ಖ್ಯಾತ ನಟ ರಜನೀಕಾಂತ್ ನಿನ್ನೆ ಬೆಂಗಳೂರು ಜಯನಗರ BMTC ಡಿಪೋಗೆ ಅಚ್ಚರಿಯ ಭೇಟಿ ನೀಡಿದ್ದಾರೆ. ಅಲ್ಲಿನ ಸಿಬ್ಬಂದಿಯೊಂದಿಗಿನ ನಟನ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಂತರ ಗಾಂಧಿಬಜಾರ್‌ನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿದ ರಜನೀಕಾಂತ್ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜನಪ್ರಿಯ ನಟ ರಜನೀಕಾಂತ್ ನಿನ್ನೆ (ಆಗಸ್ಟ್ 29) ಬೆಂಗಳೂರು ಜಯನಗರ BMTC ಡಿಪೋಗೆ ಭೇಟಿ ನೀಡಿದ್ದಾರೆ. ಇವರು ಭೇಟಿ ಡಿಪೋದ ಸಿಬ್ಬಂದಿಗೆ ದೊಡ್ಡ ಅಚ್ಚರಿ ತಂದಿತ್ತು. ಸಿಬ್ಬಂದಿಯೊಂದಿಗೆ ನಟ ಉಭಯ ಕುಶಲೋಪರಿ ನಡೆಸಿದ್ದಾರೆ. ಡಿಪೋ ಸಿಬ್ಬಂದಿ ನಟನೊಂದಿಗೆ ಸೆಲ್ಪೀ ತೆಗೆದುಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟ ರಜನೀಕಾಂತ್ ಸಿನಿಮಾ ಪ್ರವೇಶಿಸುವ ಮುನ್ನ BTS (ಬೆಂಗಳೂರು ಟ್ರಾನ್‌ಪೋರ್ಟೇಷನ್ ಸರ್ವೀಸ್) 10A ನಂಬರ್ ಬಸ್‌ನಲ್ಲಿ ಕಂಡಕ್ಟರ್ ಆಗಿದ್ದರು. ಮುಂದೆ ಸಿನಿಮಾದಲ್ಲಿ ಅವಕಾಶಗಳು ಹೆಚ್ಚುತ್ತಿದ್ದಂತೆ ಸಂಪೂರ್ಣವಾಗಿ ಚಲನಚಿತ್ರರಂಗದಲ್ಲಿ ಸಕ್ರಿಯರಾದರು. ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ (1975) ಚಿತ್ರದ ಮೂಲಕ ಸಿನಿ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ ರಜನೀಕಾಂತ್ ಭಾರತೀಯ ಚಿತ್ರರಂಗದ ಪ್ರಭಾವಿ ನಟರೊಲ್ಲಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪ್ರಧಾನವಾಗಿ ತಮಿಳು ಹಾಗೂ ಹಿಂದಿ, ತೆಲುಗು, ಕನ್ನಡ, ಬೆಂಗಾಲಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
#WATCH | Superstar Rajinikanth paid a surprise visit to depot number 4 of BMTC (Bengaluru Metropolitan Transport Corporation) in Bengaluru, Karnataka today.
— ANI (@ANI) August 29, 2023
(Video Source: BMTC) pic.twitter.com/luzdpkdnNh