ಅಭಯ್‌ ನವೀನ್‌ ನಿರ್ದೇಶಿಸಿ, ನಟಿಸಿರುವ ‘ರಾಮಣ್ಣ ಯೂತ್‌’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ನಟ ಸಿದ್ದಾರ್ಥ್‌ ಟ್ರೈಲರ್‌ ಅನಾವರಣಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಅಮೂಲ್ಯ ರೆಡ್ಡಿ ನಾಯಕಿಯಾಗಿ ನಟಿಸಿರುವ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಕಾಣಲಿದೆ.

ನಟ ಅಭಯ್‌ ನವೀನ್‌ ಇತ್ತೀಚಿನ ತೆಲುಗು ಚಿತ್ರಗಳಲ್ಲಿ ಹಾಸ್ಯನಟನಾಗಿ ಹೆಸರು ಮಾಡುತ್ತಿದ್ದಾರೆ. ಅವರು ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ರಾಮಣ್ಣ ಯೂತ್‌’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಬಹುಭಾಷಾ ನಟ ಸಿದ್ದಾರ್ಥ್‌ ಟ್ರೈಲರ್‌ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ನಾಯಕ ಮತ್ತು ಅವನ ಗೆಳೆಯರ ಗುಂಪು ಸ್ಥಳೀಯ ರಾಜಕಾರಣಿಯ ಗಮನ ಸೆಳೆಯಲು ಒಂದರ ನಂತರ ಒಂದರಂತೆ ಉಪಾಯಗಳನ್ನು ಮಾಡಲು ಹೋಗಿ ವಿಫಲರಾಗಿ ತಮ್ಮ ನಡುವೆಯೇ ಜಗಳ ಮಾಡಿಕೊಳ್ಳುತ್ತಾರೆ. ಕೊನೆಗೆ ರಾಮಣ್ಣ ಎಂಬ ರಾಜಕೀಯ ವ್ಯಕ್ತಿಯ ಗಮನ ಸೆಳೆದು ರಾಜಕೀಯದಲ್ಲಿ ಸಕ್ರೀಯವಾಗಿ ಕೆಲಸ ಮಾಡಲು ನಾಯಕ ತೊಡಗಿಸಿಕೊಳ್ಳುತ್ತಾನೆ. ಈ ಎಲ್ಲಾ ಅಂಶಗಳನ್ನು ಹಾಸ್ಯದ ಮೂಲಕ ಟ್ರೇಲರ್‌ನಲ್ಲಿ ತೋರಿಸಲಾಗಿದೆ.

‘ಪೆಳ್ಳಿ ಚೂಪುಲು’, ‘ಡಿಸ್ಕೋ ರಾಜಾ’, ‘ಗೀತಾ ಗೋವಿಂದಂ’, ‘ಸಮ್ಮೋಹನಂ’ ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಹಾಸ್ಯ ಕಲಾವಿದ ಅಭಯ್‌ ನವೀನ್‌ ‘ರಾಮಣ್ಣ ಯೂತ್‌’ ನಿರ್ದೇಶಿಸಿದ್ದಾರೆ. ಇದೊಂದು ಪೊಲಿಟಿಕಲ್‌ ಕಾಮಿಡಿ ಕಥಾವಸ್ತು. ಅಮೂಲ್ಯ ರೆಡ್ಡಿ, ತಗುಬೊತು ರಮೇಶ್, ಶ್ರೀಕಾಂತ್ ಅಯ್ಯಂಗಾರ್ ವಿಷ್ಣು ಓಯಿ, ಅನಿಲ್ ಗೀಲಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Firefly Arts ಬ್ಯಾನರ್‌ ಅಡಿ Silly Monks Studios ಅರ್ಪಿಸುತ್ತಿದ್ದು, ಸ್ವರ್ಣ ಅವರು ಚಿತ್ರ ನಿರ್ಮಿಸಿದ್ದಾರೆ. ಫಹಾದ್‌ ಅಬ್ದುಲ್‌ ಮಜೀದ್‌ ಛಾಯಾಗ್ರಹಣ, ಕಮ್ರಾನ್‌ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸೆಪ್ಡೆಂಬರ್‌ 15ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here