ಖ್ಯಾತ ಫ್ರಾನ್ಸ್ ನಟಿ, ಗಾಯಕಿ ಜೇನ್ ಬರ್ಕಿನ್ (76 ವರ್ಷ) ಅಗಲಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಬರ್ಕಿನ್ ಅವರನ್ನು ‘ಪರಿಪೂರ್ಣ ಕಲಾವಿದೆ’ ಎಂದು ಶ್ಲಾಘಿಸಿದ್ದಾರೆ.
ಫ್ರಾನ್ಸ್ ನಟಿ, ಗಾಯಕಿ, ಸ್ಟೈಲ್ ಐಕಾನ್ ಎಂದೇ ಗುರುತಿಸಿಕೊಂಡಿದ್ದ ಜೇನ್ ಬರ್ಕಿನ್ (76 ವರ್ಷ) ನಿಧನರಾಗಿದ್ದಾರೆ. ಜೇನ್ ತಮ್ಮ ನೈಜ ಶೈಲಿ ಮತ್ತು ಸಾಮಾಜಿಕ ಕಾರ್ಯಗಳಿಂದ ಜನಪ್ರಿಯತೆ ಗಳಿಸಿದ್ದರು. 1946ರಲ್ಲಿ ಲಂಡನ್ನಲ್ಲಿ ಜನಿಸಿದ ಇವರು ಮೈಕೆಲ್ಯಾಂಜೆಲೊ ಆಂಟೋನಿಯೊನಿಯ ‘Blowp’ (1966) ಮತ್ತು ‘Kaleidoscope’ (1966) ಚಿತ್ರಗಳ ಸಣ್ಣ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನಾ ವೃತ್ತಿ ಆರಂಭಿಸಿದ್ದರು. 1968ರಲ್ಲಿ ಸೆರ್ಗೆ ಗೇನ್ಸ್ಬರ್ಗ್ ಮತ್ತು ಜೇನ್ ಪರಸ್ಪರ ಪ್ರೀತಿಸಿದ್ದರು. ಇವರಿಬ್ಬರ ಸಹಯೋಗದಲ್ಲಿ ಮೂಡಿ ಬಂದ ಮೊದಲ ಆಲ್ಬಂ ‘ಜೇನ್ ಬರ್ಕಿನ್/ಸೆರ್ಗೆ ಗೇನ್ಸ್ಬರ್ಗ್’ ಅನ್ನು 1969ರಲ್ಲಿ ಬಿಡುಗಡೆ ಮಾಡಿದ್ದರು. ಬರ್ಕಿನ್ ಗೇನ್ಸ್ಬರ್ಗ್ನ ನಿರ್ದೇಶನದ ವಿವಾದಾತ್ಮಕ ಚಲನಚಿತ್ರ ‘Jetʼaime moi non plus’ (1976) ಚಿತ್ರದಲ್ಲಿಯೂ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದರು.
Parce qu’elle incarnait la liberté, qu’elle chantait les plus beaux mots de notre langue, Jane Birkin était une icône française.
— Emmanuel Macron (@EmmanuelMacron) July 16, 2023
Artiste complète, sa voix était aussi douce que ses engagements étaient ardents.
Elle nous lègue des airs et des images qui ne nous quitteront pas. pic.twitter.com/Ad27ngF54R
ಪ್ರೆಂಚ್ ಚಲನಚಿತ್ರಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಬರ್ಕಿನ್, ಅಗಾಥಾ ಕ್ರಿಸ್ಟಿ ಅವರ ರೂಪಾಂತರ ಚಿತ್ರಗಳಾದ ‘Death on the Nile’ (1978) ಮತ್ತು ‘Evil Under the Sun’ (1982) ಮುಂತಾದ ಇಂಗ್ಲಿಷ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಜೇನ್ 1991ರಲ್ಲಿ ಕಿರುಸರಣಿ ‘Red Fox’ನಲ್ಲಿ, ಮತ್ತು 1998ರಲ್ಲಿ ಮರ್ಚೆಂಟ್ ಐವರಿ ಅವರ ಅಮೇರಿಕನ್ ಡ್ರಾಮಾ ಸಿನಿಮಾ ‘A Soldier’s Daughter Never Cries’ ನಲ್ಲಿ ಅಭಿನಯಿಸಿದ್ದರು. 2016ರಲ್ಲಿ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ ಕಿರುಚಿತ್ರ ‘La femme le TGV’ದಲ್ಲಿಯೂ ನಟಿಸಿದ್ದರು. ಇದು ಅವರ ಕೊನೆಯ ಚಲನಚಿತ್ರ. 1978ರಲ್ಲಿ, ಬರ್ಕಿನ್ ಲೀ ಕೂಪರ್ ಜೀನ್ಸ್ಗಳ ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಇವರು 1992ರಲ್ಲಿ ‘ವಿಕ್ಟೋಯಿರ್ಸ್ ಡೆ ಲಾ ಮ್ಯೂಸಿಕ್’ ನ ‘ವರ್ಷದ ಮಹಿಳಾ ಕಲಾವಿದೆ’ ಪ್ರಶಸಿ ಗೆದ್ದಿದ್ದಾರೆ. 2018ರಲ್ಲಿ ಜಪಾನ್ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ವಿನಿಮಯ ಉತ್ತೇಜಿಸುವಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ‘Order Of The Rising Sun’ ಪ್ರಶಸ್ತಿ ಪಡೆದುಕೊಂಡಿದ್ದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಬರ್ಕಿನ್ ಅವರನ್ನು ‘ಪರಿಪೂರ್ಣ ಕಲಾವಿದೆ’ ಎಂದು ಶ್ಲಾಘಿಸಿದ್ದಾರೆ, ‘ಜೇನ್ ಬಿರ್ಕಿನ್ ಫ್ರೆಂಚ್ ಐಕಾನ್ ಆಗಿದ್ದರು ಏಕೆಂದರೆ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ, ನಮ್ಮ ಭಾಷೆಯ ಅತ್ಯಂತ ಸುಂದರವಾದ ಪದಗಳನ್ನು ಹಾಡಿದ್ದರು’ ಎಂದು ಅವರು ಟ್ವೀಟ್ ಮಾಡಿದ್ದಾರೆ.