Biffesನಲ್ಲಿ ಈ ಬಾರಿ ಆನ್‌ಲೈನ್‌ ಸ್ಟ್ರೀಮಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಸಾಧ್ಯವಾಗದವರು ಮಾರ್ಚ್‌ 4ರಿಂದ 10ರವರೆಗೆ ಆನ್‌ಲೈನ್‌ನಲ್ಲೇ ಸಿನಿಮಾಗಳನ್ನು ವೀಕ್ಷಿಸಬಹುದು.

ಇದೇ ಮೊದಲ ಬಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಹೈಬ್ರಿಡ್‌ ಮಾದರಿಯಲ್ಲಿ ನಡೆಯುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಲು ಸಾಧ್ಯವಾಗದವರು ಮಾರ್ಚ್‌ 4ರಿಂದ 10ರವರೆಗೆ ಆನ್‌ಲೈನ್‌ನಲ್ಲೇ ಸಿನಿಮಾಗಳನ್ನು ವೀಕ್ಷಿಸಬಹುದು. Sundance, Rotterdam, Toronto ಸೇರಿದಂತೆ ಕೆಲವೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ಈ ಹಿಂದೆ ಆನ್‌ಲೈನ್‌ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಕೋವಿಡ್‌ ಸಂದರ್ಭದಲ್ಲಿ ಇತರೆ ಕೆಲವು ಪ್ರಮುಖ ಚಿತ್ರೋತ್ಸವಗಳು ಈ ಮಾದರಿಗೆ ಮೊರೆ ಹೋಗಿದ್ದು, ಸಿನಿಪ್ರೇಮಿಗಳಿಗೆ ಇದು ವರವಾಗಿದೆ.

ಆನ್‌ಲೈನ್‌ ಸ್ಟ್ರೀಮಿಂಗ್‌ಗೆ ರಿಜಿಸ್ಟರ್‌ ಮಾಡಿಸಿದವರು ಮಾರ್ಚ್‌ 4, ಶುಕ್ರವಾರದಿಂದ online.biffes.org ಗೆ ಲಾಗಿನ್‌ ಆಗಿ ಪ್ರತಿದಿನ ಹತ್ತು ಸಿನಿಮಾಗಳನ್ನು
ವೀಕ್ಷಿಸಬಹುದು. ಬೆಳಗ್ಗೆ 9 ಗಂಟೆಗೆ ಸ್ಕ್ರೀನಿಂಗ್‌ ಆರಂಭವಾಗಲಿದ್ದು, ಸಿನಿಮಾ 24 ಗಂಟೆಗಳ ಅವಧಿಯವರೆಗೆ ವೀಕ್ಷಣೆಗೆ ಲಭ್ಯವಿರುತ್ತದೆ. ಈ ಟೈಮ್‌ಸ್ಲಾಟ್‌ನಲ್ಲಿ ಯಾವುದೇ ಚಿತ್ರವನ್ನು ಒಂದಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲು ಅವಕಾಶವಿದೆ. ಮರುದಿನ ವೀಕ್ಷಕರಿಗಾಗಿ ಹೊಸದಾಗಿ 10 ಸಿನಿಮಾಗಳನ್ನು ಅಪ್‌ಲೋಡ್‌ ಮಾಡಲಾಗುವುದು. Biffes ತಂಡದವರು ಆನ್‌ಲೈನ್‌ ಸಿನಿಮಾಗಳ ಟ್ರಾಫಿಕ್‌ ಮಾನಿಟರ್‌ ಮಾಡುತ್ತಿರುತ್ತಾರೆ. ಯಾವುದಾದರೂ ಸಿನಿಮಾಗೆ ಹೆಚ್ಚು ಡಿಮಾಂಡ್‌ ಕಂಡುಬಂದರೆ, ಈ ಚಿತ್ರವನ್ನು 36 ಅಥವಾ 48 ಗಂಟೆಗಳ ಕಾಲ ವೆಬ್‌ಸೈಟ್‌ನಲ್ಲಿ ಉಳಿಸುವರು.

ರಿಜಿಸ್ಟರ್‌ ಮಾಡಿಕೊಂಡ ವೀಕ್ಷಕರು Biffes ಸಿಬ್ಬಂದಿ ಕಳುಹಿಸಿಕೊಡುವ username ಮತ್ತು passwordನೊಂದಿಗೆ ಸಿನಿಮಾಗಳನ್ನು ಅಕ್ಸೆಸ್‌ ಮಾಡಬಹುದು. OTT ಪ್ಲಾಟ್‌ಫಾರ್ಮ್‌ಗಳಂತೆ ಒಂದು ರಿಜಿಸ್ಟರ್ಡ್‌ ಅಕೌಂಟ್‌ ನಾಲ್ಕು ಡಿವೈಸ್‌ಗಳಲ್ಲಿ ಕೆಲಸ ಮಾಡುತ್ತದೆ. ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಬಹುದು. ಭಾರತದಲ್ಲಿ ಮೊದಲ ಬಾರಿಗೆ ಎನ್ನುವಂತೆ Biffes ಸಿನಿಮಾಗಳನ್ನು ಟೀವಿಯಲ್ಲೂ ವೀಕ್ಷಿಸಬಹುದಾಗಿದೆ. Fire Tv App storeನಲ್ಲಿ Biffes App ಡೌನ್‌ಲೋಡ್‌ ಮಾಡಿಕೊಂಡು ಅಗತ್ಯ ಸೂಚನೆಗಳನ್ನು ಪೂರ್ಣಗೊಳಿಸಿ ಸಿನಿಮಾ ವೀಕ್ಷಿಸಬಹುದಾಗಿದೆ. biffes.org ನಲ್ಲಿ ಲಾಗಿನ್‌ ಆಗಿ 400 ರೂಪಾಯಿ ರಿಜಿಸ್ಟ್ರೇಷನ್‌ ದರ ಪಾವತಿಸಿ ಆನ್‌ಲೈನ್‌ ಸ್ಟ್ರೀಮಿಂಗ್‌ಗೆ ಲಾಗಿನ್‌ ಆಗಬಹುದು.

ಜಾಗತಿಕ, ಭಾರತೀಯ ಮತ್ತು ಏಷ್ಯಾ ಸ್ಪರ್ಧಾ ವಿಭಾಗದ ಕೆಲವು ಹೈ ಪ್ರೊಫೈಲ್‌ ಸಿನಿಮಾಗಳು Biffesನಲ್ಲಿ ಸ್ಕ್ರೀನ್‌ ಆಗಲಿವೆ. Sonia Liza Kenterman ನಿರ್ದೇಶನದ ‘Tailer’, Omar El Zohairy ನಿರ್ದೇಶನದ ‘Feathers’, Mohammed Rasoulof ನಿರ್ದೇಶನದ ‘There is No Evlil’, Lemohang Jeremaih Mosese ಅವರ ‘This Is Not A Burial, It’s Resurrection’ ಚಿತ್ರೋತ್ಸವದ ಕೆಲವು ಪ್ರಮುಖ ಸಿನಿಮಾಗಳು. ಮಾರ್ಚ್‌ 3ರ ಗುರುವಾರ ಉದ್ಘಾಟನಾ ಚಿತ್ರವಾಗಿ ‘Tailor’ ಪ್ರದರ್ಶನಗೊಳ್ಳಲಿದೆ.

LEAVE A REPLY

Connect with

Please enter your comment!
Please enter your name here