ವಿನಯ್ ಪಾಠಕ್ ಮತ್ತು ರಣವೀರ್ ಶೌರಿ ಅಭಿನಯದ ‘420 IPC’ ಕೋರ್ಟ್‌ರೂಂ ಡ್ರಾಮಾ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ZEE5 ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಡಿಸೆಂಬರ್‌ 17ರಿಂದ ಸರಣಿ ಸ್ಟ್ರೀಮ್ ಆಗಲಿದೆ.

ನಿರ್ದೇಶಕ ಮನೀಷ್ ಗುಪ್ತಾ ಈ ಹಿಂದೆ ಮರ್ಡರ್ ಮಿಸ್ಟರಿ ಕತೆಗಳನ್ನು ತೆರೆಗೆ ನಿರೂಪಿಸಿದ್ದರು. ಈ ಬಾರಿ ಕೋರ್ಟ್‌ ರೂಂ ಡ್ರಾಮಾ ಕತೆಯೊಂದಿಗೆ ಮರಳಿದ್ದಾರೆ. ಅವರ ನಿರ್ದೇಶನದಲ್ಲಿ ವಿನಯ್ ಪಾಠಕ್ ಮತ್ತು ರಣವೀರ್ ಶೌರಿ ಅಭಿನಯಿಸಿರುವ ಹಿಂದಿ ಸಿನಿಮಾ ‘420 IPC’ ಟ್ರೈಲರ್ ಬಿಡುಗಡೆಯಾಗಿದೆ. ಹಣಕಾಸಿನ ವಿಚಾರದಲ್ಲಿ ಆರೋಪ ಎದುರಿಸುವ ಚಾರ್ಟರ್ಡ್ ಅಕೌಂಟೆಂಟ್‌ ಬನ್ಸಿ ಕೇಸ್ವಾನಿ (ವಿನಯ್ ಪಾಠಕ್‌) ಸುತ್ತ ಹೆಣೆದಿರುವ ಕೋರ್ಟ್‌ ರೂಂ ಡ್ರಾಮಾ ಇದು. ಅವರ ಪರ ವಾದ ಮಾಡುವ ಪಬ್ಲಿಕ್ ಪ್ರಾಸಿಕ್ಯೂಟರ್‌ ಪಾತ್ರ ರೋಹನ್‌ (ರಣವೀರ್ ಶೌರಿ). ನಟಿ ಗುಲ್ ಪನಾಗ್‌ ಅವರು ವಿನಯ್ ಪಾಠಕ್ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ತಿರುವುಗಳಿದ್ದು, ವೀಕ್ಷಕರ ಕುತೂಹಲ ಕಾಯ್ದುಕೊಳ್ಳುವ ಕತೆ ಎನ್ನುವುದನ್ನು ಟ್ರೈಲರ್‌ ಹೇಳುತ್ತದೆ.

ZEE5 ಸ್ಟುಡಿಯೋಸ್‌ ಮತ್ತು ಕೈರಿಯಸ್ ಡಿಜಿಟಲ್ ಪಿ.ಎಲ್‌. ನಿರ್ಮಾಣವಿದು. ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ಮನೀಷ್‌ ಗುಪ್ತಾ, “ಹಿಂದೆ ನಾನು ಮರ್ಡರ್‌ ಮಿಸ್ಟರಿ, ಸುಳ್ಳು ಅತ್ಯಾಚಾರದ ಆರೋಪದ ಕತೆಗಳ ಸಿನಿಮಾಗಳನ್ನು ಮಾಡಿದ್ದೆ. ಈ ಬಾರಿ ವಯಲೆನ್ಸ್‌ ಬೇಡ ಎನಿಸಿದ್ದರಿಂದ ಕೋರ್ಟ್ ರೂಂ ಡ್ರಾಮಾ ಕತೆಯನ್ನು ಆಯ್ಕೆ ಮಾಡಿಕೊಂಡೆ. ಸೆಕ್ಷನ್‌ 375 ಕುರಿತಂತೆ ಮೂರು ವರ್ಷ ಸುದೀರ್ಘ ಸಂಶೋಧನೆ ನಡೆಸಿ ಈ ಸಿನಿಮಾಗೆ ಚಿತ್ರಕಥೆ ಸಿದ್ಧಪಡಿಸಿದ್ದೇನೆ” ಎಂದಿದ್ದಾರೆ. ಕಿರುತೆರೆ ನಟ ರೋಹನ್ ಮೆಹ್ರಾ ಈ ಸಿನಿಮಾದೊಂದಿಗೆ ಡಿಜಿಟಲ್ ಡೆಬ್ಯೂಟ್‌ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here