‘ಬೊಮ್ಮರಿಲ್ಲು’ ಭಾಸ್ಕರ್‌ ನಿರ್ದೇಶನದ ‘SVCC 37’ ತೆಲುಗು ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಸಿದ್ದು ಜೊನ್ನಲಗಡ್ಡ ಹೀರೋ ಆಗಿ ನಟಿಸುತ್ತಿರುವ ಚಿತ್ರವಿದು. ಸಿದ್ದು ಅವರ ‘ಟಿಲ್ಲು ಸ್ಕ್ವೇರ್‌’ ಸಿನಿಮಾ ತೆರೆಗೆ ಸಿದ್ಧವಾಗಿದ್ದು, 2024ರ ಫೆಬ್ರವರಿ 9ರಂದು ಬಿಡುಗಡೆಯಾಗಲಿದೆ.

ಸಿದ್ದು ಜೊನ್ನಲಗಡ್ಡ ಮುಖ್ಯಭೂಮಿಕೆಯಲ್ಲಿರುವ ‘SVCC 37’ ತೆಲುಗು ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಈ ಸಿನಿಮಾವನ್ನು ‘ಬೊಮ್ಮರಿಲ್ಲು’ ಭಾಸ್ಕರ್ ನಿರ್ದೇಶಿಸುತ್ತಿದ್ದಾರೆ. ನಟ, ನಿರ್ಮಾಪಕ ಮತ್ತು ನಿರ್ದೇಶಕರನ್ನು ಒಳಗೊಂಡಿರುವ ಕಪ್ಪು-ಬಿಳುಪು ಪೋಟೊದೊಂದಿಗೆ ಚಿತ್ರೀಕರಣ ಆರಂಭವಾಗಿರುವ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. BVSN ಪ್ರಸಾದ್ ಅವರ Sree Venkateswara Cine Chitra ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ
ಮಾಡುತ್ತಿದ್ದಾರೆ. ಭಾಸ್ಕರ್ ಅವರು ಈ ಹಿಂದೆ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಸಿನಿಮಾವನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಿದ್ದು ಅವರು ‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ರಾಶಿ ಖನ್ನಾ ಮತ್ತು ಶ್ರೀನಿಧಿ ಶೆಟ್ಟಿ ಸಹ ನಟಿಯರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ 2024ರ ಫೆಬ್ರವರಿ 9 ರಂದು ಬಿಡುಗಡೆಯಾಗಲಿದೆ. 2022ರಲ್ಲಿ ತೆರೆಕಂಡಿದ್ದ ‘ಡಿಜೆ ಟಿಲ್ಲು’ ಹಾಸ್ಯ ಚಲನಚಿತ್ರದಲ್ಲಿ ನೇಹಾ ಶೆಟ್ಟಿ ಅವರೊಂದಿಗೆ ಸಿದ್ದು ಅಭಿನಯಿಸಿದ್ದರು.

LEAVE A REPLY

Connect with

Please enter your comment!
Please enter your name here