ಸುಹಾನಾ ಖಾನ್‌, ಖುಷಿ ಕಪೂರ್‌, ಅಗಸ್ತ್ಯ ನಂದ ನಟಿಸಿರುವ ‘ದಿ ಆರ್ಚೀಸ್‌’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. 60ರ ದಶಕದ ಕಾಲಘಟ್ಟದ ಕಾಲ್ಪನಿಕ ಗುಡ್ಡಗಾಡು ಪಟ್ಟಣ ರಿವರ್‌ಡೇಲ್‌ನಲ್ಲಿ ನಡೆಯುವ ಘಟನೆಗಳು ಟ್ರೇಲರ್‌ನಲ್ಲಿವೆ. ಡಿಸೆಂಬರ್‌ 7ರಿಂದ Netflixನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ಜೋಯಾ ಅಖ್ತರ್ ನಿರ್ದೇಶನದ ಆಕ್ಷನ್ ಮ್ಯೂಸಿಕಲ್ ‘ದಿ ಆರ್ಚೀಸ್’ ಹಿಂದಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಸಿನಿಮಾಗೆ ಆಯೇಶಾ ದೇವಿತ್ರೆ ಧಿಲ್ಲೋನ್ ಮತ್ತು ರೀಮಾ ಕಾಗ್ತಿ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ಶಾರುಖ್‌ ಖಾನ್‌ ಪುತ್ರಿ ಸುಹಾನಾ ಖಾನ್, ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಖುಷಿ ಕಪೂರ್, ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ವೇದಾಂಗ್ ರೈನಾ ಮತ್ತು ಯುವರಾಜ್ ಮೆಂಡಾ ಮುಖ್ಯ
ಭೂಮಿಕೆಯಲ್ಲಿ ನಟಿಸಿದ್ದಾರೆ. ಟ್ರೇಲರ್‌ 60ರ ದಶಕದ ಭಾರತದಲ್ಲಿನ ಕಾಲ್ಪನಿಕ ಗುಡ್ಡಗಾಡು ಪಟ್ಟಣವಾದ ರಿವರ್‌ಡೇಲ್‌ನಲ್ಲಿ ನಡೆಯುವ ಘಟನೆಗಳನ್ನು ತೋರಿಸಿದೆ. ಹಾಗೂ ಚಿತ್ರದ ಪಾತ್ರಗಳನ್ನು ಪರಿಚಯಿಸಿದೆ.

ಚಿತ್ರದಲ್ಲಿ ಒಂದು ವಿಶೇಷ ಕಥೆಯಿದ್ದು, ಈ ಎಲ್ಲಾ ಸ್ನೇಹಿತರು ತಮ್ಮ ಊರಿನ ನಿಸರ್ಗ, ಪರಿಸರ ವ್ಯವಸ್ಥೆ ಮತ್ತು ಸಮುದಾಯವನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಾವು ಮೊದಲಿಗಿಂತ ಹೆಚ್ಚು ಬಲಶಾಲಿಯಾಗಬೇಕು ಎಂದು ಮಾತನಾಡಿಕೊಂಡು ತಮ್ಮ ಕರ್ತವ್ಯ ಪಾಲಿಸುತ್ತಾರೆ. ಚಿತ್ರವು ಹದಿಹರೆಯದ ಆಂಗ್ಲೋ ಇಂಡಿಯನ್‌ ಸ್ನೇಹಿತರ ಗುಂಪಿನಲ್ಲಿ ನಡೆಯುವ ಪ್ರೀತಿ, ಸ್ನೇಹ, ಮನಸ್ತಾಪ, ಜಗಳ, ಹೊಂದಾಣಿಕೆ, ಸಮಾಜದ ಮೇಲೆ ಅವರಿಗೆ ಇರುವ ಜವಾಬ್ದಾರಿ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ. Tiger Baby Productions ಬ್ಯಾನರ್‌ ಅಡಿಯಲ್ಲಿ ಜಾನ್ ಗೋಲ್ಡ್ ವಾಟರ್, ಶರಣ್ ದೇವರಾಜನ್, ರೀಮಾ ಕಾಗ್ತಿ ಮತ್ತು ಜೋಯಾ ಅಖ್ತರ್ ಚಿತ್ರ ನಿರ್ಮಿಸಿದ್ದಾರೆ. ಡಿಸೆಂಬರ್‌ 7, 2023ರಿಂದ Netflix ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here