ಕಳೆದ ವರ್ಷ ನಿರ್ಶಿತಾರ್ಥ ಮಾಡಿಕೊಂಡಿದ್ದ ನಟಿ ನಯನತಾರಾ ಮತ್ತು ಚಿತ್ರನಿರ್ದೇಶಕ ವಿಘ್ನೇಶ್‌ ಶಿವನ್‌ ಇಂದು ದಾಂಪತ್ಯ ಬದುಕು ಪ್ರವೇಶಿಸಿದ್ದಾರೆ. ಮಹಾಬಲೀಪುರಂನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಖ್ಯಾತನಾಮ ಕಲಾವಿದರು ಪಾಲ್ಗೊಂಡು ದಂಪತಿಗೆ ಶುಭಹಾರೈಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ಚಿತ್ರನಿರ್ದೇಶಕ ವಿಘ್ನೇಶ್‌ ಶಿವನ್‌ ವಿವಾಹ ಇಂದು ಮಹಾಬಲೀಪುರಂನಲ್ಲಿ ನೆರವೇರಿದೆ. ಕುಟುಂಬದವರು ಮತ್ತು ಆತ್ಮೀಯ ಗೆಳೆಯರ ಬಳಗದ ಸಮ್ಮುಖದಲ್ಲಿ ಇವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸಿನಿಮಾ ತಾರೆಯರಾದ ರಜನೀಕಾಂತ್‌, ಶಾರುಖ್‌ ಖಾನ್‌, ಸೂರ್ಯ, ಕಾರ್ತಿ, ವಿಜಯ್‌ ಸೇತುಪತಿ, ಶರತ್‌ಕುಮಾರ್‌, ಖುಷ್ಬೂ, ಶಾಲಿನಿ ಅಜಿತ್‌ ಕುಮಾರ್‌, ಅನಿರುದ್ಧ ರವಿಚಂದ್ರನ್‌, ಕೆ.ಎಸ್‌.ರವಿಕುಮಾರ್‌, ಗೌತಮ್‌ ವಾಸುದೇವ್‌ ಮೆನನ್‌, ಅಟ್ಲೀ ಸೇರಿದಂತೆ ಹಲವರು ಸಮಾರಂಭದಲ್ಲಿ ಪಾಲ್ಗೊಂಡು ದಂಪತಿಗೆ ಶುಭ ಹಾರೈಸಿದರು.

ಮದುವೆ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಘ್ನೇಶ್‌ ಶಿವನ್‌, “Am Married ❤️😘☺️🥰😍😍😍😍 Jus the Beginning of a bigger , stronger , crazy love story wit you my #Thangamey ! Love you #Thangamey #Kanmani Kadambari and now my wife ! 😘🥰☺️.” ಎನ್ನುವ ಸಂದೇಶ ಹಾಕಿದ್ದಾರೆ. ಸ್ನೇಹಿತರಾಗಿದ್ದ ವಿಘ್ನೇಶ್‌ ಶಿವನ್‌ ಮತ್ತು ನಯನತಾರಾ 2015ರಲ್ಲಿ ‘ನಾನಂ ರೌಡಿ ಧಾನ್‌’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಪ್ರೇಮಿಗಳಾಗಿದ್ದರು! ಕಳೆದ ಎರಡು ವರ್ಷಗಳಿಂದೀಚೆಗೆ ಇಬ್ಬರೂ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳತೊಡಗಿದ್ದರು. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಇಂದು ದಾಂಪತ್ಯ ಬದುಕಿಗೆ ಅಡಿಯಿಟ್ಟಿದೆ.

Previous articleಬಹುತಾರಾಗಣದ ‘ಹೊಂದಿಸಿ ಬರೆಯಿರಿ’; ಜೂನ್‌ 24ಕ್ಕೆ ಮೊದಲ ಹಾಡು
Next articleರಜನೀಕಾಂತ್‌ ಸಿನಿಮಾದಲ್ಲಿ ಶಿವರಾಜಕುಮಾರ್‌; ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನ

LEAVE A REPLY

Connect with

Please enter your comment!
Please enter your name here