ಮೂರನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ಗೆ ಚಾಲನೆ ಸಿಕ್ಕಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ನಟಿ ರಾಗಿಣಿ ದ್ವಿವೇದಿ ಮತ್ತು ನಟ ರಿಷಿ ಟ್ರೋಫಿ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 20 ವಿವಿಧ ವಿಭಾಗಗಳ ಪ್ರಶಸ್ತಿಗಳ ನಾಮನಿರ್ದೇಶನ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಮೂರನೇ ವರ್ಷದ ಪ್ರಶಸ್ತಿ ಸಮಾರಂಭ ಮಾರ್ಚ್ನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಇಂದು ಟ್ರೋಫಿ ಅನಾವರಣಗೊಳಿಸಲಾಯಿತು. ನಟಿ ರಾಗಿಣಿ ದ್ವಿವೇದಿ, ನಟ ರಿಷಿ ಮತ್ತು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅವರು ಅತಿಥಿಗಳಾಗಿ ಪಾಲ್ಗೊಂಡು ಟ್ರೋಫಿ ಅನಾವರಣಗೊಳಿಸಿ ಶುಭ ಹಾರೈಸಿದರು. ಇದೇ ವೇಳೆ 20 ವಿವಿಧ ವಿಭಾಗಗಳ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ ಸಿನಿಮಾ, ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ ಬಿಡುಗಡೆಗೊಳಿಸಲಾಯಿತು. ಪುಕ್ಸಟ್ಟೆ ಲೈಫು, ರತ್ನನ್ ಪ್ರಪಂಚ, ಗರುಡ ಗಮನ ವೃಷಭ ವಾಹನ, ಬಡವ ರಾಸ್ಕಲ್ ಚಿತ್ರಗಳು ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.
BBMPಯ ‘ಸ್ವಚ್ಛ ಬೆಂಗಳೂರು – ನಮ್ಮ ನಗರ ನಮ್ಮ ಹೆಮ್ಮೆ’ ಘೋಷಣೆಯನ್ನು ಈ ಬಾರಿಯ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ motto ಆಗಿ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, “ಸಿನಿಮಾ ವಿಮರ್ಶಕರು ಹಮ್ಮಿಕೊಳ್ಳುವ ಈ ಪ್ರಶಸ್ತಿ ಸಮಾರಂಭ ಕಲಾವಿದರಿಗೆ ಸ್ಫೂರ್ತಿದಾಯಕ. ಸಮಾರಂಭವನ್ನು ಸುಂದರವಾಗಿ ಆಯೋಜಿಸುವ ಮೂಲಕ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಭಾರತದ ಇತರೆ ಚಿತ್ರರಂಗಗಳಿಗೆ ಮಾದರಿಯಾಗಲಿ. ದೊಡ್ಡ ಮಟ್ಟಕ್ಕೆ ಬೆಳೆಯಲಿ” ಎಂದು ಹಾರೈಸಿದರು. “ನನ್ನ ವೃತ್ತಿ ಬದುಕಿನ ಯಶಸ್ಸಿನಲ್ಲಿ ಸಿನಿಮಾ ಪತ್ರಕರ್ತರ ಕೊಡುಗೆಯನ್ನು ಎಂದೂ ಮರೆಯಲಾರೆ. ನಮ್ಮ ಕೆಲಸ ಗುರುತಿಸಿ ಅವರು ನೀಡುವ ಗೌರವಗಳು ನಮಗೆ ಸಂಜೀವಿನಿ” ಎಂದ ರಿಷಿ ತಮ್ಮ ಸಿನಿಮಾ ಜರ್ನಿಯಲ್ಲಿ ಆತ್ಮವಿಶ್ವಾಸ ತುಂಬಿದ ಪತ್ರಕರ್ತರನ್ನು ನೆನಪು ಮಾಡಿಕೊಂಡರು.
