ರಾಷ್ಟ್ರಪ್ರಶಸ್ತಿ ಪುರಸ್ಕೃತ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್‌ ಇಂದು ಅಗಲಿದ್ದಾರೆ. ಪ್ರಮುಖವಾಗಿ ತಮಿಳು, ತೆಲುಗು ಸಿನಿಮಾಗಳು ಸೇರಿದಂತೆ ಹತ್ತು ಭಾ‍ಷೆಗಳ 700ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ನೃತ್ಯ ಸಂಯೋಜಿಸಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗ ಖ್ಯಾತ ನೃತ್ಯನಿರ್ದೇಶಕ ಶಿವಶಂಕರ್ ಮಾಸ್ಟರ್‌ (72 ವರ್ಷ) ಇಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್‌ ಸೋಂಕಿಗೆ ತುತ್ತಾಗಿದ್ದ ಅವರು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅಗಲಿದ್ದಾರೆ. ಪ್ರಮುಖವಾಗಿ ತೆಲುಗು, ತಮಿಳು ಸೇರಿದಂತೆ ಸುಮಾರು ಹತ್ತು ಭಾಷೆಗಳ 700ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ನೃತ್ಯ ಸಂಯೋಜಿಸಿದ್ದಾರೆ. ರಾಜಮೌಳಿ ನಿರ್ದೇಶನದ ‘ಮಗಧೀರ’ ಸಿನಿಮಾದ ಅತ್ಯುತ್ತಮ ನೃತ್ಯ ನಿರ್ದೇಶನಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿತ್ತು. ತಮಿಳು ರಾಜ್ಯಸರ್ಕಾರದಿಂದ ನಾಲ್ಕು ಬಾರಿ ಶ್ರೇಷ್ಠ ನೃತ್ಯನಿರ್ದೇಶಕ ಗೌರವ ಸಂದಿದೆ. ನಟರಾಗಿಯೂ ಗುರುತಿಸಿಕೊಂಡಿದ್ದ ಅವರು ಹತ್ತಾರು ಸಿನಿಮಾಗಳ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕೋವಿಡ್‌ ಚಿಕಿತ್ಸೆ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಅವರಿಗೆ ನಟರಾದ ಚಿರಂಜೀವಿ, ಸೋನು ಸೂದ್‌, ದನುಷ್‌ ಹಣಕಾಸಿನ ನೆರವು ನೀಡಿದ್ದರು. ಶಿವಶಂಕರ್ ಮಾಸ್ಟರ್‌ ಮಾಸ್ಟರ್ ನಿಧನಕ್ಕೆ ದಕ್ಷಿಣ ಭಾರತ ಚಿತ್ರರಂಗಗಳ ಹತ್ತಾರು ಪ್ರಮುಖರು ಕಂಬನಿ ಮಿಡಿದಿದ್ದಾರೆ.

LEAVE A REPLY

Connect with

Please enter your comment!
Please enter your name here