ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ನಟನೆಯ ನೂತನ ತಮಿಳು ಸಿನಿಮಾ ಸೆಟ್ಟೇರಿದೆ. ನಟ ಕಮಲ ಹಾಸನ್ ಅವರ ರಾಜ್ ಕಮಲ್ ಫಿಲಂಸ್ ಇಂಟರ್‌ನ್ಯಾಷನಲ್ ಮತ್ತು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಾಣದ ಚಿತ್ರವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ.
ಶಿವಕಾರ್ತಿಕೇಯನ್ ನಟನೆಯ 21ನೇ ತಮಿಳು ಸಿನಿಮಾ ‘SK21’ ತಾತ್ಕಾಲಿಕ ಶೀರ್ಷಿಕೆಯಡಿ ಸೆಟ್ಟೇರಿದೆ. ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿರುವ ಚಿತ್ರದ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಕಮಲ ಹಾಸನ್ ಒಡೆತನದ ರಾಜ್ ಕಮಲ್ ಫಿಲಂಸ್ ಇಂಟರ್‌ನ್ಯಾಷನಲ್ ಮತ್ತು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಸಿನಿಮಾ ತಯಾರಾಗುತ್ತಿದೆ. ಕಾಶ್ಮೀರದಲ್ಲಿ ಶೂಟಿಂಗ್ ಶುರುವಾಗಿದೆ. ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಯುದ್ಧ ಆಧಾರಿತ ಚಲನಚಿತ್ರವಾಗಿದ್ದು, ಅದ್ಧೂರಿಯಾಗಿ ತಯಾರಾಗಲಿದೆ ಎಂದು ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಚಿತ್ರದಲ್ಲಿ ಶಿವ ಮತ್ತು ಪಲ್ಲವಿ ಅವರ ಮೇಲೆ ‘Peppy Song’ ಚಿತ್ರಿತವಾಗಲಿದೆ ಎನ್ನಲಾಗಿದೆ. ಸಿನಿಮಾಗೆ G V ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದು, ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಅಡಿಯೇ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಲ್ಲದೇ ‘ತಂಗಳನ್’, ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ಸೂರರೈ ಪೊಟ್ರು’ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.










