ಕನ್ನಡ ಕಿರುತೆರೆ ಮತ್ತು ಸಿನಿಮಾ ನಟ ವಿಜಯ್‌ ಸೂರ್ಯ ನೂತನ ಸಿನಿಮಾ ‘ವೀರಪುತ್ರ’ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಮೆಡಿಕಲ್‌ ಮಾಫಿಯಾ ಮತ್ತು ಫ್ಯಾಮಿಲಿ ರಿವೇಂಜ್‌ ಚಿತ್ರದ ಕಥಾವಸ್ತು. ಡಾ ಎಸ್‌ ದೇವರಾಜ್‌ ನಿರ್ದೇಶಿಸಲಿರುವ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಉಮಾ‍ಶ್ರೀ ನಟಿಸುತ್ತಿದ್ದಾರೆ.

ನಟ ವಿಜಯ್‌ ಸೂರ್ಯ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡರು. ಬರ್ತ್‌ಡೇ ಉಡುಗೊರೆಯಾಗಿ ಅವರು ನಟಿಸುತ್ತಿರುವ ‘ವೀರಪುತ್ರ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ‘ಅಗ್ನಿಸಾಕ್ಷಿ’ ಸೀರಿಯಲ್‌ ಖ್ಯಾತಿಯ ಚಾಕೋಲೇಟ್‌ ಹೀರೋ ವಿಜಯ್‌ ಸೂರ್ಯ ‘ವೀರಪುತ್ರ’ದಲ್ಲಿ ಆಕ್ಷನ್‌ ಹೀರೋ ಆಗಿದ್ದಾರೆ. ಉದ್ದ ತಲೆಗೂದಲು, ಮೈ ಹುರಿಗೊಳಿಸಿಕೊಂಡು ರಡಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಸಪ್ಲಿಮೆಂಟರಿ’ ಸಿನಿಮಾ ನಿರ್ದೇಶಿಸಿದ್ದ ಡಾ ದೇವರಾಜ್‌ ಎಸ್‌ ಅವರು ‘ವೀರಪುತ್ರ’ ಸಾರಥ್ಯ ವಹಿಸಿದ್ದಾರೆ. ಕತೆ, ಚಿತ್ರಕಥೆ ಮತ್ತು ಸಂಭಾಷಣೆ ಕೂಡ ಅವರದೆ. ಇದು ಮೆಡಿಕಲ್‌ ಮಾಫಿಯಾ ಮತ್ತು ಫ್ಯಾಮಿಲಿ ರಿವೇಂಜ್‌ ಕಥಾವಸ್ತು. ‘ಸಂಪ್ಲಿಮೆಂಟರಿ’, ‘ಧೀರ ಸಾಮ್ರಾಟ್’ ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರದ ನಿರ್ಮಾಪಕರು.

ಚಿತ್ರದಲ್ಲಿ ವಿಜಯ್ ಸೂರ್ಯ ಜೋಡಿಯಾಗಿ ಲೇಖಚಂದ್ರ ಇರಲಿದ್ದು, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ಸಂಭಾಷಣೆ, ಜೂಡಾ ಸ್ಯಾಂಡಿ ಸಂಗೀತ, ಸಿ ರವಿಚಂದ್ರನ್ ಸಂಕಲನ, ಉದಯ್ ಆದಿತ್ಯ ಛಾಯಾಗ್ರಹಣ, ಪ್ರಮೋದ್ ಮರವಂತೆ ಸಾಹಿತ್ಯ ‘ವೀರಪುತ್ರ’ ಚಿತ್ರಕ್ಕಿದೆ. ಬೆಂಗಳೂರು, ಹೈದರಾಬಾದ್‌ನಲ್ಲಿ ಶೇ 60ರಷ್ಟು ಶೂಟಿಂಗ್ ನಡೆಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣಕ್ಕೆ ಮುಂದಿನ ತಿಂಗಳು ಚಾಲನೆ ಸಿಗಲಿದೆ. ‘ಇಷ್ಟಕಾಮ್ಯ’ ಸಿನಿಮಾ ಮೂಲಕ ಬೆಳ್ಳಿತೆರೆಯ ಹೀರೋ ಆಗಿದ್ದ ವಿಜಯ್ ಸೂರ್ಯ ಸದ್ಯ ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here