ಕೇರಳ ರಾಜ್ಯ ಸರ್ಕಾರ ನವೆಂಬರ್‌ 1ರಿಂದ ‘CSpace’ ಓಟಿಟಿ ಪ್ಲಾಟ್‌ಫಾರ್ಮ್‌ ಆರಂಭಿಸುತ್ತಿದೆ. ಈ ಯೋಜನೆಯಿಂದ ಕೇರಳ ಸಿನಿಮೋದ್ಯಮಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದು ಎಂದು ಕೇರಳ ಸಂಸ್ಕೃತಿ ಸಚಿವ ಸಾಜಿ ಚೆರಿಯನ್‌ ಹೇಳಿದ್ದಾರೆ.

ದೇಶದಲ್ಲಿ ಮೊದಲ ಪ್ರಯೋಗ ಎನ್ನುವಂತೆ ಕೇರಳ ರಾಜ್ಯ ಸರ್ಕಾರ ಸ್ವಾಮ್ಯದ ಓಟಿಟಿ ಪ್ಲಾಟ್‌ಫಾರ್ಮ್‌ ಆರಂಭವಾಗುತ್ತಿದೆ. ‘CSpace’ ಎಂದು ಓಟಿಟಿಗೆ ಶೀರ್ಷಿಕೆ ನಿಗದಿಯಾಗಿದ್ದು, ನವೆಂಬರ್‌ 1ರಿಂದ ಪ್ಲಾಟ್‌ಫಾರ್ಮ್‌ ಕಾರ್ಯಾರಂಭ ಮಾಡಲಿದೆ. ಕೇರಳ ಸರ್ಕಾರದ KSFDC (Kerala State Film Development Coroporation) ಅಡಿ ಕಾರ್ಯನಿರ್ವಹಿಸಲಿರುವ ‘CSpace’ನಲ್ಲಿ ಸಿನಿಮಾ, ಸಾಕ್ಷ್ಯಚಿತ್ರ, ಕಿರುಚಿತ್ರಗಳು ಸ್ಟ್ರೀಮ್‌ ಆಗಲಿವೆ. ಜೂನ್‌ 1ರಿಂದ ಓಟಿಟಿಗೆ ರಿಜಿಸ್ಟ್ರೇಷನ್‌ ಆರಂಭವಾಗಲಿದೆ. “ಮಲಯಾಳಂ ಸಿನಿಮಾದ ಬೆಳವಣಿಗೆಗೆ CSpace ಇಂಬು ನೀಡಲಿದೆ. ಇದರಿಂದ ಮಲಯಾಳಂ ಚಿತ್ರರಂಗದ ಥಿಯೇಟರ್‌ ಬಿಸ್ನೆಸ್‌ಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದು. ಸಿನಿಮಾಗಳು ಥಿಯೇಟರ್‌ಗಳಲ್ಲಿ ತೆರೆಕಂಡ ನಂತರವೇ ಓಟಿಟಿಗೆ ಬರಲಿವೆ. Profit sharing ವಿಧಾನದಲ್ಲಿ ಉತ್ತಮ ತಾಂತ್ರಿಕ ಸೌಲಭ್ಯ ಮತ್ತು ಪಾರದರ್ಶನ ನೀತಿಯೊಂದಿಗೆ ಓಟಿಟಿ ಕಾರ್ಯನಿರ್ವಹಿಸಲಿದೆ” ಎಂದಿದ್ದಾರೆ ಸಚಿವ ಚೆರಿಯನ್‌.

ಥಿಯೇಟರ್‌ಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಗದ, ಚಿತ್ರೋತ್ಸವಗಳಲ್ಲಿ ಉತ್ತಮ ಪ್ರಶಂಸೆ ಪಡೆದ ಕಲಾತ್ಮಕ ಸಿನಿಮಾಗಳಿಗೆ ‘CSpace’ ಉತ್ತಮ ವೇದಿಕೆಯಾಗಲಿದೆ. ಕೇರಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿನಿಮಾ, ಡಾಕ್ಯುಮೆಂಟರಿಗಳೂ ಇಲ್ಲಿ ಲಭ್ಯವಾಗಲಿವೆ. KSFDC ಮ್ಯಾನೇಜಿಂಗ್‌ ಡೈರೆಕ್ಟರ್‌ ಮಾಯಾ ಈ ಬಗ್ಗೆ ಮಾತನಾಡಿ, “ಈ ಓಟಿಟಿಯಲ್ಲಿ ನಗದಿಪಡಿಸಿದ ದರವನ್ನು ಪಾವತಿಸಿ ನಿರ್ದಿಷ್ಟ ಸಿನಿಮಾ ವೀಕ್ಷಿಸಬಹುದಾಗಿದೆ. ಅವರು ಪಾವತಿಸಿದ ಟಿಕೆಟ್‌ ದರದ ಒಂದು ಶೇರ್‌ ಚಿತ್ರದ ನಿರ್ಮಾಪಕರಿಗೆ ಹೋಗಲಿದೆ” ಎಂದಿದ್ದಾರೆ. KSFDC 1975ರಲ್ಲಿ ಆರಂಭವಾಗಿತ್ತು. ಸಿನಿಮಾಗೆ ಸಂಬಂಧಿಸಿದಂತೆ ಭಾರತದಲ್ಲಿ ಆರಂಭವಾದ ಮೊದಲ ಪಬ್ಲಿಕ್‌ ಸೆಕ್ಟರ್‌ ಕಾರ್ಪೋರೇಷನ್‌ ಇದು.

LEAVE A REPLY

Connect with

Please enter your comment!
Please enter your name here