ನಿರ್ದೇಶಕ ಅಜಯ್ ಸಿಂಗ್ ಜಾಣತನದಿಂದ ಎಲ್ಲಿಯೂ ಲೂಸ್ ಎಂಡ್ ಬಿಡದೇ, ಸಸ್ಪೆನ್ಸ್ ಬಿಟ್ಟುಕೊಡದೇ ಕಥೆಯನ್ನು ಮುಗಿಸುತ್ತಾರೆ. ನಾಯಕಿ ಯಾಮಿ ಗೌತಮ್‌ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹೀರೋ ಸನ್ನಿ ಕೌಶಲ್‌ ಪಾತ್ರವೇ ಕೊಂಚ ಸಪ್ಪೆ. Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ ಹಿಂದಿ ಸಿನಿಮಾ.

ಇದೊಂದು ಹೊಸಯುಗದ ಸ್ಮಾರ್ಟ್ ಕ್ರೈಂ ಸಿನಿಮಾ. ಕನ್ನಡ ಅವತರಣಿಕೆ ಆಗಿದ್ದಿದ್ದರೆ ಇದಕ್ಕೆ ‘ಯಾವುದು ಸತ್ಯ ಯಾವುದು ಮಿಥ್ಯ’ ಎಂದು ಹೆಸರಿಡಬಹುದಾಗಿತ್ತು! ಪ್ಲೇನ್ ಹೈಜ್ಯಾಕ್ ಬಗ್ಗೆ ನಾನು ಇತ್ತೀಚೆಗೆ ನನ್ನ ‘ಕೊನೆಗಾಣದ ರಾತ್ರಿ’ ಪುಸ್ತಕದಲ್ಲಿ ಬರೆದಿದ್ದೆ, ವಜ್ರ ಕಳುವಿನ ಬಗ್ಗೆ ‘ವಜ್ರಬೇಟೆ’ ಎಂಬ ಕಥೆಯನ್ನು ಮೊದಲು ಬರೆದಿದ್ದೆ. ಅವರೆಡೂ ನೆನಪಿಗೆ ಬಂದಿತಾದರೂ ಈ ಸಿನಿಮಾದ್ದು ಪ್ರತ್ಯೇಕ ಮೋಸಗಾರರ ವ್ಯೂಹದ ಕಥೆ. ಈಗಿನ ಕಾಲದ ಹೊಸ ಕ್ರೈಮ್ ಚಿತ್ರಗಳಲ್ಲಿ ಯಾರೂ ಪಕ್ಕಾ ಒಳ್ಳೆಯವರು ಅಥವಾ ಕೆಟ್ಟವರು ಇರುವುದಿಲ್ಲ, ಒಬ್ಬರಿಗಿಂತ ಇನ್ನೊಬ್ಬರು ಮಹಾ ಚಾಲಾಕಿ ಮೋಸಗಾಗರೇ.. ಗ್ರೇ ಪಾತ್ರಗಳು!

ಇದರಲ್ಲಿ ಒಬ್ಬ ಗಗನ ಸಖಿ (ಯಾಮಿ ಗೌತಮ್) ಮತ್ತು ಆಕೆಯ ಬಾಯ್ ಫ್ರೆಂಡ್ (ಸನ್ನಿ ಕೌಶಲ್) ಒಂದು ಸಾಲ ತೀರಿಸುವ ನೆಪ ಎಂದು 120 ಕೋಟಿ ರೂಪಾಯಿ ಬೆಲೆಯ ವಜ್ರಗಳನ್ನು ಕಳುವು ಮಾಡುವ ಪ್ಲ್ಯಾನ್‌ ಮಾಡುತ್ತಾರೆ. ಅದೂ ಹಾರುತ್ತಿರುವ ವಿಮಾನದ ಪ್ರಯಾಣದಲ್ಲಿ! ಅವರು ಅದನ್ನು ಸಾಧಿಸುವ ಮೊದಲೇ ಅದೇ ವಿಮಾನ ಅಪಹರಣಕ್ಕೀಡಾಗುತ್ತದೆ. ಕಾಶ್ಮೀರಿ ಉಗ್ರನೊಬ್ಬನನ್ನು ಬಿಡಿಸಲೆಂದು ಭಯೋತ್ಪಾದಕರು ವಿಮಾನವನ್ನು ಹೈಜಾಕ್‌ ಮಾಡುತ್ತಾರೆ. ಈಗ ವಜ್ರ ಕಳ್ಳರು ಗೆಲ್ಲುತ್ತಾರೋ, ನಾಯಕ ನಾಯಕಿ ಗೆಲ್ಲುತ್ತಾರೋ ಅಥವಾ ವಿಮಾನ ಕದ್ದವರು ಗೆಲ್ಲುತ್ತಾರೋ ಎಂಬ ರೋಚಕ ಕ್ಯಾಟ್ ಅಂಡ್ ಮೌಸ್ ಆಟ ಶುರುವಾಗುತ್ತದೆ.

ನಿರ್ದೇಶಕ ಅಜಯ್ ಸಿಂಗ್ ಜಾಣತನದಿಂದ ಎಲ್ಲಿಯೂ ಲೂಸ್ ಎಂಡ್ ಬಿಡದೇ, ಸಸ್ಪೆನ್ಸ್ ಬಿಟ್ಟುಕೊಡದೇ ಕಥೆಯನ್ನು ಮುಗಿಸುತ್ತಾರೆ. ಈ ಸಿನಿಮಾಗೆ ನಾನು 5ಕ್ಕೆ ನಾಲ್ಕು ಸ್ಟಾರ್‌ ಕೊಡಲು ಬಯಸುತ್ತೇನೆ. ಮುಖ್ಯ ಕಲಾವಿದರ ಅಭಿನಯದಲ್ಲಿ ಪಕ್ವತೆ ಇನ್ನೂ ಬೇಕಿತ್ತು ಎನ್ನುವ ಕಾರಣಕ್ಕೆ ಒಂದು ಸ್ಟಾರ್‌ ಕಡಿತಗೊಳಿಸಬಹುದು. ನಾಯಕಿ ಯಾಮಿ ಗೌತಮ್ ಸಮರ್ಥರಿದ್ದಾರೆ. ಆದರೆ ನಾಯಕನೇ ತುಸು ಸಪ್ಪೆ ಎನಿಸುತ್ತಾರೆ. ಕ್ಲೈಮ್ಯಾಕ್ಸ್‌ ಅನ್ನು ಇನ್ನೂ ಕನ್ವಿನ್ಸಿಂಗ್‌ ಆಗಿ ನಿರೂಪಿಸಬಹುದಿತ್ತು. ಅವರಸರದಲ್ಲಿ ಮುಗಿಸಿದ್ದಾರೆ ಎನಿಸುತ್ತದೆ. ಒಟ್ಟಾರೆ ಕುತೂಹಲಭರಿತ, ಎಂಜಾಯ್‌ ಮಾಡಬಹುದಾದ ಸಿನಿಮಾ. ‘ಚೋರ್‌ ನಿಕಲ್‌ ಕೆ ಭಾಗಾ’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here