ತೆಲುಗು ನಟ ರಾಮ್‌ ಚರಣ್‌ ತೇಜಾ ಮತ್ತು ಉಪಾಸನಾ ದಂಪತಿಗೆ ಜೂನ್‌ 20ರಂದು ಮಗಳು ಜನಿಸಿದ್ದಳು. ನಟ ಚಿರಂಜೀವಿ ಅವರು ಮೊಮ್ಮಗಳ ಹೆಸರನ್ನು ಇಂದು ಟ್ವೀಟ್‌ ಮಾಡಿದ್ದು ಹೆಸರಿನ ಅರ್ಥವನ್ನೂ ವಿವರಿಸಿದ್ದಾರೆ.

ನಟ ಚಿರಂಜೀವಿ ಮನೆಯಲ್ಲಿ ಸಂಭ್ರಮ ಏರ್ಪಟ್ಟಿದೆ. ಇಂದು ಅವರ ಮೊಮ್ಮಗಳಿಗೆ ನಾಮಕರಣ ಸಂಭ್ರಮ. ಮೊಮ್ಮಗಳಿಗೆ ‘ಕ್ಲಿನ್‌ ಕಾರಾ ಕೊನಿಡೇಲಾ’ ಎಂದು ಹೆಸರಿಟ್ಟಿರುವ ವಿಷಯವನ್ನು ಚಿರಂಜೀವಿ ಟ್ವೀಟ್‌ ಮಾಡಿದ್ದಾರೆ. ‘ಈ ಹೆಸರನ್ನು ಲಲಿತ ಸಹಸ್ರನಾಮದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ಲಿನ್‌ ಕಾರಾ ಎಂದರೆ ಪ್ರಕೃತಿಯ ಸಾಕಾರ ಮೂರ್ತಿ. ಶಕ್ತಿ ದೇವತೆಯ ಸ್ವರೂಪ. ಈ ಹೆಸರಿನಲ್ಲೊಂದು ಸಂಚಲನವಿದೆ. ನಮ್ಮ ಮನೆಯ ಪುಟಾಣಿಗೆ ಎಲ್ಲರ ಹಾರೈಕೆ ಇರಲಿ’ ಎಂದು ಚಿರಂಜೀವಿ ಟ್ವೀಟ್‌ ಮಾಡಿದ್ದಾರೆ. ಚಿರಂಜೀವಿ ಹಾಗೂ ರಾಮ್‌ ಚರಣ್‌ ತೇಜಾ ಅಭಿಮಾನಿಗಳು ಶುಭ ಹಾರೈಕೆಯ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಹಲವರಿಗೆ ಈ ಹೆಸರು ವಿಶಿಷ್ಟವಾಗಿ ಧ್ವನಿಸಿದ್ದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಟ ರಾಮ್‌ ಚರಣ್‌ ತೇಜಾ ಮತ್ತು ಉಪಾಸನಾ ದಂಪತಿ ಜೂನ್‌ 20ರಂದು ಪೋಷಕರಾಗಿದ್ದರು. 2012ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದ ರಾಮ್‌ ಚರಣ್‌ ಮತ್ತು ಉಪಾಸನಾ ದಂಪತಿಗೆ ಇದು ಮೊದಲ ಮಗು. ನಟ ರಾಮ್‌ ಚರಣ್‌ ಸದ್ಯ ಶಂಕರ್‌ ನಿರ್ದೇಶನದ PAN ಇಂಡಿಯಾ ಸಿನಿಮಾ ‘ಗೇಮ್‌ ಚೇಂಜರ್‌’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕೀರಾ ಅಡ್ವಾನಿ ಈ ಚಿತ್ರದ ನಾಯಕಿ. ಎಸ್‌ ಥಮನ್‌ ಸಂಗೀತ ಸಂಯೋಜನೆಯ ಸಿನಿಮಾದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ.

Previous article‘ಚಂದ್ರಮುಖಿ 2’ ನೂತನ ಪೋಸ್ಟರ್‌ | ರಾಘವ ಲಾರೆನ್ಸ್‌ – ಕಂಗನಾ ಸಿನಿಮಾ ಸೆಪ್ಟೆಂಬರ್‌ 19ಕ್ಕೆ
Next article‘ಮಾಯಾಬಜಾರ್‌ for sale’ | ZEE5 ತೆಲುಗು ವೆಬ್‌ ಸರಣಿ ಜುಲೈ 14ರಿಂದ

LEAVE A REPLY

Connect with

Please enter your comment!
Please enter your name here