ಅಡಿವಿ ಸೇಶ್‌ ನಟನೆಯ ಸಂದೀಪ್ ಉನ್ನಿಕೃಷ್ಣನ್ ತೆಲುಗು – ಹಿಂದಿ ಬಯೋಪಿಕ್‌ ಸಿನಿಮಾ 2022ರ ಫೆಬ್ರವರಿ 11ಕ್ಕೆ ತೆರೆಕಾಣಲಿದೆ. ಶಶಿ ಕಿರಣ್ ನಿರ್ದೇಶನದ ಸಿನಿಮಾ NSG ಕಮ್ಯಾಂಡೋ ಸಂದೀಪ್ ಉನ್ನಿಕೃಷ್ಣನ್‌ ಜೀವನ, ಸಾಧನೆಯ ಕತೆ.

ಸೋನಿ ಪಿಕ್ಚರ್ಸ್‌ ತನ್ನ ನಿರ್ಮಾಣದ ‘ಮೇಜರ್‌’ ಹಿಂದಿ – ತೆಲುಗು ಬಯೋಪಿಕ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದೆ. ಶಶಿಕಿರಣ್ ನಿರ್ದೇಶನದಲ್ಲಿ ಅಡಿವಿ ಸೇಶ್ ಶೀರ್ಷಿಕೆ ಪಾತ್ರ ನಿರ್ವಹಿಸಿರುವ ಸಿನಿಮಾ 2022ರ ಫೆಬ್ರವರಿ 11ರಂದು ತೆರೆಗೆ ಬರಲಿದೆ. ಪ್ರೊಡಕ್ಷನ್ ಹೌಸ್‌ ಇಂದು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಜೊತೆಗೆ ಚಿತ್ರೀಕರಣ ಸಂದರ್ಭದ ವೀಡಿಯೋ ಫೂಟೇಜ್‌ ಟ್ವೀಟ್ ಮಾಡಿದೆ. 2008ರ ಮುಂಬಯಿ 26/11 ತಾಜ್ ಹೋಟೆಲ್‌ ಉಗ್ರರ ಸಂಘರ್ಷದಲ್ಲಿ ಜನರನ್ನು ರಕ್ಷಿಸದವರು NSG ಕಮ್ಯಾಂಡೋ ಮೇಜರ್ ಉನ್ನಿಕೃಷ್ಣನ್‌. ಪ್ರೊಡಕ್ಷನ್ ಹೌಸ್ ಟ್ವೀಟ್ ಮಾಡಿರುವ ವೀಡಿಯೋದಲ್ಲಿ ಟೆರರ್‌ ಅಟ್ಯಾಕ್‌ ಸನ್ನಿವೇಶದ ಚಿತ್ರಣಗಳಿವೆ.

‘ಮೇಜರ್’ ಚಿತ್ರದಲ್ಲಿ ಸಂದೀಪ್ ಉನ್ನಿಕೃಷ್ಣನ್‌ ಅವರು ಭಾರತೀಯ ಸೈನ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ಅವರ ವೈಯಕ್ತಿಕ ಬದುಕಿನ ವಿವರಗಳೂ ಇರಲಿವೆ. “ಸಂದೀಪ್ ಎಂತಹ ಯೋಧ ಎನ್ನುವುದು ಜನರಿಗೆ ಗೊತ್ತಿದೆ. ಅವರ ಶೈರ್ಯಕ್ಕೆ 26/11 ಘಟನೆಯೊಂದೇ ಪ್ರಮುಖ ಉದಾಹರಣೆಯಲ್ಲ. ಕಾರ್ಗಿಲ್‌ ಯುದ್ಧದಲ್ಲಿ ಕ್ಯಾಪ್ಟನ್ ಆಗಿ ಅವರು ಹೋರಾಡಿದ್ದರು. ಹೈದರಾಬಾದ್‌ನಲ್ಲಿ ಕಾರ್ಯ ನಿರ್ವಿಹಿಸಿದ್ದ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ತೆರಳಿದರು. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್‌ನಲ್ಲಿ ಅವರು ತರಬೇತಿ ಅಧಿಕಾರಿಯಾಗಿದ್ದರು. ಅವರ ಬದುಕು ಕೂಡ ಆದರ್ಶಪ್ರಾಯವಾಗಿದೆ” ಎಂದು ನಟ ಅಡಿವಿ ಸೇಶ್ ಹೇಳುತ್ತಾರೆ. ಸಾಯಿ ಮಂಜ್ರೇಕರ್‌, ಶೋಭಿತಾ ಧುಲಿಪಾಲಾ, ಪ್ರಕಾಶ್ ರೈ, ರೇವತಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಮಲಯಾಳಂಗೆ ಡಬ್ ಆಗಲಿದೆ.

LEAVE A REPLY

Connect with

Please enter your comment!
Please enter your name here