ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಮಾಣದ ‘ಚುಂಬಕ್‌’ ಮರಾಠಿ ಸಿನಿಮಾ SonyLIVನಲ್ಲಿ ನವೆಂಬರ್‌ 12ರಿಂದ ಸ್ಟ್ರೀಮ್ ಆಗಲಿದೆ. ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾದ ಅತ್ಯುತ್ತಮ ನಟನೆಗೆ ಸ್ವಾನಂದ್ ಕಿರ್ಕಿರೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು.

ಹಿಂದಿ ನಟ ಅಕ್ಷಯ್ ಕಮಾರ್ ಸದ್ಯ ‘ಸೂರ್ಯವಂಶಿ’ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಮಧ್ಯೆ ಅವರ ನಿರ್ಮಾಣದ ಯಶಸ್ವೀ ಮರಾಠಿ ಸಿನಿಮಾ ‘ಚುಂಬಕ್‌’ SonyLIVನಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರದ ಟ್ರೈಲರ್‌ ಅನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಈ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ನಿರ್ಮಿಸಿರುವ ಹೆಮ್ಮೆ ನನ್ನದು” ಎನ್ನುವ ಸಂದೇಶ ಟ್ವೀಟ್ ಮಾಡಿದ್ದಾರೆ. 2018ರಲ್ಲಿ ಸಿನಿಮಾ ತೆರೆಕಂಡಿತ್ತು. ಈ ಚಿತ್ರವೀಗ ನಾಳೆಯಿಂದ (ನವೆಂಬರ್‌ 12) SonyLIVನಲ್ಲಿ ಸ್ಟ್ರೀಮ್ ಆಗಲಿದೆ.

‘ಚುಂಬಕ್‌’ ಚಿತ್ರದಲ್ಲಿ ಸ್ವಾನಂದ್‌ ಕಿರ್ಕಿರೆ, ಸಾಹಿಲ್ ಜಾಧವ್‌, ಸಂಗ್ರಾಮ್ ದೇಸಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಧ್ಯವಯಸ್ಸಿನ ವ್ಯಕ್ತಿ ಮತ್ತು ಇಬ್ಬರು ಟೀನೇಜ್ ಹುಡುಗರ ಈ ಸಿನಿಮಾ ವಿಶಿಷ್ಟ ಕತೆ ಮತ್ತು ಆಪ್ತ ನಿರೂಪಣೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಂದೀಪ್ ಮೋದಿ ನಿರ್ದೇಶನದ ಸಿನಿಮಾದಲ್ಲಿ ಉತ್ತಮ ನಟನೆಗಾಗಿ ಸ್ವಾನಂದ್ ಕಿರ್ಕಿರೆ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದರು. ಮರಾಠಿ ಮತ್ತು ಹಿಂದಿ ಸಿನಿಮಾ ಚಿತ್ರಸಾಹಿತಿ ಸ್ವಾನಂದ್‌ ಕಿರ್ಕಿರೆ ಅವರು ಉತ್ತಮ ಗೀತೆ ರಚನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

Previous articleಯಶ್ ಫೋಟೋಶೂಟ್; ಟ್ವಿಟರ್‌ನಲ್ಲಿ ಫೋಟೊ ಹಂಚಿಕೊಂಡ ಸ್ಟಾರ್‌ ಫೋಟೊಗ್ರಾಫರ್ ದಬೂ ರತ್ನಾನಿ
Next articleTSRTC ಇಮೇಜ್‌ಗೆ ಧಕ್ಕೆ; ನಟ ಅಲ್ಲು ಅರ್ಜುನ್‌ಗೆ ಲೀಗಲ್ ನೋಟೀಸ್ ಸಾಧ್ಯತೆ

LEAVE A REPLY

Connect with

Please enter your comment!
Please enter your name here