ಕ್ರೌಡ್‌ ಫಂಡಿಂಗ್‌ ಮೂಲಕ ತಯಾರಾಗುತ್ತಿದೆ ಮತ್ತೊಂದು ಕನ್ನಡ ಸಿನಿಮಾ ‘ಪರಂವಃ’. ಐದು ತಿಂಗಳ ಹಿಂದೆ ಟ್ರೈಲರ್‌ ಮೂಲಕ ಗಮನ ಸೆಳೆದಿದ್ದ ಸಿನಿಮಾ ಈಗ ಲಿರಿಕಲ್‌ ವೀಡಿಯೋ ಹಾಡೊಂದನ್ನು ಬಿಡುಗಡೆಗೊಳಿಸಿದೆ. ನಾಗೇಶ್‌ ಕುಂದಾಪುರ ರಚನೆಯ ‘ನೂರಾರು ರಂಗಿರೋ’ ಹಾಡಿಗೆ ಅಪರಾಜಿತ್‌ ಮತ್ತು ಜಾಸ್‌ ಜಾಸ್ಸಿ ಸಂಗೀತ ಸಂಯೋಜಿಸಿದ್ದಾರೆ.

‘ಶಿವನ ಢಮರುಗದಿಂದ ಹೊಮ್ಮುವ ನಾದಕ್ಕೆ ಪರಂವಃ ಎನ್ನುತ್ತಾರೆ. ನಮ್ಮ ಸಿನಿಮಾದ ಕತೆಗೆ ಈ ಪದ ಸೂಕ್ತವೆಂಬ ಕಾರಣಕ್ಕೆ ಇದೇ ಹೆಸರಿಟ್ಟಿದ್ದೇವೆ. ಸಿನಿಮಾದಲ್ಲಿ ದೇಸಿಕಲೆ ವೀರಗಾಸೆ ಹಿನ್ನೆಲೆಯಲ್ಲಿ ತಂದೆ – ಮಗನ ಬಾಂಧವ್ಯದ ಕತೆ ಹೇಳುತ್ತಿದ್ದೇವೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್, ಥ್ರಿಲ್ಲರ್, ಆ್ಯಕ್ಷನ್ ಕೂಡ ಸಮಪ್ರಮಾಣದಲ್ಲಿವೆ’ ಎನ್ನುತ್ತಾರೆ ‘ಪರಂವಃ’ ಚಿತ್ರದ ನಾಯಕ ಸಂತೋಷ್‌ ಕೈದಾಳ. ವಾರಗಳ ಹಿಂದೆ ಅವರು ‘ಭೂರಮೇಲಿ’ ಲಿರಿಕಲ್‌ ವೀಡಿಯೋ ರಿಲೀಸ್‌ ಮಾಡಿದ್ದರು. ಈಗ ಅವರ ಸಿನಿಮಾದ ‘ನೂರಾರು ರಂಗಿರೋ’ ಸಾಂಗ್‌ ಬಿಡುಗಡೆಯಾಗಿದೆ. ನಾಯಕ – ನಾಯಕಿಯ ಪ್ರೀತಿಯನ್ನು ಹೇಳುವ ಈ ಗೀತೆಯನ್ನು ನಾಗೇಶ್‌ ಕುಂದಾಪುರ ರಚಿಸಿದ್ದಾರೆ. ಅಪರಾಜಿತ್‌ ಮತ್ತು ಜಾಸ್‌ ಜಾಸ್ಸಿ ಸಂಗೀತ ಸಂಯೋಜಿಸಿದ್ದಾರೆ.

ನಟ ಪ್ರೇಮ್‌ ಹಾಡು ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ‘ಈ ಸಿನಿಮಾ ತಂಡದ ಬಗ್ಗೆ ತಿಳಿದು ಖುಷಿಯಾಯಿತು. ಸುಮಾರು 200 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾ. ಸಿನಿಮಾ ಬಗ್ಗೆ ಆಸಕ್ತಿಯಿರುವ ಪ್ರೇಕ್ಷಕರೇ ನಿರ್ಮಾಣ ಮಾಡಿದ್ದಾರೆ ಅನಿಸುತ್ತದೆ. ಹೊಸತಂಡದ ಹೊಸ ಪ್ರಯತ್ನಗಳನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಪರಂವಃ ಸಹ ಸೇರಲಿ’ ಎನ್ನುವುದು ಪ್ರೇಮ್‌ ಹಾರೈಕೆ. ಪ್ರೇಮ್ ಸಿಡ್ಗಲ್ ಮತ್ತು ಮೈತ್ರಿ ಜೆ ಕಶ್ಯಪ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ತಂದೆಯ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇದ್ದು, ಈ ಪಾತ್ರದಲ್ಲಿ ರಂಗಕರ್ಮಿ ಗಣೇಶ್ ಹೆಗ್ಗೋಡು ನಟಿಸಿದ್ದಾರೆ. ನಾಜರ್ ಮತ್ತು ಶ್ರುತಿ ಚಿತ್ರದ ಇನಿಬ್ಬರು ಪ್ರಮುಖ ಪಾತ್ರಧಾರಿಗಳು. ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ.

Previous articleಹೊಸಯುಗದ ಸ್ಮಾರ್ಟ್‌ ಕ್ರೈಂ ಡ್ರಾಮಾ ‘ಚೋರ್‌ ನಿಕಲ್‌ ಕೆ ಭಾಗಾ’
Next article‘ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಟೀಸರ್‌ | ರಣವೀರ್‌ – ಅಲಿಯಾ ಹಿಂದಿ ಸಿನಿಮಾ

LEAVE A REPLY

Connect with

Please enter your comment!
Please enter your name here