ಕೇರಳ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದ ‘ಆಯಿರತೊನ್ನು ನುಣಕಲ್‌’ ಮಲಯಾಳಂ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಥಾಮರ್‌ ಕೆ ವಿ ನಿರ್ದೇಶನ ಸಿನಿಮಾ ಆಗಸ್ಟ್‌ 18ರಿಂದ SonyLIVನಲ್ಲಿ ಸ್ಟ್ರೀಮ್‌ ಆಗಲಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ‘ಆಯಿರತೊನ್ನು ನುಣಕಲ್’ (1001 ನುಣಕಲ್) ಮಲಯಾಳಂ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಅಪಾರ್ಟ್‌ಮೆಂಟ್‌ವೊಂದರಲ್ಲಿ ಪರಿಚಿತ ಜನಗಳ ಮಧ್ಯೆ ನಡೆಯುವ ಕಥಾಹಂದರ ಇಲ್ಲಿದೆ. ಒಂದು ಬಾರಿ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಆ ಮನೆಯ ದಂಪತಿಗಳು ಪಕ್ಕದಲ್ಲೇ ಇರುವ ತಮ್ಮ ಸ್ನೇಹಿತರ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಅದು ಅವರ 10ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭ. ಅಂದು ರಾತ್ರಿ ಕೆಲವು ಅತಿಥಿಗಳು ಮತ್ತು ಆಪ್ತ ಸ್ನೇಹಿತರನ್ನು ವಾರ್ಷಿಕೋತ್ಸವದ ಆಚರಣೆಗೆ ಸ್ವಾಗತಿಸುತ್ತಾರೆ.

ಸಂಭ್ರಮದ ಸಮಯದಲ್ಲಿ, Truth or Dare ಆಟವನ್ನು ಆಡಲು ನಿರ್ಧರಿಸುತ್ತದೆ, ಅಲ್ಲಿ ಕೆಲವು ವ್ಯಕ್ತಿಗಳು ತಾವು ಹೇಳಿದ ಸುಳ್ಳನ್ನು ಬಹಿರಂಗಪಡಿಸುತ್ತಾರೆ. ಈ ಆಟವು ರಹಸ್ಯಗಳನ್ನು ಬಹಿರಂಗಪಡಿಸುತ್ತಾ ಅವರ ಸಂಬಂಧಗಳ ಮಧ್ಯೆ ಬಿರುಕು ಮೂಡಿಸುತ್ತದೆ. ಥಾಮರ್ ಮತ್ತು ಹಾಶಿಮ್ ಸುಲೈಮಾನ್ ಚಿತ್ರಕಥೆ ಬರೆದಿರುವ ಚಿತ್ರವನ್ನು ಥಾಮರ್‌ ಕೆ ವಿ ನಿರ್ದೇಶಿಸಿದ್ದಾರೆ. ವಿಷ್ಣು ಅಗಸ್ತ್ಯ, ರೆಮ್ಯಾ ಸುರೇಶ್, ಶಾಮಲಾ ಹಮ್ಜಾ, ನಿನ್ಲಿನ್ ಕಾಸಿಮ್, ಜಿಂಜ್ ಶಾನ್, ನೌಫಲ್ ವಿಜಯಕುಮಾರ್, ಸೂರಜ್ ಕೆ ನಂಬಿಯಾರ್ ನಟಿಸಿದ್ದಾರೆ. ಚಿತ್ರದಲ್ಲಿ ಬಹಳಷ್ಟು ಹೊಸ ಕಲಾವಿದರು ನಟಿಸಿದ್ದಾರೆ. ನೇಹಾ ನಾಯರ್ ಮತ್ತು ಯಕ್ಜಾನ್ ಗ್ಯಾರಿ ಪಿರೇರಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳ ರಾಜ್ಯದ ‘ಅತ್ಯುತ್ತಮ ಸಂಪಾದಕ’ ಪ್ರಶಸ್ತಿ ಪಡೆದ ನಿಶಾದ್ ಯೂಸುಫ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಆಗಸ್ಟ್ 18ರಿಂದ Sony LIVನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

Previous articleಟ್ವಿಸ್ಟ್ ಟರ್ನ್‌ಗಳ ರೋಚಕ ಪಯಣ, ಕ್ರೈಂ ಡ್ರಾಮಾ ‘ದಯಾ’
Next article‘ಡಾನ್ ‌3’ ಟೈಟಲ್‌ ಟೀಸರ್‌ | ಫರ್ಹನ್‌ ಅಖ್ತರ್‌ – ರಣವೀರ್‌ ಸಿಂಗ್‌ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here