ಕಾರ್ತಿಕ್‌ ಜಿ ಕ್ರಿಷ್‌ ನಿರ್ದೇಶನದ ರೊಮ್ಯಾಂಟಿಕ್‌ – ಆಕ್ಷನ್‌ ತಮಿಳು ಸಿನಿಮಾ ‘ಟಕ್ಕರ್‌’ ಇಂದಿನಿಂದ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಸಿದ್ದಾರ್ಥ್‌ ಮತ್ತು ದಿವ್ಯಾಂಶ ಕೌಶಿಕ್‌ ಮುಖ್ಯಭೂಮಿಕೆಯ ಕಲಾವಿದರು.

ಸಿದ್ಧಾರ್ಥ್ ಮತ್ತು ದಿವ್ಯಾಂಶ ಕೌಶಿಕ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಟಕ್ಕರ್’ ತಮಿಳು ಸಿನಿಮಾ ಇಂದಿನಿಂದ (ಜುಲೈ 7) Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಇದು ರೋಮ್ಯಾಂಟಿಕ್ ಆಕ್ಷನ್ ಜಾನರ್‌ ಸಿನಿಮಾ. ಚಿತ್ರದಲ್ಲಿ ಗುಣಶೇಖರ್ (ಸಿದ್ಧಾರ್ಥ್) ನಿರುದ್ಯೋಗಿ ಯುವಕ. ಇವನು ಮಿಲಿಯನೇರ್ ಆಗುವ ಆಸೆಯನ್ನು ಹೊಂದಿರುತ್ತಾನೆ. ಆ ಸಂದರ್ಭದಲ್ಲಿ ಅವನಿಗೆ ಲಕ್ಕಿ ಎಂಬ ಶ್ರೀಮಂತ ಹುಡುಗಿಯೊಂದಿಗೆ ಪ್ರೇಮವಾಗುತ್ತದೆ. ಇದರ ನಂತರ ಹಣವೇ ಸಂಕಷ್ಟಕ್ಕೆ ಮೂಲ ಕಾರಣ ಎಂದು ನಂಬುವ ಆತ ತನ್ನ ಜೀವನದಲ್ಲಿ ಹಣದ ಮೌಲ್ಯವನ್ನು ಹೇಗೆ ತಿಳಿದುಕೊಳ್ಳುತ್ತಾನೆ ಎಂಬುದು ಚಿತ್ರದ ಕತೆ. ಚಿತ್ರವನ್ನು ಪ್ಯಾಶನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸುಧನ್ ಸುಂದರಂ ಮತ್ತು ಜಿ ಜಯರಾಮ್ ನಿರ್ಮಿಸಿದ್ದಾರೆ. ನಿವಾಸ್ ಕೆ ಪ್ರಸನ್ನ ಸಂಗೀತ ಸಂಯೋಜಿಸಿದ್ದಾರೆ. ವಾಂಚಿನಾಥನ್ ಮುರುಗೇಶನ್ ಛಾಯಾಗ್ರಹಣ, ಜಿ ಎ ಗೌತಮ್ ಸಂಕಲನ ಚಿತ್ರಕ್ಕಿದೆ. ಚೆನ್ನೈ ಮತ್ತು ಸಿಕ್ಕಿಂನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಹಾಸ್ಯ ನಟ ಯೋಗಿ ಬಾಬು, ಅಭಿಮನ್ಯು ಸಿಂಗ್, ಮುನಿಷ್ಕಾಂತ್ ಮತ್ತು ಆರ್‌ ಜೆ ವಿಘ್ನೇಶ್‌ಕಾಂತ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾರ್ತಿಕ್‌ ಜಿ ಕ್ರಿಷ್‌ ಚಿತ್ರದ ನಿರ್ದೇಶಕ.

Previous article‘ಬವಾಲ್‌’ ಟೀಸರ್‌ | ವರುಣ್‌ ಧವನ್‌ – ಜಾನ್ವಿ ಕಪೂರ್‌ ಸಿನಿಮಾ ಜುಲೈ 21ರಂದು ತೆರೆಗೆ
Next articleರಕ್ಷಿತ್‌ ಶೆಟ್ಟಿಯಿಂದ ರಿಷಭ್‌ರಿಗೆ ಹೃದಯಪೂರ್ವಕ ಬರ್ತ್‌ಡೇ ಶುಭಾಶಯ

LEAVE A REPLY

Connect with

Please enter your comment!
Please enter your name here