ರವಿತೇಜ ಹೀರೋ ಆಗಿ ನಟಿಸಿರುವ ‘ಟೈಗರ್ ನಾಗೇಶ್ವರ ರಾವ್’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಆಂಧ್ರ ಸ್ಟೂವರ್ಟ್‌ಪುರಂನ ಕುಖ್ಯಾತ ಕಳ್ಳ ಟೈಗರ್ ನಾಗೇಶ್ವರ ರಾವ್ ಕುರಿತು ಹೆಣೆದಿರುವ ಕತೆಯನ್ನು ವಂಶಿ ನಿರ್ದೇಶಿಸಿದ್ದಾರೆ. ಅನುಪಮ್ ಖೇರ್, ಮುರಳಿ ಶರ್ಮಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಕ್ಟೋಬರ್ 20ರಂದು ಸಿನಿಮಾ ತೆರೆಕಾಣಲಿದೆ.
ರವಿತೇಜ, ಅನುಪಮ್ ಖೇರ್ ಮತ್ತು ಮುರಳಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಟೈಗರ್ ನಾಗೇಶ್ವರ ರಾವ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವು 1970ರ ದಶಕದಲ್ಲಿ ಆಂಧ್ರಪ್ರದೇಶದ ಸ್ಟೂವರ್ಟ್‌ಪುರಂನ ಭಯಾನಕ ಕಳ್ಳ ಟೈಗರ್ ನಾಗೇಶ್ವರ ರಾವ್ ನೈಜ ಕಥೆಯನ್ನು ಹೇಳಲಿದೆ. ವಂಶಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಟ್ರೈಲರ್, ‘ನೈಜ ವದಂತಿಗಳಿಂದ ಸ್ಫೂರ್ತಿ’ ಎಂದು ಆರಂಭವಾಗುತ್ತದೆ. ಕಾಕಿನಾಡ – ಮದ್ರಾಸ್ ಸರ್ಕಾರ್ ಎಕ್ಸ್‌ಪ್ರೆಸ್‌ನ ಯೋಜನೆಯ ಕಳ್ಳತನದ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡುವ ಫೋನ್ ಕರೆಯೊಂದು ಬರುತ್ತದೆ. ಈ ಅಪರಾಧವನ್ನು ಯಾರು ಮಾಡಲು ಹೊರಟಿದ್ದಾರೆ ಎಂದು ಅಧಿಕಾರಿಯು ಪ್ರಶ್ನಿಸಿದಾಗ, ಕರೆ ಮಾಡಿದ್ದ ನಾಗೇಶ್ವರ ರಾವ್ ‘ನಾನು ಯಾರನ್ನಾದರೂ ಹೊಡೆಯುವ ಮೊದಲು ಅಥವಾ ಏನನ್ನಾದರೂ ಕದಿಯುವ ಮೊದಲು ಯಾವಾಗಲೂ ಎಚ್ಚರಿಕೆ ನೀಡುತ್ತೇನೆ. ಅಧಿಕಾರದ ಹಸಿವು, ಹೆಣ್ಣಿನ ದುರಾಸೆ, ಹಣದ ಲಾಲಸೆ ಇರುವ ವ್ಯಕ್ತಿ ನಾನು’ ಎಂದು ಧ್ವನಿ ಕೇಳಿ ಕರೆ ಅಂತ್ಯವಾಗುತ್ತದೆ.
ಟೈಗರ್ ನಾಗೇಶ್ವರ ರಾವ್‌ನನ್ನು ಹಿಡಿಯಲು ಮುರಳಿ ಶರ್ಮಾ ಅವರ ಪೊಲೀಸ್ ಪಡೆಯ ಹುಡುಕಾಟದ ಒಂದು ಭಾಗವಾಗಿ ಅನುಪಮ್ ಖೇರ್ ಉನ್ನತ ಶ್ರೇಣಿಯ IB (Intelligence Bureau) ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಪಾತ್ರಗಳ ವಿವರಣೆ ಇದೆ. ‘ಭಾರತದ ಅತಿ ದೊಡ್ಡ ಕಳ್ಳ’ ಎಂಬ ಅಡಿಬರಹ ಹೊಂದಿರುವ ಈ ಸಿನಿಮಾವು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗಲಿದ್ದು, ಸ್ಟುವರ್ಟ್‌ಪುರಂನ ಮಾಸ್ಟರ್ ಮೈಂಡ್ ಕ್ರಿಮಿನಲ್, ಕುಖ್ಯಾತ ಕಳ್ಳನ ಜೀವನದ ನೈಜ ಘಟನೆಗಳ ಕಥೆ ಈ ಚಲನಚಿತ್ರ. ಹಾಗೂ ಇದು ರವಿ ತೇಜಾ ಅವರ ಮೊದಲ PAN ಇಂಡಿಯಾ ಪ್ರಾಜೆಕ್ಟ್. ‘ಕಾಶ್ಮೀರ್ ಫೈಲ್ಸ್’ ನಿರ್ಮಿಸಿದ್ದ ಅಭಿಷೇಕ್ ಅಗರ್‌ವಾಲ್ ಅವರು Abhishek Agarwal Arts ಬ್ಯಾನರ್ ಅಡಿ ಈ ಚಿತ್ರ ನಿರ್ಮಿಸಿದ್ದಾರೆ. ಚಿತ್ರಕ್ಕೆ ಶ್ರೀಕಾಂತ್ ವಿಸ್ಸಾ ಸಂಭಾಷಣೆ, ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆಯಿದೆ. ನೂಪುರ್ ಸನೂನ್, ಗಾಯತ್ರಿ ಭಾರದ್ವಾಜ್, ಜಾನ್ ಅಬ್ರಹಾಂ ಹಾಗೂ ವಿಶೇಷ ಪಾತ್ರದಲ್ಲಿ ತಮಿಳು ನಟ ಕಾರ್ತಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಇದೇ ಅಕ್ಟೋಬರ್ 20, 2023ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
https://x.com/RaviTeja_offl/status/1709130422029041668?s=20