ಪ್ರಸ್ತುತ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿರುವ ಸದಾಶಿವ ಶೆಣೈ ಅವರು ಮೂಲತಃ ಸಿನಿಮಾ ಪತ್ರಕರ್ತರು. ‘ಲಂಕೇಶ್ ಪತ್ರಿಕೆ’ಯಲ್ಲಿ ಹಲವು ವರ್ಷಗಳ ಕಾಲ ಸಿನಿಮಾ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಅವರ ಬರಹಗಳು ಗಾಂಧಿನಗರದಲ್ಲಿ ಸದ್ದು ಮಾಡಿದ್ದವು. ಅವರು ನಿರ್ದೇಶಿಸಿದ ‘ಪ್ರಾರ್ಥನೆ’ ಸಿನಿಮಾ 2012ರಲ್ಲಿ ತೆರೆಕಂಡಿತ್ತು. “ನಮ್ಮ ಬರಹಗಳು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಉದ್ಯಮದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಸಿನಿಮಾ ಪತ್ರಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಸಿನಿಮಾ ಪತ್ರಕರ್ತರು ಚಿತ್ರಕಥೆ ರಚನೆ, ನಿರ್ದೇಶನದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಚಿತ್ರೋದ್ಯಮದ ಒಳನೋಟಗಳು ದಕ್ಕುತ್ತವೆ” ಎಂದರು. ಕಾರ್ಯಕ್ರಮದಲ್ಲಿ ಸದಾಶಿವ ಶೆಣೈ ಅವರನ್ನು ಸನ್ಮಾನಿಸಲಾಯಿತು. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ಆರಂಭಿಸಿದ ತಂಡದ ಪ್ರಮುಖರಲ್ಲೊಬ್ಬರಾದ ಪತ್ರಕರ್ತ ಶ್ಯಾಮ್ಪ್ರಸಾದ್ ಪ್ರಶಸ್ತಿ ಸಮಾರಂಭದ ಕುರಿತು ಮಾಹಿತಿ ನೀಡಿದರು. ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಸದ್ಯದಲ್ಲೇ ದಿನಾಂಕ ಘೋಷಣೆಯಾಗಲಿದೆ.
3ನೇ ಚಂದನವ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ – 2022 ನಾಮನಿರ್ದೇಶನ ಪಟ್ಟಿ ಈ ಕೆಳಕಂಡಂತಿದೆ..
- ಅತ್ಯುತ್ತಮ ಚಿತ್ರ
ಬಡವ ರಾಸ್ಕಲ್
ಗರುಡ ಗಮನ ವೃಷಭ ವಾಹನ
ಪುಕ್ಸಟ್ಟೆ ಲೈಫು
ರತ್ನನ್ ಪ್ರಪಂಚ
ಸಲಗ - ಅತ್ಯುತ್ತಮ ನಿರ್ದೇಶಕ
ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಅರವಿಂದ್ ಕುಪ್ಳೀಕರ್ (ಪುಕ್ಸಟ್ಟೆ ಲೈಫು)
ತರುಣ್ ಸುಧೀರ್ (ರಾಬರ್ಟ್)
ಬಿ.ಎಂ. ಗಿರಿರಾಜ್ (ಕನ್ನಡಿಗ)
ದುನಿಯಾ ವಿಜಯ್ (ಸಲಗ) - ಅತ್ಯುತ್ತಮ ನಟ
ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಧನಂಜಯ (ಬಡವ ರಾಸ್ಕಲ್)
ಸಂಚಾರಿ ವಿಜಯ್ (ಪುಕ್ಸಟ್ಟೆ ಲೈಫು)
ವಿ.ರವಿಚಂದ್ರನ್ (ದೃಶ್ಯ 2)
