ಡೇನಿಯಲ್ ಎಸ್ಪಿನೋಸಾ ನಿರ್ದೇಶನದ ‘ಮಾರ್ಬಿಯಸ್‌’ ಟ್ರೈಲರ್ ರಿಲೀಸ್ ಆಗಿದೆ. ಜನಪ್ರಿಯ ಮಾರ್ವೆಲ್‌ ವಾಂಪೈರ್ ಪಾತ್ರದಲ್ಲಿ ಜೇರಡ್ ಲೆಟೊ ಕಾಣಿಸಿಕೊಂಡಿದ್ದಾರೆ. 2022ರ ಜನವರಿ 28ರಂದು ಸಿನಿಮಾ ತೆರೆಕಾಣಲಿದೆ.

ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ಜೇರಡ್‌ ಲೆಟೋ ನಟನೆಯ ‘ಮಾರ್ಬಿಯಸ್’ ಇಂಗ್ಲಿಷ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಮೂರು ನಿಮಿಷಗಳ ಟ್ರೈಲರ್‌ನಲ್ಲಿ ವಾಂಪೈರ್ ಆಂಟಿಹೀರೋನ ವಿವಿಧ ಅವತಾರಗಳನ್ನು ನೋಡಬಹುದು. ಜೇರಡ್ ಪಾತ್ರ ಮಾರ್ವೆಲ್‌ನ ಮತ್ತೊಂದು ಜನಪ್ರಿಯ ‘ವೆನೋಮ್‌’ (ಟಾಮ್‌ ಹಾರ್ಡಿ ನಟಿಸಿದ್ದರು) ಪಾತ್ರವನ್ನು ನೆನಪಿಸುತ್ತದೆ. ಈ ಪಾತ್ರವನ್ನು ಕನೆಕ್ಟ್ ಮಾಡುವಂತೆ ಟ್ರೈಲರ್ ಕೊನೆಯಲ್ಲಿ ಮಾರ್ಬಿಯಸ್‌, ‘ಐ ಆಮ್ ವೆನೋಮ್‌’ ಎನ್ನುತ್ತಾನೆ. ಡಾಕ್ಟರ್ ಮೈಖೇಲ್‌ ಮಾರ್ಬಿಯಸ್‌ ಪಾತ್ರದ ವಿಶಿಷ್ಟ ಟ್ರಾನ್ಸ್‌’ಫಾರ್ಮೇಷನ್‌ಗಳು, ಟ್ರೈನ್‌ ಎದುರು ಹಾರುವ ಸನ್ನಿವೇಶ ರೋಚಕವೆನಿಸುತ್ತವೆ. ಈ ಸಿನಿಮಾ 2022ರ ಜನವರಿ 28ರಂದು ತೆರೆಕಾಣಲಿದೆ. “ಇದು ಮಾರ್ವೆಲ್‌ನ ಜನಪ್ರಿಯ ಪಾತ್ರಗಳಲ್ಲೊಂದು. ಮನುಕುಲದ ಒಳಿತಿಗೆ ಶ್ರಮಿಸುವ, ತನ್ನೊಳಗಿನ ರಾಕ್ಷಸನನ್ನು ಮುಗಿಸುವ ಹಾದಿಯ ಈ ಪಯಣ ಪ್ರೇಕ್ಷಕರಿಗೆ ಮುದ ನೀಡಲಿದೆ” ಎಂದು ಅಫಿಷಿಯಲ್ ಸಿನಾಪ್ಸಿಸ್‌ ಹೇಳುತ್ತದೆ.

Previous articleಟ್ವಿಟರ್‌ನಲ್ಲಿ #Unitedkfi ಟ್ರೆಂಡ್; ಸ್ಯಾಂಡಲ್‌ವುಡ್ ಅಭಿಮಾನಿಗಳ ಆಶಯ
Next articleಫೆಬ್ರವರಿಯಲ್ಲಿ ‘ಮೇಜರ್’ ತೆರೆಗೆ; ಸಂದೀಪ್ ಉನ್ನಿಕೃಷ್ಣನ್ ಬಯೋಪಿಕ್

LEAVE A REPLY

Connect with

Please enter your comment!
Please enter your name here