ಲಿಜು ಕೃಷ್ಣ ಬರೆದು ನಿರ್ದೇಶಿಸಿರುವ ‘ಪಡವೆಟ್ಟು’ ಮಲಯಾಳಂ ಚಿತ್ರದಲ್ಲಿ ನಿವಿನ್ ಪೌಲಿ ಮತ್ತು ಅದಿತಿ ಬಾಲನ್ ನಟಿಸಿದ್ದಾರೆ. ಇದನ್ನು ‘ಸಂಘರ್ಷ, ಹೋರಾಟ ಮತ್ತು ಬದುಕುಳಿಯುವಿಕೆಯ’ ಕಥೆಯೆಂದು ಹೇಳಲಾಗುತ್ತಿದೆ.

ಹಿಂಸೆ ಮತ್ತು ಹೋರಾಟಕ್ಕಾಗಿ ಬಲವಾದ ಇಚ್ಛೆಯನ್ನು ಹೊಂದಿರುವ ವ್ಯಕ್ತಿಯನ್ನು ಚಿತ್ರಿಸುವಾಗ ಅವನು ತುಂಬಾ ಸಂಕೀರ್ಣವಾಗಿ ಕಾಣುತ್ತಾನೆ. ಇದೊಂದು ಪೊಲಿಟಿಕಲ್ ಡ್ರಾಮಾ. ಚಿತ್ರ 2022ರಲ್ಲಿ ತೆರೆಗೆ ಬರಲಿದೆ. “ಸಂಘರ್ಷದ ಕಥೆ, ಹೋರಾಟ, ಅಳಿವು ಉಳಿವಿನ ಕಥೆ. ಮಾನವರು ಇರುವವರೆಗೂ ಈ ಹೋರಾಟ ಮುಂದುವರಿಯುತ್ತದೆ” – ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಚಿತ್ರದ ಪೋಸ್ಟರ್ ಹಂಚಿಕೊಂಡು ನಟ ನಿವಿನ್ ಮಾಡಿರುವ ಟ್ವೀಟ್ ಇದು. ಲಿಜು ಕೃಷ್ಣ ಬರೆದು ನಿರ್ದೇಶಿಸಿದ ‘ಪಡವೆಟ್ಟು’  ಕ್ಲಿಕ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ನಿವಿನ್. “ಪಡವೆಟ್ಟು ಚಿತ್ರವನ್ನು ಒಂದು ಕಥೆಯಾಗಿ ನನಗೆ ಅದನ್ನು ಹೇಳಿದಾಗ ಅದು ನನ್ನ ಮೇಲೆ ಪ್ರಭಾವ ಬೀರಿತು. ಇದು ಎರಡನೇ ಅವಕಾಶಗಳ ಕಥೆ ಮತ್ತು ತಪ್ಪಿನ ವಿರುದ್ಧ ನಿಲ್ಲಲು ಒಳಗಿನ ಸಾಮರ್ಥ್ಯವನ್ನು ಕಂಡುಕೊಳ್ಳುವ ಕಥೆ. ಕಥಾಹಂದರ, ಭಾವನೆಗಳು ಮತ್ತು ಪಾತ್ರಗಳ ಸುಂದರ ಚಿತ್ರಣವು ಪ್ರೇಕ್ಷಕರೊಂದಿಗೆ ಚೆನ್ನಾಗಿ ಕನೆಕ್ಟ್ ಆಗುತ್ತದೆ. ಮತ್ತು ಇದಕ್ಕೆ ಎಲ್ಲರಿಂದ ಸ್ವಾಗತ ದೊರೆಯುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ” ಎಂದಿದ್ದಾರೆ ನಿವಿನ್.

https://youtu.be/z43n6rGuOEQ

“ಮಲಯಾಳಂ ಚಲನಚಿತ್ರಗಳು ಭಾರತ ಚಿತ್ರರಂಗವನ್ನು ಆವರಿಸುತ್ತಿರುವ ರೀತಿಯನ್ನು ನೋಡಲು ಹೃದಯಸ್ಪರ್ಶಿಯಾಗಿದೆ. ಯೂಡ್ಲೀ ಮಲಯಾಳಂ ಚಿತ್ರರಂಗವನ್ನು ಮಹತ್ವದ ರೀತಿಯಲ್ಲಿ ಬೆಂಬಲಿಸುತ್ತಿರುವುದು, ಇಂತಹ ಹೆಚ್ಚಿನ ಸಹಯೋಗಗಳು ಬರಲಿವೆ ಎನ್ನುವುದನ್ನು ಸೂಚಿಸುತ್ತದೆ “ಎಂದು ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅದಿತಿ ಬಾಲನ್ ಹೇಳಿದ್ದಾರೆ. ನಿವಿನ್ ಈಗ ‘ಕನಕ ಕಾಮಿನಿ ಕಲಹಂ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ‘ಆಂಡ್ರಾಯ್ಡ್ ಕುಂಜಪ್ಪನ್ ವರ್ಷನ್ 5.25’ಅನ್ನು ನಿರ್ದೇಶಿಸಿದ ರತೀಶ್ ಬಾಲಕೃಷ್ಣನ್ ಪೊಡುವಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸುಧೀಶ್, ಜಾಫರ್ ಇಡುಕಿ, ಜಾಯ್ ಮ್ಯಾಥ್ಯೂ, ಶಿವದಾಸನ್ ಕಣ್ಣೂರು, ಗ್ರೇಸ್ ಆಂಟನಿ ಮತ್ತು ವಿನಯ್ ಫೋರ್ಟ್ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here