ಎ ಗೋಕುಲ್‌ ಕೃಷ್ಣ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಲಿರುವ ‘ಜಂಟಲ್‌ಮ್ಯಾನ್‌ 2’ ತಮಿಳು ಸಿನಿಮಾದ ಸಂಗೀತ ಸಂಯೋಜನೆಯ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಖ್ಯಾತ ಗೀತರಚನೆಕಾರ ವೈರಮುತ್ತು ಅವರ ರಚನೆಯ ಹಾಡುಗಳಿಗೆ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದಾರೆ.

ಕೆ ಟಿ ಕುಂಜುಮೋನ್‌ ನಿರ್ಮಾಣದ ‘ಜಂಟಲ್‌ಮ್ಯಾನ್‌ 2’ ತಮಿಳು ಸಿನಿಮಾಗೆ ಚಾಲನೆ ಸಿಕ್ಕಿದೆ. ಈ ಹಿಂದೆ ‘ಜಂಟಲ್‌ಮ್ಯಾನ್‌’, ‘ಕಾದಲ್‌ ದೇಶಂ’ ಯಶಸ್ವೀ ಸಿನಿಮಾಗಳನ್ನು ನಿರ್ಮಿಸಿದವರು ಕುಂಜುಮೋನ್‌. ‘ಜಂಟಲ್‌ಮ್ಯಾನ್‌ 2’ ಪ್ರೀ ಪ್ರೊಡಕ್ಷನ್‌ ಕೆಲಸಗಳು ಜಾರಿಯಲ್ಲಿದ್ದು ಸದ್ಯದಲ್ಲೇ ಚಿತ್ರದ ಮುಹೂರ್ತ ನೆರವೇರಲಿದೆ. ಈಗ ಸಂಗೀತ ಸಂಯೋಜನೆಯ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ‘RRR’ ಸಿನಿಮಾದ ‘ನಾಟ್ಟು ನಾಟ್ಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡ ಖ್ಯಾತ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ‘ಜಂಟಲ್ ಮ್ಯಾನ್ 2’ ಸಿನಿಮಾಗೆ ಸಂಗೀತ ಸಂಯೋಜಿಸಲಿದ್ದಾರೆ. ಕೀರವಾಣಿ ಸಂಗೀತಕ್ಕೆ ಖ್ಯಾತ ಗೀತರಚನೆಕಾರ ವೈರಮುತ್ತು ಸಾಹಿತ್ಯ ರಚಿಸುತ್ತಿದ್ದಾರೆ. ಕೇರಳದ ಬೋಲ್ ಗಟ್ಟಿ ಪ್ಯಾಲೇಸ್ ಐಲೆಂಡ್‌ನಲ್ಲಿ ಟ್ಯೂನ್ ಹಾಕುವ ಕೆಲಸ ಪ್ರಾರಂಭವಾಗಿದೆ. ಈ ಸೆಷನ್‌ನಲ್ಲಿ ಕೀರವಾಣಿ, ವೈರಮುತ್ತು, ಕುಂಜುಮೋನ್, ಗೋಕುಲ್ ಕೃಷ್ಣ ಮುಂತಾದವರು ಭಾಗವಹಿಸಿದ್ದಾರೆ. ಎ ಗೋಕುಲ್ ಕೃಷ್ಣ ಕತೆ, ಚಿತ್ರಕಥೆ ರಚಿಸಿ ‘ಜಂಟಲ್ ಮ್ಯಾನ್ 2’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.

Previous articleಫ್ರಾನ್ಸ್‌ ನಟಿ, ಗಾಯಕಿ, ‘ಸ್ಟೈಲ್‌ ಐಕಾನ್‌’ ಜೇನ್‌ ಬರ್ಕಿನ್‌ ನಿಧನ
Next articleಶಿವರಾಜಕುಮಾರ್‌ ಸಿನಿಮಾಗೆ ಸ್ಯಾಮ್‌ ಸಂಗೀತ | ‘ವಿಕ್ರಂ ವೇದ’ ಸಿನಿಮಾ ಖ್ಯಾತಿಯ ಸಂಯೋಜಕ

LEAVE A REPLY

Connect with

Please enter your comment!
Please enter your name here