ಆಕಾಶ್‌ ಜೋಶಿ ಕತೆ ಬರೆದು ನಿರ್ದೇಶಿಸಿರುವ ‘ಅಂತರ್ ಕಲಹ’ ರಿಲೀಸ್‌ಗೆ ಸಿದ್ಧವಾಗಿದೆ. ಇದೊಂದು ಸೈಕಾಲಾಜಿಕಲ್‌ ಥ್ರಿಲ್ಲರ್‌. ಅರುಣ್‌ ಸಾಗರ್‌, ರಾಣಾ, ಆರ್ತಿ ಪಡುಬಿದ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಶಾರ್ಟ್‌ ಫಿಲ್ಮ್‌ ಸದ್ಯದಲ್ಲೇ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ.

ಸಿನಿಮಾ ನಿರ್ದೇಶನದ ಕನಸು ಹೊತ್ತ ಪ್ರತಿಭಾವಂತರು, ಉತ್ಸಾಹಿಗಳು ಮೊದಲ ಪ್ರಯತ್ನವಾಗಿ ಕಿರುಚಿತ್ರಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಈ ಪಟ್ಟಿಗೆ ಭರವಸೆಯ ಸೇರ್ಪಡೆ ‘ಅಂತರ್‌ ಕಲಹ’ ಶಾರ್ಟ್‌ ಫಿಲ್ಮ್‌. ಮೂಲತಃ ರಂಗಭೂಮಿ ಕಲಾವಿದ, ಅಭಿನಯ ತರಂಗ ಹಾಗೂ ವಿಜಯನಗರ ಬಿಂಬದಲ್ಲಿ ನಾಟಕಗಳಲ್ಲಿ ಅಭಿನಯ‌. ಆನಂತರ ALL OK ಸೇರಿದಂತೆ ಕನ್ನಡದ ಜನಪ್ರಿಯ Rappersಗಳ ಆಲ್ಬಂ ಸಾಂಗ್‌ಗಳಿಗೆ ಛಾಯಾಗ್ರಹಣ ಹಾಗೂ ಸಂಕಲನ ಮಾಡಿರುವ ಆಕಾಶ್ ಜೋಶಿ ಈಗ ‘ಅಂತರ್ ಕಲಹ’ ಕಿರುಚಿತ್ರ ನಿರ್ದೇಶಿಸಿದ್ದಾರೆ. ಈ ಕಿರುಚಿತ್ರದ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

“ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್. ಪ್ರತಿಯೊಬ್ಬ ಮನುಷ್ಯನ ಒಳಗೂ ‘ಅಂತರ್ ಕಲಹ’ವಿರುತ್ತದೆ. ಅದನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದನ್ನು ಈ ಕಿರುಚಿತ್ರದ ಮೂಲಕ ಹೇಳಹೊರಟಿದ್ದೇನೆ. ನಮ್ಮ ತಂಡಕ್ಕೆ ಹಿರಿತೆರೆಯಲ್ಲಿ ಸಿನಿಮಾ ಮಾಡುವ ಆಸೆಯಿದೆ. ಅದಕ್ಕೆ ಇದು ಮೊದಲ ಹೆಜ್ಜೆ ಎನ್ನಬಹುದು. ನಾನೇ ಕಥೆ ಬರೆದು, ಛಾಯಾಗ್ರಹಣ ಹಾಗೂ ಸಂಕಲನದೊಂದಿಗೆ ನಿರ್ದೇಶನ ಮಾಡಿದ್ದೇನೆ” ಎಂದರು ಆಕಾಶ್‌ ಜೋಶಿ. ಸುನಿಲ್ ಬಿ.ಟಿ. ಮತ್ತು ಪ್ರಿಯಾಂಕಾ ಜೋಶಿ ನಿರ್ಮಿಸಿರುವ ಕಿರುಚಿತ್ರದಲ್ಲಿ ಅರುಣ್ ಸಾಗರ್, ರಾಣಾ, ಅನ್ನಪೂರ್ಣ, ಆರ್ತಿ ಪಡುಬಿದ್ರಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಈ ಶಾರ್ಟ್‌ಫಿಲ್ಮ್‌ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಕಿರುಚಿತ್ರದಲ್ಲಿ ನಟಿಸಿರುವ ಅರುಣ್‌ ಸಾಗರ್‌, “ನನಗೆ ನನ್ನ ಗುರುಗಳಾದ ಬಿ.ವಿ.ಕಾರಂತರು ಹೇಳುತ್ತಿದ್ದರು. ಹೊಸಬರಿಗೆ ನಿನ್ನ ಕೈಲಾದ ಸಹಾಯ ಮಾಡು ಎಂದು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಈ ತಂಡದವರು ಬಂದು, ಈ ರೀತಿಯ ಪಾತ್ರ ಇದೆ ನೀವು ಬಂದು ಮಾಡಿ ಎಂದಾಗ ಆಯ್ತು ಎಂದೆ. ಈ ಉತ್ಸಾಹಿ ಯುವ ತಂಡಕ್ಕೆ ಶುಭವಾಗಲಿ” ಎಂದರು. ಹಿರಿಯ ನಟ ದೊಡ್ಡಣ್ಣ ಕಿರುಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ALL OK, ನಿರಂಜನ್ ದೇಶಪಾಂಡೆ, ರಘು ಗೌಡ, ಶಮಂತ್ (ಬ್ರೋ ಗೌಡ), ರೋಹಿತ್ ಭಾನುಪ್ರಕಾಶ್, ಸಾಗರ್ ಪುರಾಣಿಕ್, ಸಂಜಯ್ ಶರ್ಮ ಮುಖ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದರು.

LEAVE A REPLY

Connect with

Please enter your comment!
Please enter your name here