ರೊಮ್ಯಾಂಟಿಕ್‌ – ಕಾಮಿಡಿ ಮಲಯಾಳಂ ಸಿನಿಮಾ ‘ಪ್ರೇಮಲು’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ನಟ ಫಹಾದ್‌ ಫಾಸಿಲ್‌ ಚಿತ್ರದ ನಿರ್ಮಾಪಕರಲ್ಲೊಬ್ಬರು. ಗಿರೀಶ್‌ ಎ ಡಿ ನಿರ್ದೇಶನದ ಚಿತ್ರದ ಮುಖ್ಯಭೂಮಿಕೆಯಲ್ಲಿ ನಸ್ಲೆನ್‌ ಕೆ ಗಫರ್‌ ಮತ್ತು ಮಮಿತಾ ಬೈಜು ನಟಿಸಿದ್ದಾರೆ.

ಗಿರೀಶ್‌ ಎ ಡಿ ನಿರ್ದೇಸನದ ‘ಪ್ರೇಮಲು’ ರೊಮ್ಯಾಂಟಿಕ್‌ – ಕಾಮಿಡಿ ಮಲಯಾಳಂ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಗಿರೀಶ್ ಈ ಹಿಂದೆ ‘ತಣ್ಣೀರ್ ಮಥನ್ ದಿನಂಗಳ್’ ಮತ್ತು ‘ಸೂಪರ್ ಶರಣ್ಯ’ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಪ್ರೇಮಲು’ ಸಿನಿಮಾವು ಹೈದರಾಬಾದ್‌ನಲ್ಲಿ ಸೆಟ್ಟೇರಿದೆ. ಈ ಚಿತ್ರದಲ್ಲಿ ನಸ್ಲೆನ್ ಕೆ ಗಫರ್‌ ಮತ್ತು ಮಮಿತಾ ಬೈಜು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಶ್ಯಾಮ್ ಮೋಹನ್, ಅಖಿಲಾ ಭಾರ್ಗವನ್, ಸಂಗೀತ್ ಪ್ರತಾಪ್, ಅಲ್ತಾಫ್ ಸಲೀಂ ಮತ್ತು ಮೀನಾಕ್ಷಿ ರವೀಂದ್ರನ್ ನಟಿಸುತ್ತಿದ್ದಾರೆ. ವಿಷ್ಣು ವಿಜಯ್ ಸಂಗೀತ ಸಂಯೋಜನೆಯಿದೆ. ವಿಷ್ಣು ವಿಜಯ್‌ ಈ ಹಿಂದೆ ‘ಗುಪ್ಪಿ’, ‘ಅಂಬಿಲಿ’, ‘ಥಲ್ಲುಮಾಲಾ’ ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು. Bhavana Studios ಬ್ಯಾನರ್‌ ಅಡಿಯಲ್ಲಿ ದಿಲೀಶ್ ಪೋತನ್, ಫಹಾದ್ ಫಾಸಿಲ್ ಮತ್ತು ಶ್ಯಾಮ್ ಪುಷ್ಕರನ್ ಚಿತ್ರ ನಿರ್ಮಿಸುತ್ತಿದ್ದಾರೆ. ಅಜ್ಮಲ್ ಸಾಬು ಛಾಯಾಗ್ರಹಣ, ಆಕಾಶ್ ಜೋಸೆಫ್ ವರ್ಗೀಸ್ ಸಂಕಲನ ಚಿತ್ರಕ್ಕಿದೆ. ವಿನೋದ್ ರವೀಂದ್ರನ್ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2024ರ ಫೆಬ್ರವರಿಯಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here