ಧನಂಜಯ (ರತ್ನನ್ ಪ್ರಪಂಚ) - ಅತ್ಯುತ್ತಮ ನಟಿ
ರಚಿತಾ ರಾಮ್ (ಲವ್ ಯೂ ರಚ್ಚು)
ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)
ಗಾನವಿ ಲಕ್ಷ್ಮಣ್ (ಹೀರೋ)
ನಿಶ್ವಿಕಾ ನಾಯ್ಡು ( ಸಖತ್)
ಆಶಿಕಾ ರಂಗನಾಥ್ (ಮದಗಜ) - ಅತ್ಯುತ್ತಮ ಚಿತ್ರಕಥೆ
ಅರವಿಂದ್ ಕುಪ್ಲಿಕರ್ – ಪುಕ್ಸಟ್ಟೆ ಲೈಫು
ರಾಜ್. ಬಿ ಶೆಟ್ಟಿ- ಗರುಡ ಗಮನ ವೃಷಭ ವಾಹನ
ತರುಣ್ ಶ್ರೀಧರ್ – ರಾಬರ್ಟ್
ದುನಿಯಾ ವಿಜಯ್, ಮಾಸ್ತಿ ಉಪ್ಪಾರಹಳ್ಳಿ – ಸಲಗ
ರೋಹಿತ್ ಪದಕಿ – ರತ್ನನ್ ಪ್ರಪಂಚ - ಅತ್ಯುತ್ತಮ ಪೋಷಕ ನಟ
ಪ್ರಮೋದ್ (ರತ್ನನ್ ಪ್ರಪಂಚ)
ರಂಗಾಯಣ ರಘು (ಬಡವ ರಾಸ್ಕಲ್)
ಅಚ್ಯುತ್ ಕುಮಾರ್ (ಪುಕ್ಸಟ್ಟೆ ಲೈಫು)
ಗೋಪಾಲ್ ದೇಶಪಾಂಡೆ (ಗರುಡ ಗಮನ ವೃಷಭ ವಾಹನ)
ಸಂಪತ್ ಕುಮಾರ್ (ದೃಶ್ಯ 2) - ಅತ್ಯುತ್ತಮ ಪೋಷಕ ನಟಿ
ಸ್ಪರ್ಶ ರೇಖಾ (ಬಡವ ರಾಸ್ಕಲ್)
ಉಮಾಶ್ರೀ (ರತ್ನನ್ ಪ್ರಪಂಚ)
ತಾರಾ (ಬಡವ ರಾಸ್ಕಲ್)
ಶ್ರುತಿ (ಭಜರಂಗಿ 2)
ಎಸ್ತರ್ ನರೋನಾ (ಲಂಕೆ) - ಅತ್ಯುತ್ತಮ ಬಾಲ ಕಲಾವಿದ
ಜಾನ್ಸನ್ ಡಿಸೋಜಾ (ರಾಬರ್ಟ್)
ಆದ್ಯ (ಕೋಟಿಗೊಬ್ಬ 3)
ಪ್ರಾಣ್ಯ ಪಿ. ರಾವ್ (ರೈಡರ್)
ಮಾಸ್ಟರ್ ಮಿಥುನ್ (ಅಕ್ಷಿ)
ಪರಮ್ ಸ್ವಾಮಿ (ಮೋಹನ್ ದಾಸ್) - ಅತ್ಯುತ್ತಮ ಸಂಗೀತ ನಿರ್ದೇಶಕ
ಚರಣ್ ರಾಜ್ (ಸಲಗ)
ಅರ್ಜುನ್ ಜನ್ಯ (ರಾಬರ್ಟ್)
ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ)
ವಾಸುಕಿ ವೈಭವ್ (ಬಡವ ರಾಸ್ಕಲ್)
ಮಣಿಕಾಂತ್ ಕದ್ರಿ (ಲವ್ ಯೂ ರಚ್ಚು) - ಅತ್ಯುತ್ತಮ ಹಿನ್ನೆಲೆ ಸಂಗೀತ
ಮಿಥುನ್ ಮುಕುಂದನ್ (ಗರುಡ ಗಮನ ವೃಷಭ ವಾಹನ)
ಪೂರ್ಣಚಂದ್ರ ತೇಜಸ್ವಿ (ಪುಕ್ಸಟ್ಟೆ ಲೈಫು)
ಅರ್ಜುನ್ ಜನ್ಯ.. (ಭಜರಂಗಿ 2)
ಚರಣ್ ರಾಜ್ (ಸಲಗ)
ವಿ.ಹರಿಕೃಷ್ಣ (ರಾಬರ್ಟ್) - ಅತ್ಯುತ್ತಮ ಗೀತ ಸಾಹಿತ್ಯ
ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್)
ಕೆ.ಕಲ್ಯಾಣ್ (ನೀ ಸಿಗೋವರೆಗೂ, ಭಜರಂಗಿ 2)
ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)
ಸಂತೋಷ್ ಆನಂದ್ ರಾಮ್ (ಪಾಠಶಾಲಾ, ಯುವರತ್ನ)
ಧನಂಜಯ್ (ಗಿಣಿಯೇ, ಬಡವ ರಾಸ್ಕಲ್) - ಅತ್ಯುತ್ತಮ ಗಾಯಕ
ವಾಸುಕಿ ವೈಭವ್ ( ಆಗಾಗ ನೆನಪಾಗುತಾಳೆ, ಬಡವ ರಾಸ್ಕಲ್)
