ಮಲಯಾಳಂ ಸಿನಿಮಾ ತಾರೆಯರಾದ ನಿವಿನ್‌ ಪೌಲಿ ಮತ್ತು ಟೊವಿನೋ ಥಾಮಸ್‌ ‘ಸಮರ’ ಮಲಯಾಳಂ ಮತ್ತು ತಮಿಳು ದ್ವಿಭಾಷಾ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ. ರೆಹಮಾನ್‌ ಮತ್ತು ಭರತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ.

ರೆಹಮಾನ್‌ ಮತ್ತು ಭರತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಸಮರ’ ಮಲಯಾಳಂ ಮತ್ತು ತಮಿಳು ದ್ವಿಭಾಷಾ ಥ್ರಿಲ್ಲರ್‌ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್ ಅನ್ನು ನಟರಾದ ನಿವಿನ್ ಪೌಲಿ ಮತ್ತು ಟೊವಿನೋ ಥಾಮಸ್ ಅವರು ತಮ್ಮ ಫೇಸ್‌ಬುಕ್‌ ಪೇಜ್‌ಗಳಲ್ಲಿ ಹಂಚಿಕೊಂಡು ತಂಡಕ್ಕೆ ಶುಭ ಹಾರೈಸಿದ್ದಾರೆ. ಪೋಸ್ಟರ್‌ನಲ್ಲಿ ನಟ ರೆಹಮಾನ್, ತಮಿಳು ನಟ ಭರತ್ ಮತ್ತು ನಟಿ ಸಂಜನಾ ದೀಪು ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ನಾಯಕ ನಟರು ಪುಸ್ತಕಗಳಿಂದ ಮಾಡಿದ ಮೆಟ್ಟಿಲುಗಳ ಮೇಲೆ ನಿಂತಿದ್ದಾರೆ. ಚಿತ್ರತಂಡ ಈ ಹಿಂದೆ, ‘ಸಮರ ಎಂದರೆ ನಿಖರವಾಗಿ ಏನು? ಇದರ ರಹಸ್ಯವು ಶೀಘ್ರದಲ್ಲೇ ತೆರೆದುಕೊಳ್ಳುತ್ತದೆ’ ಎಂಬ ಅನೌನ್ಸ್‌ಮೆಂಟ್ ಪೋಸ್ಟರ್ ಬಿಡುಗಡೆ ಮಾಡಿತ್ತು. ಚಿತ್ರವು ಎರಡನೇ ಮಹಾಯುದ್ಧದ ಸಮಯದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದ್ದಂತೆ. ‘ಸಮರ’ ಎಂಬ ಶೀರ್ಷಿಕೆ ಯನ್ನು ಹಿಬ್ರೂ(Hebrew) ಭಾಷೆಯಿಂದ ಆಯ್ದುಕೊಳ್ಳಲಾಗಿದ್ದು, ಇದರರ್ಥ ‘ದೇವರಿಂದ ರಕ್ಷಿಸಲ್ಪಟ್ಟಿದೆ’ ಎಂದಾಗಿದೆ.

https://m.facebook.com/story.php?story_fbid=829618131858959&id=100044323395230.

ಚಾರ್ಲ್ಸ್ ಜೋಸೆಫ್ ಚಿತ್ರಕಥೆ ರಚಿಸಿ ಸಿನಿಮಾ ನಿರ್ದೇಶಿಸಿದ್ದಾರೆ. ರಾಹುಲ್ ಮಾಧವ್, ಬಿನೋಜ್ ವಿಲ್ಲ್ಯಾ, ಗೋವಿಂದ್ ಕೃಷ್ಣ, ಟಿನಿಜ್ ವಿಲ್ಲ್ಯಾ, ವೀರ್ ಆರ್ಯನ್, ಮೀರ್ ಸರ್ವರ್, ದಿನೇಶ್ ಲಂಬಾ, ಸೋನಾಲಿ ಸುಡಾನ್, ನೀತ್ ಚೌಧರಿ, ಶಬರೀಶ್ ವರ್ಮಾ, ವಿವಿಯಾ ಸಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸುಮಾರು 35 ವಿದೇಶಿ ನಟ – ನಟಿಯರು ಅಭಿನಯಿಸಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ದೀಪಕ್ ವಾರಿಯರ್ ಸಂಗೀತ ಸಂಯೋಜಿಸಿದ್ದು, ಗೋಪಿ ಸುಂದರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನು ಸಿದ್ಧಾರ್ಥ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ ನಿರ್ವಹಿಸಿದ್ದಾರೆ. ಎಂ ಕೆ ಸುಭಾಕರನ್ ಮತ್ತು ಅನುಜ್ ವರ್ಗೀಸ್ ವಿಲ್ಲಿಯದತ್ ನಿರ್ಮಾಣದ ಚಿತ್ರವನ್ನು ಕುಲು ಮನಾಲಿ, ಧರ್ಮಶಾಲಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಸಿನಿಮಾ ಇದೇ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ರೆಹಮಾನ್ 1990ರ ದಶಕದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ನಟರಲ್ಲಿ ಒಬ್ಬರು, ಇವರು ಈ ಹಿಂದೆ ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಜಾಲಿ ಎಲ್‌ಎಲ್‌ಬಿ 2’, ‘ಭಜರಂಗಿ ಭಾಯಿಜಾನ್’, ‘ವಿಶ್ವರೂಪಂ 2’ ಚಿತ್ರಗಳಲ್ಲಿ ನಟಿಸಿರುವ ನಟ ಮೀರ್ ಸರ್ವರ್, ‘ಸಮರ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

Previous articleನ್ಯಾಯಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಎನ್‌ ಕುಮಾರ್‌ ಧರಣಿ
Next articleಫ್ರಾನ್ಸ್‌ ನಟಿ, ಗಾಯಕಿ, ‘ಸ್ಟೈಲ್‌ ಐಕಾನ್‌’ ಜೇನ್‌ ಬರ್ಕಿನ್‌ ನಿಧನ

LEAVE A REPLY

Connect with

Please enter your comment!
Please enter your name here