ಮಾಜಿ ಟೆಸ್ಟ್‌ ಕ್ರಿಕೆಟರ್‌ ಧೋನಿ ಮತ್ತು ತೆಲುಗು ತಾರೆ ರಾಮ್‌ ಚರಣ್‌ ತೇಜಾ ಭೇಟಿ ಇಬ್ಬರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಧೋನಿ ನಿರ್ಮಾಣ ಸಂಸ್ಥೆಯಡಿ ರಾಮ್‌ ಚರಣ್‌ ಸಿನಿಮಾ ಆಗುವ ಸಾಧ್ಯತೆಗಳಿವೇ ಎಂದೆಲ್ಲಾ ವದಂತಿಗಳು ಹರಡಿವೆ.

ಭಾರತದ ಮಾಜಿ ಟೆಸ್ಟ್‌ ಕ್ರಿಕೆಟರ್‌, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್​ ಧೋನಿ ಅವರನ್ನು ರಾಮ್ ಚರಣ್ ಬೇಟಿಯಾಗಿದ್ದಾರೆ. ಧೋನಿ ಅವರು ಚಿತ್ರರಂಗದ ಯಾರನ್ನೇ ಭೇಟಿ ಮಾಡಿದರೂ ಹಲವು ಕುತೂಹಲ ಮೂಡುತ್ತದೆ. ಅದಕ್ಕೆ ಕಾರಣ ಅವರು ಇತ್ತೀಚಿಗೆ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾರೆ. ‘Dhoni Entertainment’ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ‘ಲೆಟ್ಸ್ ಗೆಟ್ ಮ್ಯಾರೀಡ್’ ಶೀರ್ಷಿಕೆಯ ಚಿತ್ರವನ್ನೂ ಸಹ ಅವರು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ಈಗ ರಾಮ್ ಚರಣ್ – ಧೋನಿ ಭೇಟಿ ಇಬ್ಬರ ಅಭಿಮಾನಿಗಳಲ್ಲೂ ಸಂತಸ ತಂದಿದೆ. Instagram​ನಲ್ಲಿ ಫೋಟೋ ಪೋಸ್ಟ್ ಮಾಡಿರುವ ರಾಮ್ ಚರಣ್, ‘ಧೋನಿಯನ್ನು ಭೇಟಿ ಮಾಡಿದ್ದು ಖುಷಿ ಎನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ‘ಇಬ್ಬರು ಗೇಮ್ ಚೇಂಜರ್​ಗಳು’ ಎಂದು ಕಮೆಂಟ್ ಮಾಡಿದ್ದಾರೆ. ರಾಮ್ ಚರಣ್ ಅವರು ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆ ಬಳಿಕ ಅವರು ಯಾರ ಜೊತೆ ಕೈ ಜೋಡಿಸುತ್ತಾರೆ ಎನ್ನುವ ಕುತೂಹಲ ಇದೆ. ರಾಮ್ ಚರಣ್ ಮುಂದಿನ ಚಿತ್ರಕ್ಕೆ ಧೋನಿ ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದಾರೋ ಅಥವಾ ಇದೊಂದು ಸಹಜ ಭೇಟಿಯೋ ಎನ್ನುವ ಬಗ್ಗೆ ಇವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

LEAVE A REPLY

Connect with

Please enter your comment!
Please enter your name here