ಸಮೀರ್‌ ಸಕ್ಸೇನಾ ಮತ್ತು ಅಮಿತ್‌ ಗೋಲಾನಿ ನಿರ್ದೇಶನದ ‘ಕಾಲಾ ಪಾನಿ’ ಹಿಂದಿ ಸರಣಿ ಟೀಸರ್‌ ಬಿಡುಗಡೆಯಾಗಿದೆ. Netflix Originalsನ ಈ ಸರಣಿಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯೊಂದರ ಕುರಿತಾಗಿದೆ. ಅಕ್ಟೋಬರ್‌ 19ರಿಂದ ಸರಣಿ ಸ್ಟ್ರೀಮ್‌ ಆಗಲಿದೆ.

ಸಮೀರ್ ಸಕ್ಸೇನಾ ಮತ್ತು ಅಮಿತ್ ಗೋಲಾನಿ ನಿರ್ದೇಶನದ ‘ಕಾಲಾ ಪಾನಿ’ ಹಿಂದಿ ವೆಬ್‌ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಸರಣಿಯನ್ನು ಬಿಸ್ವಪತಿ ಸರ್ಕಾರ್‌, ಅಮಿತ್‌ ಗೋಲಾನಿ, ಸಂದೀಪ್‌ ಸಂಕೇತ್ ನಿಮಿಷಾ ಮಿರ್ಶಾ ರಚಿಸಿದ್ದು, ಸಮೀರ್ ಸಕ್ಸೇನಾ ಮತ್ತು ಅಮಿತ್ ಗೋಲಾನಿ ನಿರ್ದೇಶಿಸಿದ್ದಾರೆ. Netflix Originalsನ ಈ ಸರಣಿಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯೊಂದರ ಕುರಿತಾಗಿದೆ. ಟೀಸರ್‌ನಲ್ಲಿ ಒಂದು ವಿಚಿತ್ರ ಕಾಯಿಲೆಯು ಇಡೀ ದ್ವೀಪವನ್ನು ಆವರಿಸಿಕೊಂಡಾಗ ಏನಾಗುತ್ತದೆ. ಹಾಗೂ ಅದರಿಂದ ಸೃಷ್ಠಿಯಾಗುವ ಭಯ ಮತ್ತು ಅವ್ಯವಸ್ಥೆಯ ಪರಿಸ್ಥಿತಿ, ಸಾವಿನ ಪ್ರಮಾಣದ ದೃಶ್ಯಗಳು ಮೂಡಿಬಂದಿದೆ.

ದ್ವೀಪಗಳಲ್ಲಿ ವಾಸಿಸುವ ಅನೇಕ ಜನರು ಈ ವಿಚಿತ್ರ ಈ ಕಾಯಿಲೆಗೆ ಸಿಲುಕಿ ನರಳುತ್ತಿರುತ್ತಾರೆ. ಅವರಿಗೆ ಸೂಕ್ತ ವೈದ್ಯಕೀಯ ಸಹಾಯ ದೊರೆಯುತ್ತಿರುವುದಿಲ್ಲ. ಆ ಕಾಯಿಲೆ ಅಂಟು ಜಾಡ್ಯವಾದ್ದರಿಂದ ಅಂಡಮಾನ್‌ ನಿಕೋಬಾರ್‌ ದ್ವೀಪಗಳಿಗೆ ಬರುವ ಅನೇಕ ಪ್ರವಾಸಿಗರಿಗೂ ಹರಡುತ್ತಿರುತ್ತದೆ. ಈ ಕಾಯಿಲೆಯ ವಿರುದ್ದ ನಡೆಯುವ ಮನುಷ್ಯನ ಹೋರಾಟವೇ ಈ ಸರಣಿಯ ಕಥಾಸಾರ. ಮೋನಾ ಸಿಂಗ್, ಅಶುತೋಷ್ ಗೋವಾರಿಕರ್, ಅಮೇ ವಾಘ್, ಸುಕಾಂತ್ ಗೋಯೆಲ್, ವಿಕಾಸ್ ಕುಮಾರ್, ಅರುಷಿ ಶರ್ಮಾ, ರಾಧಿಕಾ ಮೆಹ್ರೋತ್ರಾ, ಚಿನ್ಮಯ್ ಮಾಂಡ್ಲೇಕರ್, ಪೂರ್ಣಿಮಾ ಇಂದ್ರಜಿತ್ ಸರಣಿಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Posham Pa Pictures ಬ್ಯಾನರ್‌ ನಿರ್ಮಿಸಿರುವ ಸರಣಿಯು ಅಕ್ಟೋಬರ್‌ 19ರಿಂದ Netflixನಲ್ಲಿ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here