ಜೆ ಡಿ ಚಕ್ರವರ್ತಿ ಮತ್ತು ರಮ್ಯಾ ನಂಬೀಸನ್‌ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ದಯಾ’ ಮರ್ಡರ್‌ ಮಿಸ್ಟರಿ ತೆಲುಗು ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಪವನ್‌ ಸಾದಿನೇನಿ ನಿರ್ದೇಶನದ ಸರಣಿ ಆಗಸ್ಟ್‌ 4ರಿಂದ DisneyPlus Hotstarನಲ್ಲಿ ಸ್ಟ್ರೀಮ್‌ ಆಗಲಿದೆ.

ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಜೆ ಡಿ ಚಕ್ರವರ್ತಿ ನಟನೆಯಮರ್ಡರ್‌ ಮಿಸ್ಟರಿ ತೆಲುಗು ವೆಬ್‌ ಸರಣಿ ಟ್ರೈಲರ್‌ ಬಿಡುಗಡೆಯಾಗಿದೆ. ಪವನ್‌ ಸಾದಿನೇನಿ ನಿರ್ದೇಶನದ ಸರಣಿಯ ಪ್ರಮುಖ ಪಾತ್ರದಲ್ಲಿ ನಟಿ ರಮ್ಯಾ ನಂಬೀಸನ್‌ ಇದ್ದಾರೆ. ಕಾಣೆಯಾದ ಕವಿತಾ ನಾಯ್ಡು (ರಮ್ಯಾ) ಎಂಬ ಪತ್ರಕರ್ತೆಯನ್ನು ಸುದ್ದಿಮಾಡುತ್ತಿರುವ ನ್ಯೂಸ್ ಚಾನೆಲ್‌ಗಳ ವರದಿಯೊಂದಿಗೆ ಟ್ರೈಲರ್‌ ಆರಂಭವಾಗುತ್ತದೆ. ಇದರ ಮಧ್ಯೆ ಫ್ರೀಜರ್ ವ್ಯಾನ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ದಯಾ (ಚಕ್ರವರ್ತಿ) ವ್ಯಾನ್‌ನಲ್ಲಿ ಕವಿತಾಳ ಮೃತ ದೇಹ ಪತ್ತೆಯಾಗುತ್ತದೆ. ಏನು ಮಾಡಬೇಕೆಂದು ತಿಳಿಯದ ದಯಾ ಮೃತ ದೇಹವನ್ನು ಬಚ್ಚಿಡಲು ಪ್ರಯತ್ನಿಸುತ್ತಾನೆ. ಪೊಲೀಸರ ಕಾರ್ಯಾಚರಣೆ, ತನಿಖೆಯ ಸುತ್ತ ಏನೆಲ್ಲಾ ಆಗಲಿದೆ ಎನ್ನುವುದು ಸರಣಿಯ ಕಥಾವಸ್ತು. ಇಶಾ ರೆಬ್ಬ, ಬಬ್ಲೂ ಪೃಥ್ವಿರಾಜ್, ವಿಷ್ಣುಪ್ರಿಯಾ ಭೀಮಿನೇನಿ, ರವಿ ಜೋಶ್, ಕಮಲ್ ಕಾಮರಾಜು, ಮಯಾಂಕ್ ಪರಾಖ್, ನಂದಗೋಪಾಲ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಕಾಂತ್‌ ಮೊಹ್ತಾ ಮತ್ತು ಮಹೇಂದ್ರ ಸೋನಿ ನಿರ್ಮಾಣದ ಸರಣಿಗೆ ರಾಕೇಂದು ಮೌಳಿ ಸಂಭಾಷಣೆ, ಪವನ್ ಸಾದಿನೇನಿ ಮತ್ತು ವಸಂತ್ ಜುರ್ರು ಚಿತ್ರಕಥೆ ರಚಿಸಿದ್ದಾರೆ. ವಿವೇಕ್ ಕಲೆಪು ಛಾಯಾಗ್ರಹಣ, ವಿಪ್ಲವ್ ನಿಶಾದಂ ಸಂಕಲನ, ಶ್ರವಣ್ ಭಾರದ್ವಾಜ್ ಅವರ ಸಂಗೀತ ಸಂಯೋಜನೆ ಸರಣಿಗಿದೆ. ಆಗಸ್ಟ್‌ 4ರಿಂದ DisneyPlus Hostarನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

Previous articleಸಿದ್ದಾರ್ಥ್‌ ಮಹೇಶ್‌ ನೂತನ ಸಿನಿಮಾ | ನಟನೆ ಜೊತೆ ನಿರ್ದೇಶನಕ್ಕೆ ಸಜ್ಜಾದ ನಟ
Next articleವಿಜಯ್‌ ಸೇತುಪತಿ – ಕತ್ರಿನಾ ಕೈಫ್‌ ‘ಮೇರಿ ಕ್ರಿಸ್ಮಸ್‌’ ನೂತನ ಪೋಸ್ಟರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here