‘ಮಡ್ಡಿ’ ಇಂಟರ್‌ನ್ಯಾಷನಲ್‌ ಸಿನಿಮಾ ಎಂದೇ ಹೇಳಬಹುದು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ಅಡ್ವೆಂಚರ್‌ ಜಾನರ್‌ನಲ್ಲಿ ಹೊಸ ಭಾಷ್ಯ ಬರೆಯುವ ಸೂಚನೆ ಇದೆ.

ಅನುಭವಿ ತಂತ್ರಜ್ಞರ ಜೊತೆಗೂಡಿ ಹೊಸಬರು ಸಿದ್ಧಪಡಿಸಿರುವ ಸಿನಿಮಾ ‘ಮಡ್ಡಿ’ ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈ ಸಿನಿಮಾ ಇದೇ ಡಿಸೆಂಬರ್ 10ಕ್ಕೆ ಬಿಡುಗಡೆಗೊಳ್ಳಲಿದೆ. ಪಿಕೆ7 ಪ್ರೊಡಕ್ಷನ್ಸ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ನಿರ್ಮಾಣದಲ್ಲಿ ಡಾ. ಪ್ರಗ್ಬಲ್ ದಾಸ್ ನಿರ್ದೇಶನದ ಮೊದಲ ಹೆಜ್ಜೆ. ಈ ಚಿತ್ರದ ಮೊದಲ ಟೀಸರ್ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆ ಆಗಿದ್ದು, ಸಿನಿಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಬಿಡುಗಡೆಯ ಹೊಸ್ತಿಲಲ್ಲಿದೆ. ಕಳೆದ ಐದು ವರ್ಷಗಳ ಕಾಲ ಮಡ್ ರೇಸ್​ ಬಗ್ಗೆ ಅಧ್ಯಯನ ನಡೆಸಿ ಈ ಸಿನಿಮಾ ಮಾಡಿರುವ ಪ್ರಗಭಲ್​, ಎರಡು ತಂಡಗಳ ನಡುವಿನ ಸ್ಪರ್ಧೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಅಡ್ವೆಂಚರಸ್​ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಶ್ರಣ ಮಾಡಿದ್ದಾರಂತೆ. ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ರೂಪಿಸಿದ್ದಾರೆ.

ಚಿತ್ರದ ಕಲಾವಿದರು ಯಾವುದೇ ಡ್ಯೂಪ್ ಬಳಸದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದು ವಿಶೇಷ. ಇವರೆಲ್ಲರೂ ಮಡ್‌ ರೇಸ್‌ನಲ್ಲಿ ಪರಣತಿ ಹೊಂದಿದವರು. ಒಟ್ಟು ಹದಿಮೂರು ಕ್ಯಾಮರಾಗಳನ್ನು ಶೂಟಿಂಗ್‌ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಸ್ಯಾನ್​ ಲೋಕೇಶ್​ ಸಂಕಲನದ ಜವಾಬ್ದಾರಿ ಹೊತ್ತಿದ್ದು, ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಲಿವುಡ್​ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ.ರತೀಶ್​ ಈ ಸಿನಿಮಾಗೆ ಕ್ಯಾಮರಾಮನ್. ಕಲರಿಸ್ಟ್​ ಆಗಿ ರಂಗ ಕೆಲಸ ಮಾಡಿದ್ದಾರೆ. ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರೀಶ್ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here