ಟಿ ಜೆ ಜ್ಞಾನವೇಲ್‌ ನಿರ್ದೇಶನದಲ್ಲಿ ರಜಿನೀಕಾಂತ್‌ ನಟಿಸುತ್ತಿರುವ ನೂತನ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ವೇಟ್ಟಯಾನ್‌’ ಎಂದು ನಾಮಕರಣವಾಗಿದೆ. ಚಿತ್ರದಲ್ಲಿ ರಜಿನಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಜಿನೀಕಾಂತ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ತಲೈವರ್ 170’ ತಮಿಳು ಚಿತ್ರಕ್ಕೆ ‘ವೇಟ್ಟಯಾನ್‌’ ಶೀರ್ಷಿಕೆ ನಿಗಧಿಯಾಗಿದ್ದು, ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ‘ಜೈ ಭೀಮ್‌’ ಸಿನಿಮಾ ಖ್ಯಾತಿಯ G T ಜ್ಞಾನವೇಲ್‌ ಬರೆದು ನಿರ್ದೇಶಿಸುತ್ತಿದ್ದಾರೆ. ಟೀಸರ್‌, ರಜನೀಕಾಂತ್‌ ಅವರನ್ನು ಸ್ಟೈಲಿಶ್‌ ಪೊಲೀಸ್‌ ಅಧಿಕಾರಿಯನ್ನಾಗಿ ತೋರಿಸಿದೆ. ರಜಿನೀಕಾಂತ್ ಅವರು ಸುಭಾಷ್ ಚಂದ್ರ ಬೋಸ್ ಕುರಿತು ಪುಸ್ತಕ ಓದುವುದರೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಇದು ಆ ಪಾತ್ರದ ಸಿದ್ಧಾಂತದ ಕುರಿತು ಸುಳಿವೊಂದನ್ನು ನೀಡುತ್ತದೆ.

ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ರಜಿನಿ ಯಾವುದೋ ತನಿಖಾ ಕೇಸನ್ನು ಮುನ್ನಡೆಸುವುದರ ಸುಳಿವನ್ನು ನೀಡುತ್ತಾರೆ. ಟೀಸರ್‌ ಕೊನೆಯಲ್ಲಿ ‘ನಾವು ಗುರಿಯಿಟ್ಟ ಮೇಲೆ ಬೇಟೆ ಬೀಳಲೇ ಬೇಕು’ ಎನ್ನುವ ಡೈಲಾಗ್‌ ಇದೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್, ದುಶರಾ ವಿಜಯನ್, ರಕ್ಷನ್, ಜಿ ಎಂ ಸುಂದರ್‌ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ ತಾರೆ ಅಮಿತಾಭ್‌ ಬಚ್ಚನ್‌ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. Lyca Productions ಬ್ಯಾನರ್‌ ಅಡಿಯಲ್ಲಿ ಸುಭಾಸ್ಕರನ್‌ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here