‘Rocky’ ಖ್ಯಾತಿಯ ಅರುಣ್‌ ಮಾತೇಶ್ವರನ್‌ ರಚಿಸಿ, ನಿರ್ದೇಶಿಸಿರುವ ‘ಸಾಯಿ ಕಾಯಿಧಂ’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಕೀರ್ತಿ ಸುರೇಶ್‌ ಮತ್ತು ಸೆಲ್ವ ರಾಘವನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಅಮೇಜಾನ್‌ ಪ್ರೈಮ್‌ ಇಂದು ‘ಸಾನಿ ಕಾಯಿಧಂ’ ತಮಿಳು ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿದೆ. ಸೀರಿಯಲ್‌ ಕಿಲ್ಲರ್‌ಗಳಾದ ಪೊನ್ನಿ (ಕೀರ್ತಿ ಸುರೇಶ್‌) ಮತ್ತು ಸಂಗಯ್ಯ (ಸೆಲ್ವರಾಘವನ್‌) ಕತೆ. ಇಬ್ಬರು ಪಾತಕಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸುವ ಸನ್ನಿವೇಶದೊಂದಿಗೆ ಟ್ರೈಲರ್‌ ಶುರುವಾಗುತ್ತದೆ. ಇಬ್ಬರೂ ತಾವು ಮಾಡಿದ ಬರ್ಬರ ಹತ್ಯೆಗಳನ್ನು ತಣ್ಣನೆಯ ದನಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಮನೆಮನೆಗೆ ಗ್ಯಾಸ್‌ ಸಿಲೆಂಡರ್‌ ತಲುಪಿಸುವ ಸಂಗಯ್ಯ ಮತ್ತು ಪೊಲೀಸ್‌ ಫೋರ್ಸ್‌ನಲ್ಲಿ ಕಾನ್‌ಸ್ಟೇಬಲ್‌ ಆಗಿ ಕಾರ್ಯನಿರ್ವಹಿಸುವ ಪೊನ್ನಿ ಕೊಲೆಗಾರರಾಗಿ ಬದಲಾದದ್ದು ಹೇಗೆ ಎನ್ನುವುದರ ಸುತ್ತ ನಿರ್ದೇಶಕ ಅರುಣ್‌ ಮಾತೇಶ್ವರನ್‌ ಕತೆ ಹೆಣೆದು ನಿರೂಪಿಸಿದ್ದಾರೆ.

“ಇದು ಈ ಹಿಂದಿನ ನನ್ನೆಲ್ಲಾ ಪಾತ್ರಗಳಿಗಿಂತ ಬೇರೆಯದ್ದೇ ರೀತಿಯ ಪಾತ್ರ. ನಿರ್ದೇಶಕ ಅರುಣ್‌ ಸೃಷ್ಟಿಸಿದ ಪಾತ್ರ, ಕತೆ ಹೇಳುವ ರೀತಿಯಿಂದ ಪ್ರಭಾವಿತಳಾಗಿ ನಟಿಸಲು ಒಪ್ಪಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ದೇಶಕ ಸೆಲ್ವ ರಾಘವನ್‌ ಇಲ್ಲಿ ನನ್ನ ಸಹನಟರಾಗಿದ್ದಾರೆ. ಶ್ರದ್ಧೆ, ಶ್ರಮವಹಿಸಿ ಪಾತ್ರ ನಿರ್ವಹಿಸಿದ್ದು, ಅಭಿಮಾನಿಗಳ ಪ್ರತಿಕ್ರಿಯೆಗೆ ಎದುರು ನೋಡುತ್ತಿದ್ದೇನೆ” ಎನ್ನುತ್ತಾರೆ ನಟಿ ಕೀರ್ತಿ ಸುರೇಶ್‌. ಇನ್ನು ಖ್ಯಾತ ನಿರ್ದೇಶಕ ಸೆಲ್ವ ರಾಘವನ್‌ ಅವರಿಗೆ ಇದು ಕ್ಯಾಮೆರಾ ಎದುರಿಸಿದ ಮೊದಲ ಸಿನಿಮಾ. ವಿಜಯ್‌ ಹೀರೋ ಆಗಿರುವ ‘ಬೀಸ್ಟ್‌’ ಚಿತ್ರದಲ್ಲೂ ಅವರು ನಟಿಸಿದ್ದಾರೆ. ಆದರೆ ಮೊದಲು ಶುರುವಾಗಿದ್ದು ‘ಸಾನಿ ಕಾಯಿಧಂ’. ಮೇ 6ರಿಂದ ಈ ಸಿನಿಮಾ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

Previous article‘ಧೀರನ್‌’ ಫಸ್ಟ್‌ಲುಕ್‌ ಬಿಡುಗಡೆ; ಸಸ್ಪೆನ್ಸ್‌ – ಥ್ರಿಲ್ಲರ್‌ ಸಿನಿಮಾ
Next article‘ಬಯಲುಸೀಮೆ’ ಆಡಿಯೋ ಬಿಡುಗಡೆ; ಪೊಲಿಟಿಕಲ್‌ ಕ್ರೈಂ-ಥ್ರಿಲ್ಲರ್‌ ಸಿನಿಮಾ

LEAVE A REPLY

Connect with

Please enter your comment!
Please enter your name here