ಬೋಯಪಾಟಿ ಶ್ರೀನು ನಿರ್ದೇಶನದ ‘ಸ್ಕಂದ’ ತೆಲುಗು ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ. ಲವರ್‌ ಬಾಯ್‌ ಇಮೇಜಿನ ರಾಮ್‌ ಪೋತಿನೇನಿ ಮೊದಲ ಬಾರಿ ಇಲ್ಲಿ ಆಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಶ್ರೀಲೀಲಾ ಚಿತ್ರದ ನಾಯಕಿ.

ರಾಮ್ ಪೋತಿನೇನಿ ಮತ್ತು ಕನ್ನಡತಿ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಸ್ಕಂದ’ ತೆಲುಗು ಸಿನಿಮಾ ಸೆಪ್ಟೆಂಬರ್‌ 28ರಂದು ತೆರೆಕಾಣುತ್ತಿದೆ. ಬೋಯಪಾಟಿ ಶ್ರೀನು ನಿರ್ದೇಶಿಸಿರುವ ಈ ಆಕ್ಷನ್‌ ಎಂಟರ್‌ಟೇನರ್‌ ಚಿತ್ರದ ಬಿಡುಗಡೆ ದಿನಾಂಕ ಸೆಪ್ಟೆಂಬರ್‌ 15 ಎಂದು ನಿಗದಿಯಾಗಿತ್ತು. ಕಾರಣಾಂತರಗಳಿಂದ ಸಿನಿಮಾದ ರಿಲೀಸ್‌ ಮುಂದಕ್ಕೆ ಹೋಯ್ತು. ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಸಿನಿಪ್ರಿಯರಿಂದ ಮೆಚ್ಚುಗೆ ಸಿಕ್ಕಿದ್ದು, ಪ್ರೀ ರಿಲೀಸ್ ವ್ಯವಹಾರದಲ್ಲಿಯೂ ಚಿತ್ರ ದಾಖಲೆ ಬರೆದಿದೆ. ಇಷ್ಟು ದಿನಗಳ ಕಾಲ ಲವರ್ ಬಾಯ್ ಆಗಿ ಮಿಂಚಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ‘ಸ್ಕಂದ’ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ಡಿಟೇಕ್ ಛಾಯಾಗ್ರಹಣ, ತಮನ್ ಎಸ್‌ ಎಸ್ ಸಂಗೀತ ಚಿತ್ರಕ್ಕಿದೆ. Zee Studios South ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಈ ಸಿನಿಮಾಗೆ PAN ಇಂಡಿಯಾ ಇಮೇಜಿದೆ ಎನ್ನುವುದು ನಿರ್ದೇಶಕರ ಮಾತು. Shri Srinivas Silver Screen ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ಚಿತ್ತೂರಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 28ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Previous article2024, ಆಗಸ್ಟ್‌ 15ಕ್ಕೆ ‘ಪುಷ್ಪ 2’ | ಸುಕುಮಾರ್‌ – ಅಲ್ಲು ಅರ್ಜುನ್‌ ತೆಲುಗು ಸಿನಿಮಾ
Next article‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ’ ಸಿನಿಮಾ ಜಂಕಾರ್‌ ಮ್ಯೂಸಿಕ್‌ನಲ್ಲಿ ಲಭ್ಯ

LEAVE A REPLY

Connect with

Please enter your comment!
Please enter your name here