ತೆಲುಗು ನಟ ರಾಮ್‌ ಚರಣ್‌ ಮತ್ತು ಉಪಾಸನಾ ದಂಪತಿ ಪೋಷಕರಾಗಿ ಬಡ್ತಿ ಹೊಂದಿದ್ದಾರೆ. ಇಂದು ಬೆಳಗ್ಗೆ ಉಪಾಸನಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಚಿರಂಜೀವಿ ಕುಟುಂಬ ಸಂಭ್ರಮದಲ್ಲಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ರಾಮ್‌ ಚರಣ್‌ ದಂಪತಿಗಾಗಿ ‘ನಾಟು ನಾಟು’ ಸಾಂಗ್‌ ಖ್ಯಾತಿಯ ಗಾಯಕ ಕಾಲ ಭೈರವ ಅವರು ಕಂಪೋಸ್‌ ಮಾಡಿದ ವಿಶೇಷ ಟ್ಯೂನ್‌ ಇಲ್ಲಿದೆ.

ಜನಪ್ರಿಯ ತೆಲುಗು ನಟ ರಾಮ್‌ ಚರಣ್‌ ಅವರಿಗೆ ತಂದೆಯಾಗಿ ಬಡ್ತಿ ಸಿಕ್ಕಿದೆ. ಇಂದು ಬೆಳಗ್ಗೆ ಅವರ ಪತ್ನಿ ಉಪಾಸನಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಹಾಸ್ಪೆಟಲ್‌ ಬುಲೆಟಿನ್‌, ‘Miss Upasana Kamineni and Ram Charan Konidela had a baby girl on 20th June 2023, at Apollo hospital Jubilee Hills Hyderabad. The baby and mother are doing well’ ಎಂದು ಈ ಬಗ್ಗೆ ಮಾಹಿತಿ ನೀಡಿದೆ. 2012ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದ ರಾಮ್‌ ಚರಣ್‌ ಮತ್ತು ಉಪಾಸನಾ ದಂಪತಿಗೆ ಇದು ಮೊದಲ ಮಗು. ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ರಾಮ್‌ ಚರಣ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಶುಭಾಶಯ, ಅಭಿನಂದನೆ ಕೋರುತ್ತಿದ್ದಾರೆ.

‘RRR’ ಸಿನಿಮಾದ ‘ನಾಟು ನಾಟು’ ಹಾಡಿನ ಗಾಯಕ ಕಾಲ ಭೈರವ ಅವರು ರಾಮ್‌ ಚರಣ್‌ – ಉಪಾಸನಾ ದಂಪತಿಯ ಸಂಭ್ರಮಕ್ಕೆ ನಿನ್ನೆ ಒಂದು ಟ್ಯೂನ್‌ ಕಂಪೋಸ್‌ ಮಾಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ರಾಮ್‌ ಚರಣ್‌ ದಂಪತಿಗೆ ಈ ಸಂಯೋಜನೆ ಖುಷಿ ಕೊಟ್ಟಿತ್ತು. ರಾಮ್‌ ಚರಣ್‌ ಅಭಿಮಾನಿಗಳಿಗೂ ಈ ಸಂಯೋಜನೆಯನ್ನು ಹಂಚಿಕೊಂಡಿದ್ದರು. ನಟ ರಾಮ್‌ ಚರಣ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಈ ಟ್ಯೂನ್‌ ಹಾಕಿ, ‘Thank you @kaalabhairava7, for creating this tune for us. We are sure this melody will bring happiness and joy to millions of children across the globe..’ ಎಂದು ಕಾಲಭೈವರ ಅವರಿಗೆ ಧನ್ಯವಾದ ಹೇಳಿದ್ದರು.

ನಟ ರಾಮ್‌ ಚರಣ್‌ ಸದ್ಯ ಶಂಕರ್‌ ನಿರ್ದೇಶನದ PAN ಇಂಡಿಯಾ ಸಿನಿಮಾ ‘ಗೇಮ್‌ ಚೇಂಜರ್‌’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕೀರಾ ಅಡ್ವಾನಿ ಈ ಚಿತ್ರದ ನಾಯಕಿ. ಎಸ್‌ ಥಮನ್‌ ಸಂಗೀತ ಸಂಯೋಜನೆಯ ಸಿನಿಮಾದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಿಲ್ಲ. ‘RRR’ ಸಿನಿಮಾದ ದೊಡ್ಡ ಯಶಸ್ಸಿನ ನಂತರ ರಾಮ್‌ ಚರಣ್‌ ಸದಾ ಸುದ್ದಿಯಲ್ಲಿರುವ ಹೀರೋ. ಉಪಾಸನಾ ಅವರು ಪ್ರಗ್ನೆನ್ಸೀ ಘೋಷಿಸಿದ್ದು, ಸೀಮಂತ ಸಮಾರಂಭ ಎಲ್ಲವೂ ಭರ್ಜರಿ ಸುದ್ದಿಯಾಗಿದ್ದವು. ನಿನ್ನೆ ರಾಮ್‌ ಚರಣ್‌ ಪತ್ನಿ ಉಪಾಸನಾ ಅವರು ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ ಸಂದರ್ಭದ ವೀಡಿಯೋ ಇಂಟರ್‌ನೆಟ್‌ನಲ್ಲಿ ಓಡಾಡಿತ್ತು.

Previous articleಟಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕ ರಾಕೇಶ್‌ ಮಾಸ್ಟರ್‌ ನಿಧನ
Next articleಹೊಸಯುಗದ ಸ್ಮಾರ್ಟ್‌ ಕ್ರೈಂ ಡ್ರಾಮಾ ‘ಚೋರ್‌ ನಿಕಲ್‌ ಕೆ ಭಾಗಾ’

LEAVE A REPLY

Connect with

Please enter your comment!
Please enter your name here