ವಿಜಯ ಪ್ರಕಾಶ್ (ನೆನಪಿನ ಹುಡುಗಿಯೇ, ಹೀರೋ)
ಸಂಜಿತ್ ಹೆಗಡೆ (ಕೀಲಿ ಕೊಟ್ಟ ಗೊಂಬೆ, ರತ್ನನ್ ಪ್ರಪಂಚ)
ಸಿದ್ ಶ್ರೀರಾಮ್ (ಹಾಯಾಗಿದೆ.. ಟಾಮ್ ಅಂಡ್ ಜರ್ರಿ)
ವಿಜಯ ಪ್ರಕಾಶ್ (ಉಡುಪಿ ಹೋಟಲ್, ಬಡವ ರಾಸ್ಕಲ್) - ಅತ್ಯುತ್ತಮ ಗಾಯಕಿ
ಚೈತ್ರಾ ಆಚಾರ್ಯ (ಸೋಜಿಗದ, ಗರುಡ ಗಮನ ವೃಷಭ ವಾಹನ)
ಶ್ರೇಯಾ ಘೋಶಾಲ್ (ನೀ ನಾದೆನಾ, ಯುವರತ್ನ)
ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)
ಐಶ್ವರ್ಯ ರಂಗರಾಜನ್ (ಬೇಬಿ ಡಾನ್ಸ್, ರಾಬರ್ಟ್)
ಅನುರಾಧ ಭಟ್ (ಪಟಾಕಿ ಪೋರಿಯೋ, ಕೋಟಿಗೊಬ್ಬ 3) - ಅತ್ಯುತ್ತಮ ಛಾಯಾಗ್ರಹಣ
ಪ್ರೀತಾ ಜಯರಾಮನ್ (ಬಡವ ರಾಸ್ಕಲ್)
ಸುಧಾಕರ್ ರಾಜ್ (ರಾಬರ್ಟ್)
ಸ್ವಾಮಿ ಗೌಡ (ಭಜರಂಗಿ 2)
ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)
ಅದ್ವೈತ ಗುರುಮೂರ್ತಿ (ಪುಕ್ಸಟ್ಟೆ ಲೈಫು) - ಅತ್ಯುತ್ತಮ ಸಂಭಾಷಣೆ
ಸಂತೋಷ್ ಆನಂದ್ ರಾಮ್ (ಯುವರತ್ನ)
ಸುಮನ್ ಜಾದುಗಾರ್ ಮತ್ತು ಪ್ರವೀಣ್ ಕುಮಾರ್ (ನಿನ್ನ ಸನಿಹಕೆ)
ಮಾಸ್ತಿ (ಸಲಗ)
ರೋಹಿತ್ ಪದಕಿ (ರತ್ನನ್ ಪ್ರಪಂಚ)
ಶಂಕರ್ ಗುರು (ಬಡವ ರಾಸ್ಕಲ್) - ಅತ್ಯುತ್ತಮ ಸಂಕಲನ
ಸುರೇಶ್ ಆರ್ಮುಗಂ (ಪುಕ್ಸಟ್ಟೆ ಲೈಫು)
ಪ್ರತೀಕ್ ಶೆಟ್ಟಿ (ಹೀರೋ)
ಕೆ.ಎಂ. ಪ್ರಕಾಶ್ (ರೈಡರ್)
ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)
ದೀಪು ಎಸ್ ಕುಮಾರ್ (ಸಲಗ) - ಅತ್ಯುತ್ತಮ ಕಲಾ ನಿರ್ದೇಶನ
ಮೋಹನ್ ಬಿ ಕೆರೆ (ಪೊಗರು)
ಮೋಹನ್ ಬಿ ಕೆರೆ (ರಾಬರ್ಟ್)
ರವಿ ಸಂತೆಹೈಕ್ಳು ( ಭಜರಂಗಿ 2)
ರಾಜೇಶ್ ಸಜಿಪ ಮತ್ತು ವಿಕ್ರಮ್ ದೇವಾಡಿಗ (ಗರುಡ ಗಮನ ವೃಷಭ ವಾಹನ )
ಮೋಹನ್ ಬಿ ಕೆರೆ (ರೈಡರ್) - ಅತ್ಯುತ್ತಮ ನೃತ್ಯ ನಿರ್ದೇಶಕ
ಭೂಷಣ್ (ಬೇಬಿ ಡಾನ್ಸ್, ರಾಬರ್ಟ್)
ಮುರುಳಿ (ಕರಾಬು, ಪೊಗರು)
ಎ.ಹರ್ಷ (ಭಜರಂಗಿ 2)
ಜಾನಿ ಮಾಸ್ಟರ್ (ಫೀಲ್ ದಿ ಪವರ್, ಯುವರತ್ನ)
ಭೂಷಣ್ (ಡವ ಡವ, ರೈಡರ್) - ಅತ್ಯುತ್ತಮ ಸಾಹಸ ನಿರ್ದೇಶಕ
ಡಿಫರೆಂಟ್ ಡ್ಯಾನಿ (ಕಲಿವೀರ)
ರವಿ ವರ್ಮಾ (ಭಜರಂಗಿ 2)
ವಿಕ್ರಮ್ (ಹೀರೋ)
ರಾಮ ಲಕ್ಷ್ಮಣ (ರಾಬರ್ಟ್)
ವಿನೋದ್ (ಸಲಗ) - ಅತ್ಯುತ್ತಮ ವಿಎಫ್ಎಕ್ಸ್
ಹೀರೋ
ಭಜರಂಗಿ 2
ಪೊಗರು
100
ರಾಬರ್ಟ್