ವಿಕ್ರಾಂತ್‌ ನಟಿಸಿ, ನಿರ್ದೇಶಿಸಿರುವ ‘ಸ್ಪಾರ್ಕ್‌ ಲೈಫ್‌’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಮಲಯಾಳಂ ಸಿನಿಮಾದ ಹಿರಿಯ ನಟ ಗುರು ಸೋಮಸುಂದರಂ ಚಿತ್ರದ ಖಳನಾಗಿ ಅಭಿನಯಿಸಿದ್ದು, ಮೆಹ್ರೀನ್‌ ಪಿರ್ಜಾದಾ ಮತ್ತು ರುಕ್ಷಾರ್‌ ಧಿಲ್ಲೋನ್‌ ಚಿತ್ರದ ಇಬ್ಬರು ನಾಯಕಿಯರು.

ವಿಕ್ರಾಂತ್ ನಿರ್ದೇಶಿಸಿ ನಟಿಸಿರುವ ‘ಸ್ಪಾರ್ಕ್ ಲೈಫ್’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಷಾರ್ ಧಿಲ್ಲೋನ್ ಚಿತ್ರದ ಇಬ್ಬರು ನಾಯಕಿಯರು. ಚಿತ್ರದ ಕುರಿತು ಮಾತನಾಡುವ ವಿಕ್ರಾಂತ್‌, ‘ಈ ಸಿನಿಮಾ ನನ್ನ 3 ವರ್ಷಗಳ ಕನಸು​. ಪ್ರೇಕ್ಷಕರು ಟ್ರೇಲರ್‌ ಅನ್ನು ಇಷ್ಟಪಟ್ಟಿದ್ದಾರೆ ಎಂದು ಭಾವಿಸುತ್ತೇನೆ. ಈ ಸಿನಿಮಾಗಾಗಿ ಒಂದೂವರೆ ವರ್ಷ ಕಥೆ ಸಿದ್ಧಮಾಡಿದೆ. ಬಳಿಕ ಇನ್ನೂ ಒಂದೂವರೆ ವರ್ಷ ನಿರ್ಮಾಣಕ್ಕೆ ಮೀಸಲಿಟ್ಟೆ. ನಿರ್ಮಾಣದ ವಿಚಾರದಲ್ಲಿ ನಾವು ಕಿಂಚಿತ್ತೂ ರಾಜಿಯಗಿಲ್ಲ. ಚಿತ್ರದಲ್ಲಿ ಹಾಸ್ಯ, ಪ್ರೀತಿ, ಥ್ರಿಲ್ಲಿಂಗ್ ಅಂಶಗಳೂ ಸೇರಿದಂತೆ ಎಲ್ಲವೂ ಇದೆ. ನಾನು ನಾಯಕನಾಗಿಯೂ ಬಣ್ಣ ಹಚ್ಚಿದ್ದೇನೆ’ ಎಂದಿದ್ದಾರೆ ವಿಕ್ರಾಂತ್‌.

ಮಲಯಾಳಂ ಸಿನಿರಂಗದ ಹಿರಿಯ ಕಲಾವಿದ ಗುರು ಸೋಮಸುಂದರಂ ಅವರು ಚಿತ್ರದಲ್ಲಿ ಖಳನಾಯಕನಾಗಿ ಪಾತ್ರ ನಿರ್ವಹಿಸಿದ್ದಾರೆ. ಗುರು ಸೋಮಸುಂದರಂ, ರುಕ್ಷಾರ್ ಧಿಲ್ಲೋನ್ ಮಾತ್ರವಲ್ಲದೇ ನಾಸರ್, ವೆನ್ನೆಲ ಕಿಶೋರ್, ಸುಹಾಸಿನಿ ಮಣಿರತ್ನಂ, ಸತ್ಯ, ಶ್ರೀಕಾಂತ್ ಅಯ್ಯಂಗಾರ್, ಬ್ರಹ್ಮಾಜಿ, ಚಮ್ಮಕ್ ಚಂದ್ರ, ರಾಜಾ ರವೀಂದ್ರ, ಅನ್ನಪೂರ್ಣಮ್ಮ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Deaf Frog Productions ಬ್ಯಾನರ್‌ ಅಡಿಯಲ್ಲಿ ಲೀಲಾ ರೆಡ್ಡಿ ಚಿತ್ರ ನಿರ್ಮಿಸಿದ್ದಾರೆ. ‘ಹೃದಯಂ’, ‘ಖುಷಿ’ ಸಿನಿಮಾಗಳ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ನವೆಂಬರ್ 17ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here