ತೆಲುಗು ಸಿನಿಮಾ ಯುವನಟ ರಾಮ್ ಚರಣ್ ತೇಜಾ ಇಂದು ಪುನೀತ್‌ ರಾಜಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಪುನೀತ್‌ರೊಂದಿಗಿನ ತಮ್ಮ ಆಪ್ತ ನೆನಪುಗಳನ್ನು ಹಂಚಿಕೊಂಡು ಕಣ್ಣೀರಾದರು.

ತೆಲುಗು ಯುವನಟ ರಾಮ್‌ಚರಣ್ ತೇಜಾ ಇಂದು ಪುನೀತ್ ಮತ್ತು ಶಿವರಾಜಕುಮಾರ್ ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನ ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಇದನ್ನು ನನ್ನಿಂದ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರೀತಿ, ವಿನಯವಂತಿಕೆಯ ಮೂರ್ತರೂಪದಂತಿದ್ದ ಪುನೀತ್‌ ಇನ್ನು ಮುಂದೆ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನೆನಪು ಮಾಡಿಕೊಂಡರೆ ವೇದನೆಯಾಗುತ್ತದೆ. ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ನಾವು ಅವರ ಹಾದಿಯಲ್ಲೇ ಸಾಗುವ ಮೂಲಕ ಅವರ ಆಶಯಗಳನ್ನು ಜೀವಂತವಾಗಿಡೋಣ” ಎಂದರು. ರಾಮ್‌ ಚರಣ್‌ ತಂದೆ, ನಟ ಚಿರಂಜೀವಿ ಅವರು ಪುನೀತ್ ಅಗಲಿದ ಮರುದಿನ ಬಂದು ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ್ದರು.

Previous articleಟ್ರೈಲರ್ | ದಯಾಳ್ ಪದ್ಮನಾಭನ್ ‘ಒಂಬತ್ತನೇ ದಿಕ್ಕು’; ಯೋಗಿ ಆಕ್ಷನ್‌-ಥ್ರಿಲ್ಲರ್ ಸಿನಿಮಾ
Next articleಟ್ರೈಲರ್ | ದುಲ್ಕರ್ ಸಲ್ಮಾನ್‌ ಕ್ರೈಂ ಥ್ರಿಲ್ಲರ್‌ ‘ಕುರುಪ್‌’; ನವೆಂಬರ್‌ 12ರಂದು ತೆರೆಗೆ

LEAVE A REPLY

Connect with

Please enter your comment!
Please enter your name here