ಕಿರುತೆರೆಯ ಜನಪ್ರಿಯ ನಟ ರಕ್ಷ್‌ ರಾಮ್‌ ‘ಬರ್ಮ’ ಸಿನಿಮಾದ ಹೀರೋ ಆಗಿ ನಟಿಸುತ್ತಿದ್ದಾರೆ. ಯಶಸ್ವೀ ಸಿನಿಮಾಗಳ ನಿರ್ದೇಶಕ ಚೇತನ್‌ ಕುಮಾರ್‌ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಇದೊಂದು ಆಕ್ಷನ್‌ ಎಂಟರ್‌ಟೇನರ್‌. ಮುಂದಿನ ತಿಂಗಳಿಂದ ಶೂಟಿಂಗ್‌ ಶುರುವಾಗುತ್ತಿದೆ.

‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’, ‘ಜೇಮ್ಸ್’ ಯಶಸ್ವೀ ಸಿನಿಮಾಗಳ ನಿರ್ದೇಶಕ ಚೇತನ್‌ ಕುಮಾರ್‌ ನೂತನ ಸಿನಿಮಾ ಘೋಷಣೆಯಾಗಿದೆ. ಕಿರುತೆರೆಯ ಜನಪ್ರಿಯ ನಟ ರಕ್ಷ್‌ ರಾಮ್‌ ಹೀರೋ ಆಗಿ ನಟಿಸುತ್ತಿದ್ದು, ಚಿತ್ರಕ್ಕೆ ‘ಬರ್ಮ’ ಎಂದು ನಾಮಕರಣವಾಗಿದೆ. ಸಂಸ್ಕೃತದಲ್ಲಿ ಬರ್ಮ ಅಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ. ‘ಇದೊಂದು ಆಕ್ಷನ್‌ ಎಂಟರ್‌ಟೇನರ್‌ ಸಿನಿಮಾ. PAN ಇಂಡಿಯಾ ಕ್ಯಾನ್ವಾಸ್‌ನಲ್ಲಿ ತಯಾರಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಚೇನತ್‌. ವಿ ಹರಿಕೃಷ್ಣ ಈ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಅಡಿಬರಹ ಈ ರೀತಿ ಇದೆ – ‘ಆಯುಧ ಬಳಸುವುದು ಆಡಂಬರ ಅಲ್ಲ. ಅದೊಂದು ಆಚರಣೆ.’

ಶೀರ್ಷಿಕೆ ಘೋಷಣೆಯಾಗುತ್ತಿದ್ದಂತೆಯೇ ಚಿತ್ರದ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ರಕ್ಷ್ ರಾಮ್ ಅವರಿಗೆ ‘ಗಟ್ಟಿಮೇಳ’ ಸೀರಿಯಲ್‌ ಜನಪ್ರಿಯ ತಂದುಕೊಟ್ಟಿತು. ಅವರೀಗ ಸಿನಿಮಾದಲ್ಲಿ ತಮ್ಮ ಅದೃಷ್ಟಪರೀಕ್ಷೆ ನಡೆಸಲು ಹೊರಟಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರದ ಇನ್ನುಳಿದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.

Previous articleವಿವಾದದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 | social mediaದಲ್ಲಿ ಬಿರುಸಿನ ಚರ್ಚೆ
Next articleಶಿವಕಾರ್ತಿಕೇಯನ್‌ – ಸಾಯಿ ಪಲ್ಲವಿ ಸಿನಿಮಾ | ಕಮಲ್‌ ಹಾಸನ್‌ ನಿರ್ಮಾಣ ಸಹಯೋಗ

LEAVE A REPLY

Connect with

Please enter your comment!
Please enter your name here