ನಟ ದುಲ್ಕರ್‌ ಸಲ್ಮಾನ್‌ ಮತ್ತು ಜಸ್ಲಿನ್‌ ರಾಯಲ್‌ ಅವರ ಮೇಲೆ ಪಿಕ್ಚರೈಸ್‌ ಆಗಿರುವ ‘ಹೀರಿಯೇ’ ಆಲ್ಬಂ ಸಾಂಗ್‌ ಗಮನ ಸೆಳೆಯುತ್ತಿದೆ. ಜಸ್ಲಿನ್‌ ರಾಯಲ್‌ ಸಂಗೀತ ಸಂಯೋಜಿಸಿ ಹಾಡಿರುವ ಗೀತೆಯಿದು. ಖ್ಯಾತ ಗಾಯಕ ಅರಿಜಿತ್‌ ಸಿಂಗ್‌ ಹಾಡಿನಲ್ಲಿ ಜಸ್ಲಿನ್‌ಗೆ ಜೊತೆಯಾಗಿದ್ದಾರೆ.

ಅರಿಜಿತ್‌ ಸಿಂಗ್‌ ಮತ್ತು ಜಸ್ಲೀನ್‌ ರಾಯಲ್‌ ಹಾಡಿರುವ ಆಲ್ಬಂ ಸಾಂಗ್‌ನಲ್ಲಿ ನಟ ದುಲ್ಕರ್‌ ಸಲ್ಮಾನ್‌ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಅನೇಕರಿಗೆ ಆಶ್ಚರ್ಯ ತಂದಿತ್ತು. ಈಗ ಈ ಹಾಡು ಬಿಡುಗಡೆಯಾದಾಗಿನಿಂದ ಸಂಚಲನ ಸೃಷ್ಟಿಸಿದೆ. ಗ್ಲೋಬಲ್‌ ಟಾಪ್‌ ಮ್ಯೂಸಿಕ್‌ ವಿಡಿಯೋಗಳ ಪಟ್ಟಿಯಲ್ಲಿ ಈ ಹಾಡು ಅಗ್ರ ಸ್ಥಾನದಲ್ಲಿದೆ. ಮತ್ತು ಅತ್ಯಂತ ಹೆಚ್ಚು ಅನ್ವೇಶಿಸಿದ ಹಾಡುಗಳ ಪಟ್ಟಿಯಲ್ಲಿಯೂ ಇದು ತನ್ನ ಸ್ಥಾನ ಕಾಯ್ದುಕೊಂಡಿದೆ. ಈ ಹಾಡು ಬಿಡುಗಡೆಯಾದಾಗಿನಿಂದ 100 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ದಾಟಿದೆ. ಹಾಗೂ ಸಾಮಾಜಿಕ ಮಾಧ್ಯಮಗಳಾದ Instagram, YouTube ಸೇರಿದಂತೆ ಎಲ್ಲಾ ಫ್ಲಾಟ್‌ಫಾರ್ಮ್‌ಗಳಲ್ಲಿ ಪ್ರತಿಯೊಬ್ಬರೂ ಈ ರೋಮ್ಯಾಂಟಿಕ್ ಹಾಡನ್ನು ಒಂದಲ್ಲಾ ಒಂದು ರೀತಿ ಬಳಸುತ್ತಿದ್ದಾರೆ.‌ ಹಾಗೂ ಈ ಹಾಡಿಗೆ ಹೆಚ್ಚಾಗಿ ರೀಲ್ಸ್‌ ಮಾಡುತ್ತಿದ್ದಾರೆ.

ಈ ಸಂಭ್ರಮವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದುಲ್ಕರ್‌ ‘ಹಾಡುಗಳು ಮತ್ತು ಚಲನಚಿತ್ರಗಳು ತಮ್ಮ ಹಣೆಬರಹವನ್ನು ಬದಲಾಯಿಸುತ್ತವೆ ಎಂದು ನಾನು ನಂಬಿದ್ದೇನೆ. ‘ಹೀರಿಯೇ’ ಹಾಡಿನ ಒಂದು ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಇದೆ. ಇಂದು ಈ ಹಾಡು ಅಗ್ರಸ್ಥಾನದಲ್ಲಿದೆ ಮತ್ತು ಹೊಸ ದಾಖಲೆಗಳನ್ನು ರಚಿಸುತ್ತಿದೆ, ಅದು ನನ್ನ ಹೃದಯ ತುಂಬಿದೆ. ಈ ಹಾಡನ್ನು ಮೆಚ್ಚಿದ್ದಕ್ಕಾಗಿ ನಾನು ಪ್ರೇಕ್ಷಕರಿಗೆ ಕೇವಲ ಧನ್ಯವಾದ ಹೇಳಲು ಸಾಧ್ಯವಿಲ್ಲ, ವಿಶೇಷವಾದ ಈ ಹಾಡನ್ನು ನಿಮ್ಮೆಲ್ಲರಿಗಾಗಿ ತಂದಿರುವುದು ತುಂಬಾ ಸಂತೋಷವಾಗಿದೆ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

LEAVE A REPLY

Connect with

Please enter your comment!
Please enter your name here