Amazon prime video ನೂತನ ವೆಬ್‌ ಸರಣಿ ಘೋಷಿಸಿದೆ. 1992ರ ಬಾಬ್ರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಡೆದ ಗಲಭೆ ಸುತ್ತ ಹೆಣೆದ ವಸ್ತು ಇದು. ‘Bambai Meri Jaan’ ಶೀರ್ಷಿಕೆಯ ಸರಣಿಯನ್ನು ರೆನ್ಸಿಲ್‌ ಡಿ ಸಿಲ್ವಾ ಮತ್ತು ಶುಜಾತ್‌ ಸೌಧಾಗರ್‌ ರಚಿಸಿ ನಿರ್ದೇಶಿಸುತ್ತಿದ್ದಾರೆ.

ರೆನ್ಸಿಲ್‌ ಡಿ ಸಿಲ್ವಾ ಮತ್ತು ಶುಜಾತ್‌ ಸೌಧಾಗರ್‌ ರಚನೆ, ನಿರ್ದೇಶನದಲ್ಲಿ ‘Bambai Meri Jaan’ ವೆಬ್‌ ಸರಣಿ ಮೂಡಿಬರಲಿದೆ. Amazon prime ಈ ನೂತನ ಸರಣಿ ಘೋಷಿಸಿದೆ. ಕೆ ಕೆ ಮೆನನ್, ಅವಿನಾಶ್ ತಿವಾರಿ, ಕೃತಿಕಾ ಕಾಮ್ರಾ, ನಿವೇದಿತಾ ಭಟ್ಟಾಚಾರ್ಯ, ಅಮೈರಾ ದಸ್ತೂರ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸರಣಿಯ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿರುವ ಮಾಹಿತಿಯನ್ನು ನಟ – ನಿರ್ದೇಶಕ ಫರ್ಹಾನ್ ಅಖ್ತರ್ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. Excel Media and Entertainment ಬ್ಯಾನರ್‌ ಅಡಿ ರಿತೇಶ್ ಸಿಧ್ವಾನಿ, ಕಾಸಿಮ್ ಜಗ್ಮಗಿಯಾ ಮತ್ತು ಫರ್ಹಾನ್ ಅಖ್ತರ್ ಸರಣಿ ನಿರ್ಮಿಸುತ್ತಿದ್ದಾರೆ. 10 ಕಂತುಗಳ ಈ ಸರಣಿ ಮುಂಬೈ ಇನ್ನೂ ಬಾಂಬೆಯಾಗಿದ್ದ ಕಾಲದ ಮುಂಬೈ ಗಲಭೆಗೆ ಸಂಬಂಧಿಸಿದ ಘಟನೆಗಳನ್ನು ಹಾಗೂ ಡಿಸೆಂಬರ್ 1992ರಿಂದ ಜನವರಿ 1993ರವರೆಗೆ ಒಂದು ತಿಂಗಳ ಕಾಲ ನಡೆದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ಗಲಭೆಯ ಪರಿಣಾಮಗಳನ್ನು ಒಳಗೊಂಡಿದೆ. ಆ ಸಂದರ್ಭದಲ್ಲಿ ಸುಮಾರು 900ಕ್ಕೂ ಹೆಚ್ಚು ಸಾವು ನೋವು ವರದಿಯಾಗಿದ್ದವು.

LEAVE A REPLY

Connect with

Please enter your comment!
Please enter your name here