Yash Raj Films ನಿರ್ಮಾಣ ಸಂಸ್ಥೆಯಿಂದ ನೂತನ ಹಿಂದಿ ಸಿನಿಮಾ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಬಿಡುಗಡೆಯ ಹೊಸ್ತಿಲಲ್ಲಿದೆ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದಲ್ಲಿ ವಿಕ್ಕಿ ಕೌಶಲ್ ಮತ್ತು ಮಾಜಿ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವಿದು.

ವಿಕ್ಕಿ ಕೌಶಲ್‌ ಮತ್ತು ಮಾನುಷಿ ಛಿಲ್ಲರ್‌ ನಟನೆಯ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಹಿಂದಿ ಸಿನಿಮಾ ಸದ್ದಿಲ್ಲದೆ ತೆರೆಗೆ ಸಿದ್ಧವಾಗಿದೆ. ಬಾಲಿವುಡ್‌ನ ಪ್ರತಿಷ್ಠಿತ Yash Raj Films ಬ್ಯಾನರ್‌ನಡಿ ತಯಾರಾಗಿರುವ ಚಿತ್ರವನ್ನು ವಿಜಯ್‌ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಶೋಕ್‌ ಚಕ್ರವರ್ತಿ ಸಂಗೀತ ಸಂಯೋಜಿಸುತ್ತಿದ್ದು, ಮನೋಜ್, ಪಹ್ವಾ, ಕುಮುದ್ ಮಿಶ್ರಾ, ಸಾದಿಯಾ ಸಿದ್ದಿಕಿ, ಅಲ್ಕಾ ಅಮೀನ್, ಸೃಷ್ಟಿ ದೀಕ್ಷಿತ್, ಭುವನ್ ಅರೋರಾ, ಅಶುತೋಷ್ ಉಜ್ವಲ್ ಮತ್ತು ಭಾರತಿ ಪೆರ್ವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 1970ರಲ್ಲಿ ಯಶ್ ಚೋಪ್ರಾ ಸ್ಥಾಪಿಸಿದ ಈ ಸಂಸ್ಥೆ ಅವರ ಮಗ ಆದಿತ್ಯ ಚೋಪ್ರಾ ಅವರ ನೇತೃತ್ವದಲ್ಲಿ ಮುನ್ನಡೆದಿದೆ. ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ’, ‘ಡರ್’, ‘ದಿಲ್ ತೋ ಪಾಗಲ್ ಹೈ’, ‘ಮೊಹಬ್ಬತೇನ್’, ‘ಏಕ್ ಥಾ ಟೈಗರ್’, ‘ವಾರ್’, ‘ಪಠಾಣ್‌’ ಸೇರಿದಂತೆ ಜನಪ್ರಿಯ ಸಿನಿಮಾಗಳು ಈ ಸಂಸ್ಥೆಯಡಿ ತಯಾರಾಗಿವೆ. ಯಶ್‌ ರಾಜ್‌ ಫಿಲ್ಮ್ಸ್‌ನ ನೂತನ ಸಿನಿಮಾ ‘ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ’ ಸೆಪ್ಟೆಂಬರ್ 22ರಂದು ಬಿಡುಗಡೆಯಾಗುತ್ತಿದೆ.

LEAVE A REPLY

Connect with

Please enter your comment!
Please enter your name here