ಜಗ್ಗೇಶ್‌ ಮತ್ತು ಕೋಮಲ್‌ ಬಹಳ ವರ್ಷಗಳ ನಂತರ ಒಟ್ಟಿಗೆ ನಟಿಸುತ್ತಿದ್ದಾರೆ. ಮತಿವಣನ್‌ ನಿರ್ದೇಶನದಲ್ಲಿ ತಯರಾಗುತ್ತಿರುವ ಚಿತ್ರದ ಹಾಡೊಂದನ್ನು ಜಾಲಿವುಡ್‌ ಸ್ಟುಡಿಯೋದಲ್ಲಿ ಚಿತ್ರಿಸಲಾಗಿದೆ. ಜಗ್ಗೇಶ್‌ ಅವರ ಕಿರಿಯ ಪುತ್ರ ಯತಿರಾಜ್‌ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

‘ನಾನು ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಕೋಮಲ್ ನನಗಿಂತಲೂ ಉತ್ತಮ ಕಲಾವಿದ. ಈ ಸಿನಿಮಾಲದಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಮೂರು ಜನ ನಟಿಸಿದ್ದೇವೆ’ ಎಂದರು ಜಗ್ಗೇಶ್‌. ಅವರ ಸಹೋದರ ಕೋಮಲ್‌ ನಿರ್ಮಿಸಿ ನಟಿಸುತ್ತಿರುವ ಚಿತ್ರವಿದು. ಬಹಳ ದಿನಗಳ ನಂತರ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಹಾಡೊಂದನ್ನು ನಿನ್ನೆ ಜಾಲಿವುಡ್‌ ಸ್ಟುಡಿಯೋದಲ್ಲಿ ಚಿತ್ರಿಸಲಾಗಿದೆ. ಮತಿವಣನ್‌ ನಿರ್ದೇಶಿಸುತ್ತಿರುವ ಈ ಕಾಮಿಡಿ ಥ್ರಿಲ್ಲರ್‌ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಜಗ್ಗೇಶ್‌ ಅವರ ಕಿರಿಯ ಪುತ್ರ ಯತಿರಾಜ್‌ ನಟಿಸುತ್ತಿದ್ದಾರೆ.

ತಮ್ಮ ಸಿನಿಮಾ ಕುರಿತು ಮಾತನಾಡಿದ ಕೋಮಲ್‌, ‘ಇದೊಂದು ಸಮಯದ ಸುತ್ತ ನಡೆಯುವ ಕಥೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈಗ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನ ಚಿತ್ರೀಕರಣದಲ್ಲಿ ಅಣ್ಣ ಜಗ್ಗೇಶ್, ನಾನು ಹಾಗೂ ಮುಂಬೈ ನಟಿಯೊಬ್ಬರು ಪಾಲ್ಗೊಂಡಿದ್ದೇವೆ. ಯೋಗರಾಜ್ ಭಟ್ ಈ ಹಾಡು ಬರೆದಿದ್ದಾರೆ. ಎಮಿಲ್ ಸಂಗೀತ ಸಂಯೋಜನೆಯಿದ್ದು, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ’ ಎಂದರು. ಆಸಿಯಾ ಫಿರ್ದೋಸ್‌ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್ ರೈ, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ ಚಿತ್ರದ ಇತರೆ ಪ್ರಮುಖ ಕಲಾವಿದರು. ರಾಕೇಶ್‌ ಸಿ ತಿಲಕ್‌ ಛಾಯಾಗ್ರಹಣ ಚಿತ್ರಕ್ಕಿದೆ.

Previous articleಬೆಂಗಳೂರಿನ ಜಯನಗರ BMTC ಡಿಪೋಗೆ ರಜನೀಕಾಂತ್‌ ಸರ್ಪ್ರೈಸ್‌ ವಿಸಿಟ್‌
Next article‘ಶಾಖಾಹಾರಿ’ ಶೀರ್ಷಿಕೆ ಬಿಡುಗಡೆ ಮಾಡಿದ ಯೋಗರಾಜ್‌ ಭಟ್‌ | ರಂಗಾಯಣ ರಘು ಸಿನಿಮಾ

LEAVE A REPLY

Connect with

Please enter your comment!
Please enter your name here