ನಾಗಶೌರ್ಯ ಅಭಿನಯದ ‘ಲಕ್ಷ್ಯ’ ತೆಲುಗು ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಇಲ್ಲಿಯವರೆಗೆ ಆರ್ಚರಿ ಕುರಿತ ಸ್ಟೋರಿ ತೆರೆಗೆ ಅಳವಡಿಸಲ್ಪಟ್ಟಿರಲಿಲ್ಲ. ‘ಲಕ್ಷ್ಯ’ದಲ್ಲಿ ಆರ್ಚರಿ ಕತೆಯಿದೆ. ಸಂತೋಷ್ ಜಗರ್ಲಪುಡಿ ನಿರ್ದೇಶನದ ಸಿನಿಮಾ ಡಿಸೆಂಬರ್‌ 10ರಂದು ತೆರೆಕಾಣಲಿದೆ.

ಇತ್ತೀಚೆಗೆ ಭಾರತದ ಪ್ರಾದೇಷಿಕ ಭಾಷೆಗಳಲ್ಲಿ ಸ್ಪೋರ್ಟ್ಸ್‌ – ಡ್ರಾಮಾ ಸಿನಿಮಾಗಳು ಆಗಿಂದಾಗ್ಗೆ ತೆರೆ ಮೇಲೆ ಕಾಣಿಸುತ್ತಲೇ ಇವೆ. ಆದರೆ ಅರ್ಚರಿ ಕುರಿತಂತೆ ಇಲ್ಲಿಯವರೆಗೆ ಸಿನಿಮಾ ಆಗಿರಲಿಲ್ಲ. ನಾಗಶೌರ್ಯ ನಟನೆಯ ‘ಲಕ್ಷ್ಯ’ ಈ ಬಗ್ಗೆ ಬೆಳಕು ಚೆಲ್ಲಲಿದೆ. ನಟ ವೆಂಕಟೇಶ್‌ ಇಂದು ಚಿತ್ರದ ಟ್ರೈಲರ್‌ ಬಿಡುಗಡೆಗೊಳಿಸಿದ್ದಾರೆ. ನಿರ್ದೇಶಕ ಸಂತೋಷ್ ಜಗರ್ಲಪುಡಿ ಚಿತ್ರದಲ್ಲಿ ಆರ್ಚರ್‌ ಕತೆಯನ್ನು ಹೇಳಲು ಹೊರಟಿದ್ದಾರೆ. ಟ್ರೈಲರ್ ನೋಡಿದರೆ ಇದು ರೆಗ್ಯುಲರ್ ಸ್ಪೋರ್ಟ್ಸ್‌ ಡ್ರಾಮಾಗಿಂತ ಭಿನ್ನವಾಗಿ ತೋರುತ್ತದೆ. ಕ್ರೀಡಾಳುವಿನ ಏಳುಬೀಳಿನ ಸ್ಫೂರ್ತಿದಾಯಕ ಕತೆ ಇದ್ದಂತಿದೆ. ನಾಗಶೌರ್ಯ ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರಕ್ಕಾಗಿ ಎಯ್ಟ್ ಪ್ಯಾಕ್‌ ಆಬ್ಸ್‌ ಮಾಡಿದ್ದಾರೆ. ‘ರೊಮ್ಯಾಂಟಿಕ್‌’ ಸಿನಿಮಾ ಖ್ಯಾತಿಯ ಕೇತಿಕಾ ಶರ್ಮಾ ಚಿತ್ರದ ಹಿರೋಯಿನ್‌. ಜಗಪತಿ ಬಾಬು, ಸಚಿನ್ ಖೇಡೇಕರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಡಿಸೆಂಬರ್‌ 10ರಂದು ಥಿಯೇಟರ್‌ಗೆ ಬರುತ್ತಿದೆ.

Previous articleವೆಬ್ ಸರಣಿಯಾಗಿ ‘ಬಿಸ್ಕೆಟ್ ಕಿಂಗ್’ ರಾಜನ್ ಪಿಳ್ಳೈ ಕತೆ; ಪೃಥ್ವಿರಾಜ್ ನಟಿಸಿ, ನಿರ್ದೇಶಿಸಲಿರುವ ಸೀರೀಸ್
Next articleಟ್ರೈಲರ್ | ಕೋರ್ಟ್‌ರೂಂ ಡ್ರಾಮಾ ‘420 IPC’; ZEE5 ನಲ್ಲಿ ಡಿಸೆಂಬರ್ 17ರಿಂದ

LEAVE A REPLY

Connect with

Please enter your comment!
Please enter your name here