‘ಅಮೆರಿಕಾ ಅಮೆರಿಕಾ’ ಸಿನಿಮಾ ತೆರೆಕಂಡು 26 ವರ್ಷಗಳಾಗಿವೆ. ಈ ಸಿನಿಮಾ ನಿರ್ದೇಶಿಸಿದ್ದ ನಾಗತಿಹಳ್ಳಿ ಚಂದ್ರಶೇಖರ್ ಇದೀಗ ಮತ್ತೆ ಅಮೆರಿಕಾದಲ್ಲಿ ಶೂಟಿಂಗ್ ನಡೆಸಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ನಡೆದಿದೆ. ಪೃಥ್ವಿ ಅಂಬಾರ್, ನಿರೂಪ್ ಭಂಡಾರಿ ಮತ್ತು ಶಾನ್ವಿ ಶ್ರೀವಾತ್ಸವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡದ ಜನಪ್ರಿಯ ಚಲನಚಿತ್ರ ‘ಅಮೆರಿಕಾ ಅಮೆರಿಕಾ’ ತೆರೆಕಂಡು 26 ವರ್ಷ ಆಗಿದೆ. ಇದನ್ನ ನೆನಪಿಸೋ ಕೆಲಸ ಮತ್ತೊಮ್ಮೆ ಆಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಅಮೆರಿಕಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದು ‘ಅಮೆರಿಕಾ ಅಮೆರಿಕಾ 2’ ಚಿತ್ರವೇ ಅನ್ನುವ ಕುತೂಹಲ ಕೂಡ ಇದೆ. ಇನ್ನು ಹೆಸರಿಡದ ಈ ಚಿತ್ರದಲ್ಲೂ ತ್ರಿಕೋನ ಪ್ರೇಮ ಕಥೆಯನ್ನೇ ಹೆಣೆದಿದ್ದಾರೆ. ಸಿನಿಮಾದಲ್ಲಿ ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾತ್ಸವ್ ಮತ್ತು ನಿರೂಪ್ ಭಂಡಾರಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಮೆರಿಕಾ ಎಂದ ಕೂಡಲೇ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕಾ ಅಮೆರಿಕಾ’ ಚಿತ್ರವೇ ಕಣ್ಮುಂದೆ ಬರುತ್ತದೆ. ಅದನ್ನ ನೆನಪಿಸೋ ಒಂದು ಕೆಲಸವನ್ನು ಈ ಚಿತ್ರ ಮಾಡಲಿದೆ ಎನ್ನುವ ಸುದ್ದಿ ಇದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಈಗ ಅಮೆರಿಕಾದಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದು, ಅದರ ಕೆಲವು ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಪೃಥ್ವಿ ಅಂಬಾರ್ ಈ ಚಿತ್ರದ ಒಂದು ಪಾತ್ರಕ್ಕೆ ತಮ್ಮ ಲುಕ್ ಬದಲಿಸಿದ್ದಾರೆ. ಇದಕ್ಕೆ ಬೇಕಿರೋ ತಯಾರಿ ಮಾಡಿಕೊಂಡೇ ಅಮೆರಿಕಾ ದೇಶಕ್ಕೆ ಹೋಗಿದ್ದಾರೆ. ಇದೀಗ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಈ ಕುರಿತು ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.