸಲಿದ್ದಾರೆ. ಸೂಪರ್‌ ಹಿಟ್‌ ‘ವಿಕ್ರಂ ವೇದ’ ತಮಿಳು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಸ್ಯಾಮ್‌ ಈ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ.

ಕಳೆದ ವಾರ ಶಿವರಾಜಕುಮಾರ್‌ ಹುಟ್ಟುಹಬ್ಬದಂದು ನಟನ ಹಲವು ನೂತನ ಸಿನಿಮಾಗಳು ಘೋಷಣೆಯಾಗಿವೆ. ಈ ಪಟ್ಟಿಯಲ್ಲಿ ‘SCFC01’ ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆಯಾದ ಚಿತ್ರವೂ ಒಂದು. ಸುಧೀರ್ ಚಂದ್ರ ಪದ್ರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಕಾರ್ತಿಕ್ ಅದ್ವೈತ್ ನಿರ್ದೇಶಿಸಲಿದ್ದಾರೆ. ಇದೀಗ ಈ ಸಿನಿಮಾಗೆ ಸ್ಯಾಮ್‌ ಸಿ ಎಸ್‌ ಅವರು ಸಂಗೀತ ಸಂಯೋಜಿಸುವುದೆಂದು ತಿಳಿದುಬಂದಿದೆ. ಬ್ಲಾಕ್‌ ಬಸ್ಟರ್‌ ‘ವಿಕ್ರಂ ವೇದ’ ಸೇರಿದಂತೆ ಹಲವು ಯಶಸ್ವೀ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಸ್ಯಾಮ್‌ ಶಿವರಾಜಕುಮಾರ್‌ ಚಿತ್ರದೊಂದಿಗೆ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಮೂಲಗಳ ಪ್ರಕಾರ ಇದೊಂದು ಆಕ್ಷನ್‌ – ಥ್ರಿಲ್ಲರ್‌ ಜಾನರ್‌ ಸಿನಿಮಾ. ಮೂಲ ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ. ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತನಾಮ ಕಲಾವಿದರು ನಟಿಸುವ ಸಾಧ್ಯತೆಗಳಿವೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ಮಾಪಕರು.

LEAVE A REPLY

Connect with

Please enter your comment!
Please enter your name here