‘ಜೈಲರ್’ ತಮಿಳು ಚಿತ್ರದಲ್ಲಿ RCB ಜೆರ್ಸೀ ತೊಟ್ಟ ಬಾಡಿಗೆ ಹಂತಕನ ಪಾತ್ರಧಾರಿ ದುಷ್ಟತನದಿಂದ ನಡೆದುಕೊಳ್ಳುವ ಸನ್ನಿವೇಶವಿದೆ. ಇದು ತಮ್ಮ ಬ್ರ್ಯಾಂಡ್‌ಗೆ ಧಕ್ಕೆ ತರುತ್ತದೆ ಎಂದು RCB ಕೋರ್ಟ್ ಮೊರೆ ಹೋಗಿತ್ತು. ಚಿತ್ರದಲ್ಲಿನ ಈ ಸನ್ನಿವೇಶದಲ್ಲಿರುವ RCB ಜೆರ್ಸೀ ಮರೆಮಾಚುವಂತೆ ದಿಲ್ಲಿ ಹೈಕೋರ್ಟ್ ಸೂಚನೆ ನೀಡಿದೆ.
ಸೆಪ್ಟೆಂಬರ್ 1ರಿಂದ ‘ಜೈಲರ್’ ಸಿನಿಮಾದಲ್ಲಿನ RCB ಜೆರ್ಸೀ ಸನ್ನಿವೇಶ ಕಾಣಿಸಕೂಡದು ಎಂದು ದಿಲ್ಲಿ ಹೈಕೋರ್ಟ್ ‘ಜೈಲರ್’ ತಂಡಕ್ಕೆ ಆದೇಶ ನೀಡಿದೆ. ಚಿತ್ರದ ಒಂದು ಸನ್ನಿವೇಶದಲ್ಲಿ RCB ಜೆರ್ಸೀ ತೊಟ್ಟ ಬಾಡಿಗೆ ಹಂತಕ ಪಾತ್ರ ಮಹಿಳೆ ಕುರಿತಂತೆ ಅಸಭ್ಯ ಮಾತುಗಳನ್ನಾಡುತ್ತದೆ. ‘ಅನುಮತಿ ಇಲ್ಲದೆ ಈ ಪಾತ್ರಕ್ಕೆ RCB ಜೆರ್ಸೀ ಹಾಕಿದ್ದಾರೆ. ಇದು ನಮ್ಮ ಬ್ರ್ಯಾಂಡ್‌ಗೆ ಧಕ್ಕೆ ತಂದಿದೆ’ ಎಂದು IPL team, Royal Challengers Sports Private Limited ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ದೂರು ಆಲಿಸಿದ ಹೈಕೋರ್ಟ್ ‘ಜೈಲರ್’ ತಂಡಕ್ಕೆ ನಿರ್ದೇಶನ ನೀಡಿದೆ. ‘ಮುಂದಿನ ದಿನಗಳಲ್ಲಿ ಟೀವಿ, OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವಾಗ RCB ಜೆರ್ಸೀ ಸನ್ನಿವೇಶ ಇರಕೂಡದು. ಸೆಪ್ಟೆಂಬರ್ 1ರಿಂದ ಥಿಯೇಟರ್‌ನಲ್ಲೂ ಈ ದೃಶ್ಯವನ್ನು ಸರಿಪಡಿಸಬೇಕು’ ಎಂದು ಚಿತ್ರದ ನಿರ್ಮಾಪಕರಿಗೆ ಸೂಚನೆ ನೀಡಿದೆ.
558 ಕೋಟಿ ರೂ ವಹಿವಾಟು | ರಜನೀಕಾಂತ್ ಅಭಿನಯದ ‘ಜೈಲರ್’ ಸಿನಿಮಾದ ಗಳಿಕೆ ತೆರೆಕಂಡ 19ನೇ ದಿನದಂದು ಚಿತ್ರದ ಜಾಗತಿಕ ವಹಿವಾಟು 558 ಕೋಟಿ ರೂಪಾಯಿ ಎನ್ನಲಾಗಿದೆ. ಬಿಡುಗಡೆಯಾದ ಎರಡು ವಾರಗಳಲ್ಲಿ ಉತ್ತಮ ಗಳಿಕೆ ಕಂಡ ಸಿನಿಮಾದ ವಹಿವಾಟು ಕ್ರಮೇಣ ಕಡಿಮೆಯಾಗುತ್ತಿದೆ. ನಿನ್ನೆ (ಆಗಸ್ಟ್ 28) ಚಿತ್ರ 3 ಕೋಟಿ ಗಳಿಸಿದೆ. ತಮಿಳು ಮಾತನಾಡುವ ಪ್ರದೇಶಗಳಲ್ಲಿ 25.56% occupancy ಇದ್ದರೆ, ತೆಲುಗು ಸರ್ಕ್ಯೂಟ್‌ನಲ್ಲಿ 16% ಇದೆ. ಮತ್ತೊಂದೆಡೆ ಸನ್ನಿ ಡಿಯೋನ್ ನಟನೆಯ ‘ಗದ್ದಾರ್ 2’ ಸಿನಿಮಾದ ದೇಸಿ ವಹಿವಾಟು ಇಲ್ಲಿಯವರೆಗೆ 460 ಕೋಟಿ ರೂಪಾಯಿ ದಾಖಲಾಗಿದೆ.